21ರಿಂದ ವಾಜಪೇಯಿ ಕಪ್ ವಾಲಿಬಾಲ್ ಟೂರ್ನಿ..

ಈ ಸುದ್ದಿಯನ್ನು ಶೇರ್ ಮಾಡಿ

Vajpayeeಬೆಂಗಳೂರು, ಡಿ.19- ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಇದೇ 21ರಿಂದ 25ರವರೆಗೆ 17ನೇ ವರ್ಷದ ಪುರುಷ, ಮಹಿಳೆಯರ ರಾಜ್ಯಮಟ್ಟದ ಪ್ರತಿಷ್ಠಿತ ಹೊನಲು ಬೆಳಕಿನ ವಾಜಪೇಯಿ ಕಪ್ ವಾಲಿಬಾಲ್ ಟೂರ್ನಿಯನ್ನು ಶಂಕರಮಠ ವೃತ್ತದ ವಿವೇಕಾನಂದ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ಹರೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್‍ಸಿಂಗ್ ರಾಥೋಡ್ ಹಾಗೂ ಮೇಯರ್ ಗಂಗಾಂಬಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಕಳೆದ 16 ವರ್ಷಗಳಿಂದ ಈ ಟೂರ್ನಿಯನ್ನು ಅತ್ಯಂತ ಅದ್ಧೂರಿಯಾಗಿ ನಡೆಸುಕೊಂಡು ಬರುತ್ತಿದ್ದು, ಇದಕ್ಕೆ ಎಲ್ಲಾ ಕ್ರೀಡಾ ಪ್ರೇಮಿಗಳ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಶಾಲಾ ಮಟ್ಟದಿಂದ ಈ ಪಂದ್ಯಾವಳಿಯನ್ನು ಆರಂಭಿಸಲಾಗಿದ್ದು, ದಕ್ಷಿಣ ವಲಯ ರಾಜ್ಯಮಟ್ಟದ ಟೂರ್ನಿ, ಅಖಿಲ ಭಾರತ ಮಟ್ಟದ ಟೂರ್ನಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ರಾಜ್ಯದ 10 ಪ್ರತಿಷ್ಠಿತ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಾ ವಿಭಾಗಗಳಡಿ ಉತ್ತಮ ಪ್ರದರ್ಶನ ತೋರಿರುವ ತಂಡಗಳು ಭಾಗವಹಿಸಲಿವೆ ಎಂದರು.
ಮಹಿಳಾ ವಿಭಾಗದಲ್ಲಿ 4 ಹಾಗೂ ಪುರುಷರ 6 ತಂಡಗಳು ಭಾಗವಹಿಸಲು ಅರ್ಹತೆ ಪಡೆದಿದ್ದು, ಪೆÇೀಸ್ಟಲ್ಸ್, ಎಲ್‍ಐಸಿ, ಜಿಂದಾಲ್, ಸ್ಟೀಲ್, ಬಿಎಸ್‍ಎನ್‍ಎಲ್, ಸಿಐಎಲ್, ಮಂಗಳೂರಿನ ಉಜಿರೆ, ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡಗಳು ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಡಿ.22ರಂದು ಸಂಜೆ ಶಾಸಕ ವಿ.ಸೋಮಣ್ಣ , 23ರಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, 25ರಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

Facebook Comments