ಬಂಗಾರಪೇಟೆಯಲ್ಲಿ ಕಾಡಾನೆಗಳ ಲಗ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

elephantಬಂಗಾರಪೇಟೆ, ಡಿ.25-ತಾಲೂಕಿನ ಮಾರಾಂಡಹಳ್ಳಿ ಬಳಿ ಪ್ರತ್ಯಕ್ಷವಾದ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಮಾಡಿವೆ.ತಮಿಳುನಾಡು-ಹೊಸೂರು ಭಾಗದಿಂದ ಬಂಗಾರಪೇಟೆ ಗಡಿಯಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ರಾತ್ರಿ ವೇಳೆ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ನಾಶಪಡಿಸುತ್ತಿವೆ.

ಆನೆಗಳನ್ನುಓಡಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದರು. ಸ್ಥಳಕ್ಕೆ ಬಾರದ ಇಲಾಖೆಯವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments