ಖ್ಯಾತ ವಿಜ್ಞಾನಿ ಎಸ್.ಪ್ರದೀಪ್ ರವರನ್ನು ಸ್ಮರಿಸೋಣ 22ಕ್ಕೆ ಕೊಪ್ಪಕ್ಕೆ ಬನ್ನಿ

ಈ ಸುದ್ದಿಯನ್ನು ಶೇರ್ ಮಾಡಿ

PRADIPಚಿಕ್ಕಮಗಳೂರು, ಡಿ.19- ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪಿಎಚ್‍ಡಿ ಪದವಿ ಪಡೆದು ಸಂಶೋಧನಾ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿ ಅಮೆರಿಕದಲ್ಲಿ ವಿಜ್ಞಾನಿಯಾಗಿ ಅಧ್ಯಯನ ನಡೆಸಿ ಹೆಸರು ಗಳಿಸಿ ಸದಾ ತಾಯ್ನಾಡಿನ ನೆಲ-ಸಂಸ್ಕøತಿ ಬಗ್ಗೆ ಒಲವು ಹೊಂದಿ ಅಕಾಲಿಕ ಮರಣಕ್ಕೀಡಾದ ಡಾ.ಹಿರೇತೋಟ ಎಸ್.ಪ್ರದೀಪ್ ಸ್ಮರಣಾರ್ಥ ಡಿ.22ರಂದು ಪ್ರದೀಪ ಪುರಸ್ಕಾರ ಅಭಿ ನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಾಸಾಪುರ ಸುಜನಾ ಟ್ರಸ್ಟ್ ಹಾಗೂ ಕೊಪ್ಪ-ತೆನೆ ಸಹಯೋಗದಲ್ಲಿ ಕೊಪ್ಪದ ಕನ್ನಡ ಭವನದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಉದ್ಘಾಟನೆಯನ್ನು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ನೆರವೇರಿಸಲಿದ್ದು, ಟ್ರಸ್ಟ್ ಅಧ್ಯಕ್ಷರಾದ ಎಂ.ಆರ್.ಸುರೇಶ್ ಮೇಗೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಚಿಂತಕ, ಸಾಹಿತಿ, ವಿಮರ್ಶಕರಾದ ರೆಹಮತ್ ತರೀಕೆರೆ, ರಂಗಕರ್ಮಿ ರಮೇಶ್ ಬೇಗಾರ್ ಅವರಿಗೆ ಪ್ರದೀಪ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಶೃಂಗೇರಿ ಶಾಸಕರಾದ ಜಿ.ಟಿ.ರಾಜೇಗೌಡ, ಸಾಮಾಜಿಕ ಮುಖಂಡರಾದ ಎಚ್.ಬಿ.ರಾಜಗೋಪಾಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಡಾ.ಪ್ರಕಾಶ್ ಹಿರೇತೋಟ, ಡಾ.ವಿಶ್ವಾಮಿತ್ರ ಹಳೆಕೋಟೆ, ರಾಮನ್ ಪಾರ್ಥಸಾರಥಿ, ಬೆಂಗಳೂರು ಉದ್ಯಮಿ ರವಿಗೌಡ ಪಾಲ್ಗೊಳ್ಳಲಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಹಿರೇತೋಟದ ಶ್ರೀನಿವಾಸಯ್ಯ-ಶಾರದಮ್ಮ ದಂಪತಿಗಳ ಮಗನಾದ ಪ್ರದೀಪ್, ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ಬಿಎಫ್‍ಎಸ್‍ಸಿ-ಎಂಎಫ್‍ಎಸ್‍ಸಿ ಪದವಿಯನ್ನು ಮಂಗಳೂರು ಫಿಶರಿಸ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ ಸಂಶೋಧನಾ ಕೇಂದ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಅಮೆರಿಕದ ಮಿಲ್ವಾಕಿ ನಗರದಲ್ಲಿ ವಾಸವಾಗಿದ್ದ ಅವರು ಕನ್ನಡ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದರು. ಅವರ ಕನ್ನಡದ ಮನಸ್ಸು ನಾಡಿನ ನೆಲ-ಸಂಸ್ಕøತಿ ಬಗ್ಗೆ ಸದಾ ಧ್ಯಾನಿಸುತ್ತಿತ್ತು. ಕಳೆದ ಸಾಲಿನಲ್ಲಿ ಅಕಾಲಿಕ ಮರಣಕ್ಕೀಡಾದರು. ಅವರ ಮರೆಯಲಾಗದ ನೆನಪನ್ನು ಸ್ಮರಿಸಲು ಅವರ ಗೆಳೆಯರ ಬಳಗ ಈ ಕಾರ್ಯಕ್ರಮ ಆಯೋಜಿಸಿದೆ. ಎಂದು ಟ್ರಸ್ಟ್ ಅಧ್ಯಕ್ಷ ಎಂ.ಆರ್.ಸುರೇಶ್ ತಿಳಿಸಿದ್ದಾರೆ.

Facebook Comments