ಧರ್ಮೇಗೌಡ ಉಪಸಭಾಪತಿ

ಈ ಸುದ್ದಿಯನ್ನು ಶೇರ್ ಮಾಡಿ

darmegwodaಬೆಳಗಾವಿ,ಡಿ.18-ವಿಧಾನಪರಿಷತ್‍ನ ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್‍ನಿಂದ ಧರ್ಮೇಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಧರ್ಮೇಗೌಡ ಅವರು ವಿಧಾನಪರಿಷತ್‍ನ ಕಾರ್ಯದರ್ಶಿ ಮಹಾಲಕ್ಷ್ಮಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಧರ್ಮೇಗೌಡ ಅವರಿಗೆ ಸೂಚಕರಾಗಿ ಜೆಡಿಎಸ್‍ನ ಭೋಜೇಗೌಡ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಬಸವರಾಜ್ ಹೊರಟ್ಟಿ ಅವರು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಧರ್ಮೆಗೌಡ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಈ ಹಿಂದೆ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ಹಾಗೂ ಅಪ್ಪಾಜಿಗೌಡ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಧರ್ಮೇಗೌಡರಿಗೆ ಅವಕಾಶ ಕಲ್ಪಿಸಿದೆ. ಈ ಮೂವರಲ್ಲಿ ಯಾರನ್ನೇ ಉಪಸಭಾಪತಿ ಮಾಡಿದರೆ ಅಸಮಾಧಾನ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಧರ್ಮೇಗೌಡರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಬಸವರಾಜ್ ಹೊರಟ್ಟಿ ಮಾತನಾಡಿ, ರಾಜಕಾರಣವೇ ಹೀಗೆ. ಇಲ್ಲಿ ಕೊನೆ ಕ್ಷಣದವರೆಗೂ ಏನೇ ಬೇಕಾದರೂ ಬದಲಾವಣೆಯಾಗುತ್ತದೆ. ಅಂತಿಮವಾಗಿ ನಾವೆಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಬೇಕೆಂದು ಹೇಳಿದರು.
ಮೊನ್ನೆ ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಒಲಿಯಿತು. ಇದೇ ರೀತಿ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ ಹಾಗೂ ಅಪ್ಪಾಜಿಗೌಡ ಅವರ ಹೆಸರುಗಳಿದ್ದವು. ಕೊನೆ ಕ್ಷಣದಲ್ಲಿ ಧರ್ಮೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಹೀಗೆ ರಾಜಕಾರಣದಲ್ಲಿ ಕೆಲವು ಬಾರಿ ದಿಢೀರನೆ ಬದಲಾವಣೆಯಾಗುತ್ತವೆ ಎಂದರು.

Facebook Comments