ಸ್ವಾಭಾವಿಕ ಸೌಂದರ್ಯಕ್ಕಾಗಿ ‘ಅಲೋವೆರಾ ಸೂತ್ರ’

ಈ ಸುದ್ದಿಯನ್ನು ಶೇರ್ ಮಾಡಿ

01Aloe vera

ಅಲೋ ವೆರಾ ಎಂಬುದು “ಅಲೋ” ಕುಲದ ಒಂದು ರಸವತ್ತಾದ ಸಸ್ಯ ಜಾತಿಯಾಗಿದೆ. ಇದು ಲಿಲಿಯೆಸಿ ಕುಟುಂಬಕ್ಕೆ ಸೇರಿದ ಕಳ್ಳಿ ಸಸ್ಯವಾಗಿದೆ. ಅಲೋ ವೆರಾ ಸಸ್ಯದ ಪ್ರಯೋಜನಗಳನ್ನು ಪರೀಕ್ಷಿಸಲು ಹಲವಾರು ಅಧ್ಯಯನಗಳು ನಡೆಸಲ್ಪಟ್ಟಿದ್ದು, ವಿವಿಧ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಅರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋ ವೆರಾವು ಹಲವಾರು ಪ್ರಯೋಜನಕಾರಿ ಗುಣಗಳನ್ನು ಹೊಂದಿರುವುದಾಗಿ ಸಾಬೀತಾಗಿದೆ. ಅಲೋ ವೆರಾ ಜೆಲ್ ಮತ್ತು ಅಲೋ ವೆರಾ ರಸವನ್ನು ಚರ್ಮಕ್ಕೆ ಬಹಳ ಪ್ರಯೋಜನಕಾರಿ ಎಂದು ತಿಳಿಯಲ್ಪಟ್ಟಿದೆ. ಇದು ತನ್ನ ಅದ್ಭುತ ಔಷಧೀಯ ಬಳಕೆಗಳಿಗೆ ಹೆಸರುವಾಸಿಯಾಗಿದೆ.  ಅಲೋವೆರಾದ ಪ್ರಯೋಜನಗಳು ಅಸಂಖ್ಯಾತ. ಅಲೋವೆರಾ ಜೆಲ್ ಹಾಗೂ ಅಲೋವೆರಾ ರಸ ಕೂಡಾ ನಿಮ್ಮ ಚರಾಮಕ್ಕೆ ಹಲವಾರು ಬಗೆಗೆಳಲ್ಲಿ ಬಳಸಬಹುದು. ಅಲೋವೆರಾದಿಂದ ನಿಮ್ಮ ಚರ್ಮಕ್ಕೆ ಬಹುಪ್ರಯೋಜನಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಿದ್ದೇವೆ.

1. ಮೊಡವೆ-ಮುಕ್ತ ತ್ವಚೆಗೆ: ಅಲೋವೆರಾ ಜೆಲ್ ನಲ್ಲಿ ಎರಡು ಬಗೆಯ ಹಾರ್ಮೋನ್ ಗಳಿವೆ – ಆಕ್ಸಿನ್ ಮತ್ತು ಗಿಬ್ಬೆರೆಲ್ಲಿನ್ಸ್. ಈ ಹಾರ್ಮೋನ್ ಗಳು ಗಾಯ್ ಗುಣಪಡಿಸುವ ಗುಣವನ್ನು ಹೊಂದಿದ್ದು, ಉರಿಯೂತದ ವಿರೋಧಿ ಗುಣವನ್ನೂ ಹೊಂದಿದೆ. ಇದರಿಂದಾಗಿ ನಿಮ್ಮ ಚರ್ಮದ ಉರಿತ ಕಡಿಮೆಯಾಗಬಹುದು. ಅಳೋರ್ವರೆಯಾದಲ್ಲಿರುವ ಗಿಬ್ಬೆರೆಲ್ಲಿನ್ಸ್ ಬೆಳವಣಿಗೆಯ ಹಾರ್ಮೋನ್ ಗಳಾಗಿ ವರ್ತಿಸಿ, ಹೊಸ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ, ನಿಮ್ಮ ಚರ್ಮದ ಮೇಲೆ ಆಗಿರುವ ಯಾವುದೇ ಗಾಯಗಳನ್ನು, ಚಿಕಿತ್ಸಿಸಿ, ವೇಗವಾಗಿ ಗುಣವಾಗುವಂತೆ ಮಾಡುತ್ತದೆ. ಆಯುರ್ವೇದದಲ್ಲಿ, ಅಲೋವೆರಾವನ್ನು ದೀರ್ಘಕಾಲದ ಚರ್ಮ-ಸಂಬಂಧಿತ ಖಾಯಿಲೆಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ.

2. ಗಾಯಗಳನ್ನು ಚಿಕಿತ್ಸಿಸುತ್ತದೆ: ಅಲೋವೆರಾವನ್ನು ಗಾಯಗಳನ್ನು ಚಿಕಿತ್ಸಿಸುವಲ್ಲಿ ಉಪಯೋಗಿಸಲಾಗುತ್ತದೆ. ಅಲೋವೆರಾ ತನ್ನ ಹುಣದಿಂದ ಗಾಯಗಳನ್ನು ವೇಗವಾಗಿ ಗುಣಪಡಿಸಿ, ಅದರಿಂದ ಉಂಟಾಗಿರುವ ಕಲೆಯನ್ನು ಮಾಯವಾಗುವಂತೆ ಮಾಡುತ್ತದೆ.

3. ಸನ್-ಬರ್ನ್ ಚಿಕಿತ್ಸಿಸುತ್ತದೆ: ಅಲೋವೆರಾ ತನ್ನ ಗುಣಪಡಿಸುವ ಶಕ್ತಿಯಿಂದ ಸೂರ್ಯನ ಕಿರಣಗಳಿಂದಾಗಿರುವ ಸನ್-ಬರ್ನ್ ಅನ್ನು ಕೂಡಾ ಚಿಕಿತ್ಸಿಸುತ್ತದೆ. ಎಪಿಥೆಲಿಯಲ್ ಎಂಬ ಜೀವಕೋಶಗಳ ಪದರದಲ್ಲಿ ತನ್ನ ಚಿಕಿತ್ಸಿಸುವ ಚಟುವಟಿಕೆಯನ್ನು ನಡೆಸುತ್ತದೆ. ಆಲೋ ವೆರಾ ನಿಮ್ಮ ಚರ್ಮದ ರಕ್ಷಣಾ ತವಚವಾಗಿ ವರ್ತಿಸಿ, ನಿಮ್ಮ ಚರ್ಮವಾನ್ನಿ ಪುನರ್ಜಲೀಕರಿಸುವುದರಲ್ಲಿ ಸಹಾಯ ಮಾಡುತ್ತದೆ.

4. ಆರ್ಧ್ರಕ: ಅಲೋವೆರಾ ಜಿಡ್ಡಿನ ಭಾವನೆ ನೀಡದೆ, ಒಂದು ಪರಿಪೂರ್ಣ ಅರ್ಧರಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಣ್ಣೆಯುಕ್ತ ಚರ್ಮದವರಿಗೂ ಸೂಕ್ತ. ಅಲೋವೆರಾ ಚರ್ಮದ ಒಣಗುವಿಕೆಯನ್ನೂ ತಡೆಗಟ್ಟುತ್ತದೆ. ಅಲೆಯೋವೇರಾ ಜೆಲ್ ಅನ್ನು ಆಫ್ಟರ್-ಶೇವ್ ಕ್ರೀಮ್ ಆಗಿ ಬಳಸುವುದರಿಂದ ನಿಮ್ಮ ಚರ್ಮದ ಮೇಲೆ ಆಗಿಡುವ ಸಣ್ಣಪುಟ್ಟ ಗಾಯಗಳನ್ನು ನಿವಾರಿಸುತ್ತದೆ.

5. ಮುಪ್ಪಿನ ವಿರುದ್ಧ ಹೋರಾಡುತ್ತದೆ: ಆಯುರ್ವೇದದಲ್ಲಿ, ಹಲವಾರು ಚರ್ಮ ಸಂಬಂಧಿತ ದೀರ್ಘಕಾಲದ ಸಮಸ್ಯೆಗಳನ್ನು (ಉದಾಹರೆಣೆಗೆ ಮೊಡವೆ, ಎಕ್ಸಿಮಾ, ಇತ್ಯಾದಿ) ಗುಣಪಡಿಸುವಲ್ಲಿ ಅಲೋವೆರಾವನ್ನು ಬಳಸಲಾಗುತ್ತಿತ್ತು.

6. ಪೆರಿಯೋಡೋನ್ಟ್ಲ್ ರೋಗದ ಬೇನೆ ತಗ್ಗಿಸುತ್ತದೆ: ಅಲೋವೆರಾ ಒಸಡಿಗೆ ಸಂಬಂಧಿತ ರೋಗಗಳನ್ನು (ಉದಾಹರೆಣೆಗೆ: ಜಿಂಜಿವೈಟಿಸ್, ಪ್ರಿಯೊದೊಂಟಿಟಿಸ್)  ಚಿಕಿತ್ಸೆ ಮಾಡುವಲ್ಲಿ ಸಹಾಯ ಮಾಡುತ್ತದೆ. ರಕ್ತಸ್ರಾವ, ಉರಿ ಮತ್ತು ಬಾವನ್ನು ಕಡಿಮೆಗೊಳಿಸುತ್ತದೆ. ಇದು ಪ್ರಬಲವಾದ ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.

Aloe vera

7. ಸೋಂಕುಗಳನ್ನು ತಗ್ಗಿಸುತ್ತದೆ: ಅಲೋವೆರಾದ ಉರಿಯೂತದ ವಿರೋಧಿ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣದಿಂದ ನಿಮ್ಮ ಚರ್ಮಕ್ಕೆ ಆಗಿರುವ ಸೋಂಕನ್ನು ತಗ್ಗಿಸುವಲ್ಲಿ ಕಾರ್ಯನಿರ್ವಹಿಸುತ್ತದೆ.

8. ಚರ್ಮದ ಕಲೆಗಳನ್ನು ಕಡಿಮೆಗೊಳಿಸುತ್ತದೆ: ಅಲೋವೆರಾ ರಸವನ್ನು ಕುಡಿಯುವುದರಿಂದ ಮೊಡವೆಗಳನ್ನು ಕಡಿಮೆಗೊಳಿಸುತ್ತದೆ. ಅದರೊಂದಿಗೆ ಯಾವುದಾದರೂ ಚರ್ಮ ತೊಂದರೆಗಳಿದ್ದರೆ ಅವುಗಳನ್ನು ಚಿಕಿತ್ಸಿಸುವಲ್ಲಿ ಸಹಾಯಮಾಡುತ್ತದೆ.

9. ಜೀವಕೋಶಗಳನ್ನು ಚಿಕಿತ್ಸಿಸುತ್ತದೆ: ಚರ್ಮದ ಎಪಿಥೆಲಿಯಲ್ ಮಟ್ಟದ ಜೀವಕೋಶಗಳನ್ನು ಚಿಕಿತ್ಸಿಸಿ, ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಆಗಿರುವ ಕಂಡುಬಣ್ಣವನ್ನು ತಗ್ಗಿಸಿ, ಸ್ಟ್ರೆಚ್ ಮಾರ್ಕ್ಸ್ ಗಳನ್ನೂ ಕಡಿಮೆಗೊಳಿಸುವಲ್ಲಿ ಉಪಯೋಗಕಾರಿ.

10. ಗಾಯಗಳು ವೇಗವಾಗಿ ಗುಣಪಡುತ್ತವೆ: ನಿಮ್ಮ ಚರ್ಮದ ಮೇಲೆ ಆಗಿರುವ ಸಣ್ಣಪುಟ್ಟ ಗಾಯಗಳು, ಸುಟ್ಟ ಗಾಯ ಅಥವಾ ಬೇರೆ ಯಾವುದೇ ರೀತಿಯ ಗಾಯವಾಗಿದ್ದರೂ, ಅವುಗಳನ್ನು ವೇಗವಾಗಿ ಗುಣಪಡಿಸಲು ಅಲೋವೆರಾ ಸಹಾಯ ಮಾಡುತ್ತದೆ.

 

Facebook Comments