ಎಲೆಕ್ಟ್ರಾನಿಕ್ ಸಿಟಿ ತೂಗುಸೇತುವೆ ಸಂಚಾರ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

Electronic Cityಬೆಂಗಳೂರು,ಡಿ.17- ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲಿನ ರಸ್ತೆ ಮತ್ತು ಜಾಯಿಂಟ್‍ಗಳ ನಿರ್ವಹಣೆ ಹಾಗೂ ಪಾತ್‍ಹೋಲ್ ನಿರ್ವಹಣೆ ಹಿನ್ನೆಲೆ ಇಂದು ಸಂಜೆ 6 ಗಂಟೆಯ ಬಳಿಕ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಎಲಿವೇಟೆಡ್ ಟೋಲ್ ವೇ ಸಂಸ್ಥೆ ತಿಳಿಸಿದೆ. ಕಾರು, ಬೈಕ್ ಸೇರಿದಂತೆ ಲಘು ವಾಹನಗಳ ಸಂಚಾರ ಎಂದಿನಂತಿದ್ದು, ಮರಳು ಮತ್ತು ಸಿಮೆಂಟ್ ಲಾರಿಗಳು, ದೊಡ್ಡ ಟ್ರಕ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್‍ಬೋರ್ಡ್‍ಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಸೇತುವೆ ನಿರ್ಮಾಣಗೊಂಡು 8 ವರ್ಷಗಳು ಕಳೆದಿರುವ ಹಿನ್ನೆಲೆ ಸಂಸ್ಥೆ ನಿರ್ವಹಣೆಗೆ ಮುಂದಾಗಿದೆ.

Facebook Comments