ಆಧಾರ್‍ ಗಾಗಿ ಜನರನ್ನು ಪೀಡಿಸಿದರೆ 1 ಲಕ್ಷ ದಂಡ, ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

aadhar card01ನವದೆಹಲಿ, ಡಿ.19- ಟೆಲಿಕಾಂ ಕಂಪನಿಗಳು ಮತ್ತು ಬ್ಯಾಂಕುಗಳು ಗ್ರಾಹಕರ ಗುರುತಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕೆಂದು ಪೀಡಿಸಿದರೆ ಅಂಥ ಸಿಬ್ಬಂದಿ 1 ಲಕ್ಷ ರೂ. ಜುಲ್ಮಾನೆ ಮತ್ತು ಮೂರದಿಂದ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ…! ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವ ತಿದ್ದುಪಡಿಗಳಲ್ಲಿ, ನಿಯಮಗಳನ್ನು ಉಲ್ಲಂಘಿಸುವÀ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಗ್ರಾಹಕರು ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ತೆರೆಯುವಾಗ ಅಥವಾ ಮೊಬೈಲ್ ಪೋನ್ ಸಂಪರ್ಕಕ್ಕಾಗಿ ಕೋರುವಾಗ ಪಡಿತರ ಚೀಟಿ ಅಥವಾ ಪಾಸ್‍ಪೋರ್ಟ್‍ಗಳನ್ನು ಗುರುತಿನ ಪತ್ರವಾಗಿ ಪರಿಗಣಿಸಬಹುದು. ಇದರ ಬದಲಿಗೆ ಆಧಾರ್ ಕಾರ್ಡ್ ಬೇಕೇ ಬೇಕು ಎಂದು ಪೀಡಿಸಿದರೆ ಅಂಥ ಸಿಬ್ಬಂದಿಗೆ 1 ವರ್ಷ ಜೈಲು ಮತ್ತು 3-10 ವರ್ಷ ಕಾರಾಗೃಹ ಶಿಕ್ಷೆ ವಿಧಿಸುವ ತಿದ್ದುಪಡಿ ಪ್ರಸ್ತಾವನೆಗೆ ಕೇಂದ ಸಂಪುಟ ಸಮ್ಮತಿ ನೀಡಿದೆ.
ಅಗತ್ಯದ ಸಂದರ್ಭಗಳಲ್ಲಿ ವಿಶಿಷ್ಟ ಗುರುತಿನ ಚೀಟಿಗಳನ್ನು ಬಳಸಲು ಗ್ರಾಹಕರಿಗೆ ಐಚ್ಚಿಕ ಸ್ವಾತಂತ್ರ್ಯವನ್ನು ಈ ತಿದ್ದುಪಡಿಯಲ್ಲಿ ನೀಡಲಾಗಿದೆ.
ಬ್ಯಾಂಕ್ ಖಾತೆಗಳನ್ನು ತೆರೆಯಲು ಅಥವಾ ಮೊಬೈಲ್ ಪೋನ್ ಸಂಪರ್ಕ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿದೆ.

Facebook Comments