ಭಾರತದ ಕೀರ್ತಿ ಪತಾಕೆ ಹಾರಿಸಿದ ಯುವ ವಿಜ್ಞಾನಿ ಪ್ರತಾಪ್

ಈ ಸುದ್ದಿಯನ್ನು ಶೇರ್ ಮಾಡಿ

mmಮಳವಳ್ಳಿ, ಡಿ.19- ಭಾರತದ ಕೀರ್ತಿ ಪತಾಕೆ ಹಾರಿಸಿದ ಯುವ ವಿಜ್ಞಾನಿ ಪ್ರತಾಪ್ ಸಾಧನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಕಳೆದ ವರ್ಷ ಜಪಾನ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ರೋಬೋಟಿಕ್ ವಸು ್ತಪ್ರದರ್ಶನದಲ್ಲಿ ಚಿನ್ನದ ಪದಕ , ಒಂದು ಬೆಳ್ಳಿ ಪದಕದೊಂದಿಗೆ 10 ಸಾವಿರ ಅಮೆರಿಕನ್ ಡಾಲರ್ ಬಹುಮಾನ ಹಾಗೂ ವಿಶ್ವದ 120 ದೇಶಗಳ ಪ್ರತಿನಿಧಿಗಳು ಸ್ಪರ್ಧಿಸಿದ್ದ ಜರ್ಮನಿ ದೇಶದಲ್ಲಿ ಜೂ.11ರಿಂದ ಜೂ.15ರವರೆಗೆ ನಡೆದ ವಿಶ್ವ ಸಿಇಬಿಐಟಿಯ ಕಪೋಟರ್ ಎಕ್ಸ್ ಪೋದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಆಲ್ಬರ್ಟ್ ವನ್‍ಸ್ಟ್ಯನ್ ಇನೋವೇಷನ್ ಪುರಸ್ಕಾರ ಪಡೆದಿದೆ.
ತಾಲ್ಲೂಕಿನ ನೆಟ್ಕಲ್ ಎಂಬ ಕುಗ್ರಾಮದ ಬಡ ರೈತ ಮರಿಮಾದಯ್ಯನ ಪುತ್ರ ಯುವ ವಿಜ್ಞಾನಿ ಪ್ರತಾಪ್ ರಿಯಲ್ ಸ್ಟಾರ್ ಎನಿಸಿದ್ದಾರೆ.
ತಾಲ್ಲೂಕಿನ ನೆಟ್ಕಲ್ ಗ್ರಾಮದ ರೈತ ಮರಿ ಮಾದಯ್ಯಎಂಬವರು ಪುತ್ರನಾದ ಪ್ರತಾಪ್ ದೇಶದ ರಕ್ಷಣೆಗೆ ಸಹಕಾರಿಯಾಗುವಂತೆ ಆತ್ಯಾಧುನಿಕ ತಂತ್ರಜ್ಞಾನ ದ್ರೋಣ್ ಕ್ಯಾಮರವನ್ನು ಅವಿಷ್ಕಾರ ಮಾಡಿ ಹೊಸ ದಾಖಲೆ ಸ್ಟಷ್ಟಿಸಿಗೆ ಕಾರಣವಾಗಿದ್ದಾನೆ.

ವಿಮಾನಗಳಲ್ಲಿ ಬಳಸುವ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಾಪ್ ಆವಿಷ್ಕರಿಸಿದ ಆಟೋ ಪೈಲೆಟೆಡ್ ಡ್ರೋನ್ ಸಾಧನೆವನ್ನು ಕೃಷಿ ವೈದ್ಯಕೀಯ ರಕ್ಷಣಾ ಕ್ಷೇತ್ರ ತುರ್ತು ಸಂದರ್ಭದಲ್ಲಿ ಮೀನುಗಾರರು ಕಾಣೆಯಾದಾಗ ಉಗ್ರ ಶಂಕಿತರ ಪತ್ತೆಗೆ ಅಪರಾಧ ಪ್ರಕರಣ ಪತ್ತೆಗೆ ಭೂಕಂಪ ಚಂಡಮಾರುತ ವಿಶ್ಲೇಷಣೆಗೆ ಗಡಿ ಪ್ರದೇಶಗಳ ಕಾರ್ಯಾಚರಣೆಗೆ ಇದು ಸಹಕಾರಿಯಾಗಲಿದೆ.
ಫ್ರಾನ್ಸ್ ದೇಶದ ಸಹಕಾರ: ಈಗಾಗಲೇ ವಿಶ್ವಮಟ್ಟದ ವಸ್ತುಪ್ರದರ್ಶನಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ನಗದು ಬಹುಮಾನ ಸೇರಿದಂತೆ ವಿಶ್ವಮಟ್ಟದಲ್ಲಿ ಭರಪೂರ ಪುರಸ್ಕಾರ ಪಡೆದ ಈತನಿಗೆ ಫ್ರಾನ್ಸ್ ದೇಶ ಹೆಚ್ಚಿನ ಸಹಕಾರ ನೀಡಿ ಹೊಸ ಸಂಶೋಧನೆಗೆ ಅವಕಾಶ ನೀಡಿ ಪೋತ್ಸಾಹ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಾಲ್ಯದ ಜೀವನ: ಶೈಕ್ಷಣಿಕ ಹಂತದಲ್ಲಿ ಈತನ ಶಿಸ್ತು ಸಂಯಮ ಸಮಯ ಪ್ರe್ಞ ಆತ್ಮವಿಶ್ವಾಸವೇ ಇಂದು ಪ್ರಪಂಚದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಈತನ ಸಾಧನೆ ಯುವ ಪೀಳಿಗೆಗೆ ಮಾದರಿ ಎನ್ನಬಹುದು.
10ನೇ ತರಗತಿವರೆಗೆ ರೋಟರಿ ಶಾಲೆಯಲ್ಲಿ ಹಾಗೂ ಕೆ.ಎಂ.ದೊಡ್ಡಿ ಭಾರತಿ ಕಾಲೇಜಿನ ಪಿಯುಸಿ ಪರೀಕ್ಷೆ ಮುಗಿಸಿ ನಂರ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿನ ಜೆಎಸ್‍ಎಸ್ ಕಾಲೇಜಿಗೆ ಬಿಎಸ್ಸಿಗೆ ಸೇರಿದ ಈತನಿಗೆ ಸುತ್ತೂರು ಶ್ರೀಗಳ ಸಹಕಾರ ಇಂದು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ.

ಮಗನ ಸಂಶೋಧನೆಗೆ ಹಣವಿಲ್ಲದೆ ತೊಂದರೆಯಾದಾಗ ಪ್ರತಾಪ್ ತಾಯಿ ತನ್ನ ಕತ್ತಿನಲ್ಲಿದ್ದ ತಾಳಿಯನ್ನೆ ಬಿಚ್ಚಿ ಕೊಟ್ಟದ್ದು ಹಾಗೂ ಬಿಎಸ್ಸಿಗೆ ಸೇರಿಸಲು ಜಮೀನು ಮಾರಿದ ತಂದೆ ಮಗನ ಸಾಧನೆಗೆ ಬೆನ್ನಲುಬಾಗಿ ನಿಂತಿದ್ದಾರೆ.
ರಿಯಲ್ ಸ್ಟಾರ್ ಪ್ರತಾಪ್:ಪ್ರತಾಪ್ ಸಾಧನೆ ಮೆಚ್ಚುಗೆ ವ್ಯಕ್ತಪಡಿಸಿದ ಜೀ ಮಾಧ್ಯಮ ಸಂಸ್ಥೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪ್ರತಾಪ್ ಜೀವನ ಕಥೆಯನ್ನು ಹೇಳುವ ಮೂಲಕ ರಿಯಲ್ ಸ್ಟಾರ್ ಪ್ರಶಸ್ತಿ ನೀಡಿರುವುದು ತಾಲ್ಲೂಕಿಗೆ ಹೆಮ್ಮೆಯಾಗಿದೆ.

Facebook Comments