ಸೋನಿಯಾ ಕ್ಷೇತ್ರ ರಾಯ್‍ಬರೇಲಿಯಲ್ಲಿ ಮೋದಿ ರ‍್ಯಾಲಿ ವಿಪಕ್ಷಗಳ ವಿರುದ್ದ  ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

modiರಾಯ್‍ಬರೇಲಿ(ಪಿಟಿಐ),ಡಿ.16-ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನ ಕಾಂಗ್ರೆಸ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್‍ಬರೇಲಿ ಕ್ಷೇತ್ರವನ್ನು ಈ ಹಿಂದೆ ಆಡಳಿತ ನಡೆಸಿದವರು ಮರೆತಿದ್ದರು. ಆದರೆ ನಮ್ಮ ಸರ್ಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ಘೋಷಿಸಿದರು.

ರಾಯ್‍ಬರೇಲಿಯಲ್ಲಿ 1100 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮಾತನಾಡಿದರು. ಅತ್ಯಾಧುನಿಕ ರೈಲ್ವೆ ಕೋಚ್ ಕಾರ್ಖಾನೆ ಆರಂಭಕ್ಕೆ 2007ರಲ್ಲೇ ಹಸಿರು ನಿಶಾನೆ ಸಿಕ್ಕಿತ್ತು. ಆದರೆ ಇದುವರೆಗೂ ಪ್ಯಾಕ್ಟರಿ ಆರಂಭಗೊಂಡಿರಲಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದವರ ಬೇಜಾವಬ್ದಾರಿತನಕ್ಕೆ ಇದೇ ಸಾಕ್ಷಿ ಎಂದರು.ತಮ್ಮ ಭಾಷಣದುದ್ದಕ್ಕೂ ವಿರೋಧ ಪಕ್ಷಗಳ ವಿರುದ್ಧ ತಮ್ಮ ಮೊನಚು ಮಾತುಗಳಿಂದ ಹರಿಹಾಯ್ದ ಪ್ರಧಾನಿಗಳು, ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೆಸರಳು ಹೇಳಲಿಲ್ಲ. ರಾಯ್‍ಬರೇಲಿಯ ಇಂದಿನ ಚಿತ್ರಣವನ್ನು ಬದಲಾಯಿಸಿ ಇಡೀ ಜಿಲ್ಲೆಗೆ ಆಧುನಿಕತೆಯ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಮೋದಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಮಾರ್ಡನ್ ಕೋಚ್ ಫ್ಯಾಕ್ಟರಿಯಿಂದ ತಯಾರಿಸಲಾದ 900 ರೈಲ್ವೆ ಕೋಚ್‍ಗಳಿಗೂ ಹಸಿರುನಿಶಾನೆ ತೋರಿದರು.

Facebook Comments