ಬ್ರಿಟನ್‍ನಲ್ಲೇ ಇದ್ದಾನಂತೆ ವಂಚಕ ನೀರವ್ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Nirav-Movi neerav--01

ಲಂಡನ್/ನವದೆಹಲಿ, ಡಿ.29- ಸಾವಿರಾರು ಕೋಟಿ ರೂ.ಗಳನ್ನು ಬ್ಯಾಂಕ್‍ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಬ್ರಿಟನ್‍ನಲ್ಲಿ ಪತ್ತೆಯಾಗಿದ್ದಾನೆ. ನೀರವ್ ಮೋದಿ ಇಂಗ್ಲೆಂಡ್‍ನಲ್ಲಿ ವಾಸವಿದ್ದಾನೆ ಎಂದು ಬ್ರಿಟಿಷ್ ಅಧಿಕಾರಿಗಳು ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಮ್ಯಾಂಚೆಸ್ಟರ್ ರಾಷ್ಟ್ರೀಯ ತನಿಖಾಧಿಕಾರಿಗಳು ಯುಕೆಯಲ್ಲಿ ನೀರವ್ ಮೋದಿ ಇದ್ದಾನೆ ಎಂದು ಭಾರತಕ್ಕೆ ಮಾಹಿತಿ ನೀಡಿದ್ದಾರೆ.

2018ರ ಆಗಷ್ಟ್ ನಲ್ಲಿ ಸರ್ಕಾರವು ನೀರವ್ ಮೋದಿ ಪತ್ತೆಗಾಗಿ ಎರಡು ಮಾರಿ ಮನವಿ ಸಲ್ಲಿಸಿದೆ. ಒಂದು ಸಿಬಿಐ ಮನವಿಯಾದರೆ ಇನ್ನೊಂದು ಜಾರಿ ನಿರ್ದೇಶನಾಲಯ (ಇಡಿ) ಮನವಿಯಾಗಿತ್ತು. ಈ ಎರಡೂ ಸಂಸ್ಥೆಯ ಅಧಿಕಾರಿಗಳು ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೋರಿದ್ದರು ಎಂದು ಸಿಂಗ್ ರಾಜ್ಯಸಭೆಗೆ ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತದಿಂದ ನೀರವ್ ಮೋದಿ ಪರಾರಿಯಾಗಿರುವ ಮಾಹಿತಿಯನ್ನು ಮೊದಲೇ ಪಡೆದುಕೊಂಡಿದ್ದರು ಎಂದು ಕಾಂಗ್ರೆಸ್ ಇತ್ತೀಚೆಗೆ ಆರೋಪಿಸಿತ್ತು.

Facebook Comments

Sri Raghav

Admin