ಮತ್ತೆ ತಲೆ ಎತ್ತಿದ ಮರಳು ಮಾಫಿಯಾ

ಈ ಸುದ್ದಿಯನ್ನು ಶೇರ್ ಮಾಡಿ

sandalಚಿತ್ರದುರ್ಗ, ಡಿ.24- ಜಿಲ್ಲೆಯಲ್ಲಿ ನೂತನ ಎಸ್‍ಪಿ ಅರುಣ್ ಅವರು ಅಧಿಕಾರ ವಹಿಸಿಕೊಂಡ ಕೂಡಲೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ದಾರೆ. ಕರ್ತವ್ಯಕ್ಕೆ ಹಾಜರಾದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜಿಲ್ಲೆಯ ಹಿರಿಯೂರಿನ ಮರಳು ಮಾಫಿಯಾ ನಡೆಯುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ಮರಳು ದಂಧೆಕೋರ ಹೆಡೆಮುರಿ ಕಟ್ಟಿ ರಾತ್ರೋರಾತ್ರಿ ಜೈಲಿಗೆ ಕಳುಹಿಸುವ ಮೂಲಕ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಕತ್ತಲಾಗುತ್ತಿದ್ದಂತೆ ಹೊಸದುರ್ಗ, ಹಿರಿಯೂರು, ಚಳ್ಳಕೆರೆ ವೇದಾವತಿ ನದಿ ದಡದ ಬಹುತೇಕ ಹಳ್ಳಿಗಳಲ್ಲಿ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಸದ್ದು ಗ್ರಾಮೀಣ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.ಅಲ್ಲದೆ, ನದಿಯ ಒಡಲನ್ನು ಬಗೆದು ಪ್ರತಿ ದಿನ ನೂರಾರು ಟನ್ ಮರಳನ್ನು ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಸಾಗಿಸುತ್ತಿದ್ದರಿಂದ ನದಿಯ ಪಕ್ಕದ ಬೋರ್ ವೆಲ್‍ಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಆಹಾಕಾರ ಉಂಟಾಗಿತ್ತು.

ಹಲವಾರು ಬಾರಿ ಈ ಬಗ್ಗೆ ರೈತರು ಪ್ರತಿಭಟಿಸಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ನೂತನವಾಗಿ ಜಿಲ್ಲಾಧಿಕಾರಿ ಹಾಗೂ ರಕ್ಷಣಾಧಿಕಾರಿಗಳು ಬಂದ ನಂತರ ಎಲ್ಲವನ್ನು ಹತೋಟಿಗೆ ತರುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಜಿಲ್ಲೆಯ ಕೆಲವು ಅರಣ್ಯ ಪ್ರದೇಶದ ಸ್ಥಳಗಳಲ್ಲಿ ಜೂಜು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಇತ್ತಿಚಿನ ದಿನಗಳಲ್ಲಿ ಮತ್ತೆ ಅಕ್ರಮ ಮರಳು ದಂಧೆ ತಲೆಯತ್ತ ತೊಡಗಿದ್ದು, ಜಿಲ್ಲೆಯ ರೈತರನ್ನು ಆತಂಕಕ್ಕೀಡು ಮಾಡಿದೆ.

ಜಿಲ್ಲೆಯಲ್ಲಿ ನಡೆಯುವ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಕೆಲವು ಜನಪ್ರತಿನಿಧಿಗಳ ಹಾಗೂ ರಾಜಕಾರಣಿಗಳ ಹಿಬಾಲಕರೇ ಇಂತಹ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೆಳಿ ಬರುತ್ತಿವೆ. ನಿನ್ನೆ ಯಲಗಟ್ಟೆ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‍ನ್ನು ಚಳ್ಳಕೆರೆ ಪಿಎಸ್‍ಐ ಗುಡ್ಡಪ್ಪವಶಪಡಿಸಿಕೊಂಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಗಿರೀಶ್ ಅವರು ಅಕ್ರಮ ಮರಳು ಚಟುವಟಿಕೆ ನಡೆಯದಂತೆ ದಿಟ್ಟ ನಿರ್ಧಾರ ತೆಗೆದುಕೊಂಡ ಪರಿಣಾಮವಾಗಿ ಕೇವಲ ಎರಡೂವರೆ ತಿಂಗಳಲ್ಲಿ ರಾಜಕಾರಣಿಗಳ ಮೂಲಕ, ಇವರನ್ನು ವರ್ಗಾವಣೆ ಮಾಡಲಾಗಿತ್ತು.

ನೂತನವಾಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ವಿನೋತ ಪ್ರಿಯ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಇಂತಹ ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ, ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡುವ ಲೂಟಿಕೋರರನ್ನು ಮಟ್ಟ ಹಾಕಿ, ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.

Facebook Comments