ಕುಂಭಮೇಳಕ್ಕೆ 800 ಹೆಚ್ಚುವರಿ ರೈಲು ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

varnasiಲಖ್ನೋ,ಡಿ.16-ಇತಿಹಾಸ ಪ್ರಸಿದ್ದ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲ್ವೆ ಇಲಾಖೆ 800 ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ. ಈ ಬಾರಿಯ ಕುಂಭಮೇಳಕ್ಕೆ ಅಪಾರ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗಾಗಿ ವಿವಿಧ ರೈಲು ನಿಲ್ದಾಣಗಳಲ್ಲಿ 800 ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ರೈಲ್ವೆ ಸಂಪರ್ಕಾಧಿಕಾರಿ ಅಮಿತ್ ಮಲ್ವಿಯ ತಿಳಿಸಿದ್ದಾರೆ. ಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಯಾತ್ರಿಕರು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದು, ಒಟ್ಟು 6 ವಿಶೇಷ ರೈಲುಗಳಿಂದ ಪ್ರಯಾಣದ ಮೂಲಕ ಅಲಹಾಬಾದ್‍ಗೆ ಬಂದುಳಿಯಲಿದ್ದಾರೆ.

ಜನವರಿಯಲ್ಲಿ ವಾರಣಾಸಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್‍ನಲ್ಲಿ ಪಾಲ್ಗೊಳ್ಳಲು ಅಲಹಾಬಾದ್‍ನಿಂದ ದೆಹಲಿಗೆ ತೆರಳುವ 5000ಕ್ಕೂ ಹೆಚ್ಚು ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕೈದು ವಿಶೇಷ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಭೋಗಿಗಳನ್ನು ಕುಂಭಮೇಳಕ್ಕೆ ಸಂಬಂಧಿಸಿದ ಆಕರ್ಷವಾದ ಬಣ್ಣಬಣ್ಣ ಚಿತ್ರಗಳು, ದೇಶದ ಸಾಂಸ್ಕøತಿಕ ಮತ್ತು ಧಾರ್ಮಿಕತೆಯ ಬಗ್ಗೆ ಸಾರುವ ಸಂದೇಶಗಳನ್ನು ಅಳವಡಿಸಲಾಗುತ್ತಿದೆ.

ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಉತ್ತರ ಕೇಂದ್ರ ವಲಯದಲ್ಲಿ ಪ್ರಯಾಣಿಕರಿಗಾಗಿ ಕಲೆ ಮತ್ತು ಸಂಸ್ಕøತಿ ಹಾಗೂ ಅಲಹಾಬಾದ್ ನಗರದ ವಿಶೇಷತೆಗಳನ್ನೊಳಗೊಂಡ ವಿವಿಧ ವಸ್ತುಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಅಮಿತ್ ಮಲ್ವಿಯ ತಿಳಿಸಿದ್ದಾರೆ.
ಮೇಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಎಲ್‍ಸಿಡಿ ಟಿವಿ, ಸಿಸಿ ಕ್ಯಾಮೆರಾಗಳನ್ನನ್ನು ಅಳವಡಿಸಲಾಗಿದೆ.

Facebook Comments