ಉದ್ಯೋಗ ಕೊಡಿಸುವ ನೆಪದಲ್ಲಿ ಹೆಣ್ಣುಮಕ್ಕಳಿಗೆ ವಂಚನೆ: ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ್
ಸಾಂದರ್ಭಿಕ ಚಿತ್ರ್

ಬೆಂಗಳೂರು, ಡಿ.19- ಉದ್ಯೋಗ ಕೊಡಿಸುವ ಆಮಿಷಯೊಡ್ಡಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಉತ್ತರ ಭಾರತದ ನೀಲಂಶರ್ಮಾ (29) ಬಂಧಿತ ಮಹಿಳೆ.
ಈಕೆ ಬೇರೆ ಬೇರೆ ರಾಜ್ಯದ ಅಮಾಯಕ ಯುವತಿಯರಿಗೆ ಕೆಲಸ ಕೊಡಿಸುವುದಾಗಿ ಏಜೆಂಟರ ಮೂಲಕ ಮನೆಗೆ ಕರೆಸಿಕೊಂಡು ತನ್ನ ಪರಿಚಯವಿರುವವರ ಮೂಲಕ ವೇಶ್ಯಾವಾಟಿಕೆಗೆ ಇವರನ್ನು ತಳ್ಳಿ ಹಣ ಸಂಪಾದನೆ ಮಾಡುತ್ತಿದ್ದಳು.

ಕಾಮಾಕ್ಷಿಪಾಳ್ಯದ ವೃಷಭಾವತಿನಗರದಲ್ಲಿ ಬಾಡಿಗೆ ಮನೆಯನ್ನು ಪಡೆದು ಈ ದಂಧೆ ನಡೆಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ 6 ಸಾವಿರ ಹಣ,
ಮೊಬೈಲ್ ವಶಪಡಿಸಿಕೊಂಡು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Facebook Comments