ನಗರದಲ್ಲಿ ದೇಗುಲಕ್ಕೆ ಭಕ್ತ ಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

t02ಬೆಂಗಳೂರು, ಡಿ.18-ನಗರದ ಬಹುತೇಕ ದೇವಾಲಯಗಳು ಸರ್ವಾಲಂಕೃತ ಗೊಂಡಿವೆ.ಎಲ್ಲಾ ದೇವಾಲಯಗಳಲ್ಲೂ ವೈಕುಂಠ ದ್ವಾರ ನಿರ್ಮಾಣವಾಗಿದೆ.
ಇಂದು ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ವೈಕುಂಠ ದ್ವಾರ ಪ್ರವೇಶದ ಮೂಲಕ ಶ್ರೀನಿವಾಸನ ದರ್ಶನ ಪಡೆದು ಪುನೀತರಾದರು.
ವೈಕುಂಠ ಏಕಾದಶಿ ಪ್ರಯುಕ್ತ ಇಂದು ಕೋಟೆ ವೆಂಕಟ ರಮಣ ದೇವಾಲಯ, ರಾಜಾಜಿನಗರ 5ನೆ ಬ್ಲಾಕ್‍ನಲ್ಲಿರುವ ಕೈಲಾಸ ವೈಕುಂಠ ದೇವಾಲಯ, ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ವೆಂಕಟೇಶ್ವರ ದೇವಾಲಯ, ಆಂಜನೇಯ ದೇವಾಲಯ, ರೈಲ್ವೆ ಕಾಲೋನಿಯ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯ, ಪ್ರತಿಷ್ಠಿತ ಇಸ್ಕಾನ್ ದೇವಾಲಯ, ವಿಶ್ವೇಶ್ವರಪುರಂನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯ, ಗೋವಿಂದರಾಜನಗರದ ಗೋವಿಂದರಾಜ ಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿಂದು ವೈಕುಂಠ ಏಕಾದಶಿಯ ವಿಶೇಷ ಪೂಜೆ ನೆರವೇರಿತು.
ಏಕಾದಶಿ ಬಂತೆಂದರೆ ವಿಷ್ಣು ದೇವಾಲಯ ಗಳು ಅಲಂಕಾರಗಳಿಂದ ಕಂಗೊಳಿಸುತ್ತವೆ. ಮುಂಜಾನೆ 3 ಗಂಟೆಯಿಂದಲೇ ದೇವಾಲಯಗಳಲ್ಲಿ ಭಕ್ತರ ಸರತಿ ಸಾಲು ಕಂಡು ಬಂತು. ವಿಷ್ಣುವಿನ ದರ್ಶನ ಪಡೆದು ಜನ ತೆರಳುತ್ತಿದ್ದರು. ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವೈಕುಂಠ ಏಕಾದಶಿಯಂದು ಶ್ರೀನಿವಾಸ ಎಂದರೆ ವೆಂಕಟರಮಣನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ವೈಕುಂಠದ ಬಾಗಿಲು ತೆಗೆಯಲಾಗುತ್ತದೆ. ವೆಂಕಟೇಶ್ವರನನ್ನು ಕಲಿಯುಗದ ದೇವರು, ವಿಷ್ಣುವಿನ ಅವತಾರ ಎಂದು ನಂಬುತ್ತಾರೆ. ಹಾಗಾಗಿ ವೈಕುಂಠ ಏಕಾದಶಿಯಂದು ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಬಂದವರಿಗೆ ಸಾಕ್ಷಾತ್ ವೈಕುಂಠಕ್ಕೆ ಹೋಗಿ ಬಂದಷ್ಟು ಪುಣ್ಯ ಲಭಿಸುತ್ತದೆ. ಇದು ಹಿಂದಿನಿಂದಲೂ ಬಂದಿರುವ ಆಚರಣೆ. ಹಾಗಾಗಿ ಆಸ್ತಿಕ ಭಕ್ತರು ಇಂದು ದೇವಾಲಯ ಗಳಿಗೆ ಭೇಟಿ ನೀಡಿ ವಿಷ್ಣುವಿನ ದರ್ಶನ ಪಡೆಯುತ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಪ್ರಾರಂಭವಾಗುವ ದರ್ಶನ ರಾತ್ರಿ 12ರವರೆಗೂ ಇರುತ್ತದೆ. ವಿಶೇಷವಾಗಿ ಕೋಟೆ ವೆಂಕಟರಮಣ ದೇವಾಲಯ, ರಾಜಾಜಿನಗರದ ಕೈಲಾಸ ವೆಂಕಟೇಶ್ವರ ದೇವಾಲಯಗಳಲ್ಲಿ ಅತ್ಯಂತ ವಿಶೇಷ ಪೂಜೆ ನೆರವೇರಿಸಲಾಗುವುದು.
ಅಭಿಷೇಕ, ನೈವೇದ್ಯ, ಉತ್ಸವ ಮೂರ್ತಿ ಮೆರವಣಿಗೆ ಮುಗಿದ ಮಹಾನೈವೇದ್ಯ ಪ್ರಸಾದ ವಿನಿಯೋಗ ನಡೆಯುತ್ತದೆ. ಹಲವು ಭಕ್ತರು ಹರಕೆ ರೂಪದಲ್ಲಿ ಪ್ರಸಾದವನ್ನು ವಿತರಿಸುತ್ತಿದ್ದರು.

t01 tep t04

Facebook Comments