ಹೊಸ ವಷಕ್ಕೆ ಮನೆಯಲ್ಲೇ ಕೇಕ್ ತಯಾರಿಸೋದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Cake--01

ಹೊಸ ವರ್ಷಾಚರಣೆಯ ಸಂಭ್ರಮವನ್ನು ಹೆಚ್ಚಿಸುವ ಕೇಕ್‌ಗಳನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.

# ಚಾಕೋಲೇಟ್ ಕೇಕ್ 
ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು-100 ಗ್ರಾಂ, ಬೆಣ್ಣೆ-100 ಗ್ರಾಂ, ಮೊಟ್ಟೆಗಳು-3, ಕೋಕೊಪುಡಿ-2 ಚಮಚ, ಪುಡಿ ಸಕ್ಕರೆ-115 ಗ್ರಾಂ, ಅಡುಗೆ ಸೋಡ 1/4 ಚಮಚ, ಬೇಕಿಂಗ್ ಪೌಡರ್-3/4 ಚಮಚ, ವೆನಿಲಾ ಎಸೆನ್ಸ್-1 ಚಮಚ ಅಥವಾ ಚಾಕೊಲೇಟ್ ಎಸೆನ್ಸ್-1/2 ಚಮಚ, ಕಾರ್ನ್ ಫ್ಲೋರ್-1 ಚಮಚ, ತಾಜಾ ಕೆನೆ-2 ಚಮಚ, ಉಪ್ಪು-1 ಚಿಟಕಿ, ಹಾಲು-ಸಾಕಷ್ಟು.

ತಯಾರಿಸುವ ವಿಧಾನ: ಮೈದಾ, ಬೇಕಿಂಗ್ ಪೌಡರ್, ಸೋಡಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಕೋಕೊ ಪುಡಿಯನ್ನು 3 ಬಾರಿ ಜರಡಿ ಮಾಡಿ. ಕೆನೆ, ಬೆಣ್ಣೆ ಮತ್ತು ಸಕ್ಕರೆಯನ್ನು ಹಗುರವಾಗಿ ತುಂಬಾ ಮೃದುವಾಗುವಂತೆ ಮಿಶ್ರ ಮಾಡಿ. ಒಂದೊಂಜಇ ಮೊಟ್ಟೆಯನ್ನು ಸೇರಿಸಿ. ಎಸೆನ್ಸ್ ಮತ್ತು ಬಣ್ಣ ಸೇರಿಸಿ ಚೆನ್ನಾಗಿ ಬೀಟ್ ಮಾಡಿ, ಕೆನೆ ಸೇರಿಸಿ. ಈ ಹಂತದಲ್ಲಿ ಗ್ಲಿಸರಿನ್ ಸೇರಿಸಿ. ಮೈದಾ ಮಿಶ್ರಣವನ್ನು ಕಟ್ ಅಂಡ್ ಫೋಲ್ಡ್ ಕ್ರಮದಿಂದ ಬೆರೆಸಿ ಹಾಲನ್ನು ಡ್ರಾಪಿಂಗ್ ಹದ ಬರುವಂತೆ ಸೇರಿಸಿ. ಗ್ರೀಸ್ ಮಾಡಿ ಹಿಟ್ಟು ಚಿಮುಕಿಸಿದ ಪಾತ್ರೆಗೆ ಸುರಿಯಿರಿ. 5 ನಿಮಿಷ ಸಮಯ ಹೊಂದಿಸಿ ಮೈಕ್ರೊ ಹೈ ಮಾಡಿರಿ. 5 ನಿಮಿಷ ಹೊಂದಿಕೊಳ್ಳಲು ಬಿಡಿ. ನಂತರ ಅಚ್ಚಿನಿಂದ ತೆಗೆದು ತಣ್ಣಗೆ ಮಾಡಿ. ಓವನನ್ನು 180 ಡಿಗ್ರಿ ಗೆ ಸೆಟ್ ಮಾಡಿ 40 ನಿಮಿಷಗಳವರೆಗೆ ಕೇಕನ್ನು ಬೇಯಿಸಿ 5 ನಿಮಿಷ ತಣ್ಣಗೆ ಮಾಡಿ. ಬಟ್ ಕಾಗದದ ಮೇಲೆ ಮಗುಚಿರಿ. ಚೆನ್ನಾಗಿ ತಣ್ಣಗೆ ಮಾಡಿ. ಚಾಕೋಲೇಟ್ ಐಸಿಂಗ್ ನಿಂದ ಅಲಂಕರಿಸಿ.

#ಜಿಂಜರ್‌ ಬ್ರೆಡ್‌ ಕೇಕ್‌
ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು-2 ಕಪ್, ಬೆಣ್ಣೆ-ಅರ್ಧ ಕಪ್, ಶುಂಠಿ-ಕಾಲು ಕಪ್, ಲವಂಗ ಪುಡಿ-ಅರ್ಧ ಚಮಚ, ಬ್ರೌನ್ಶುಗರ್ಕಪ್, ಉಪ್ಪು-1 ಚಿಟಿಕೆ, ಮೊಟ್ಟೆ-3, ಪುಡಿ ಸಕ್ಕರೆ-ಸ್ವಲ್ಪ, ಹಾಲು-1 ಕಪ್.

ತಯಾರಿಸುವ ವಿಧಾನ : ಗೋಧಿ ಹಿಟ್ಟಿಗೆ ಉಪ್ಪು, ಸ್ವಲ್ಪ ಅಡುಗೆ ಸೋಡಾ, ಶುಂಠಿ, ಲವಂಗ ಪುಡಿ ಹಾಕಿ ಮಿಕ್ಸ್ಮಾಡಿ. ಇದಕ್ಕೆ ಬೆಣ್ಣೆ ಹಾಕಿ ಚೆನ್ನಾಗಿ ಬೀಟ್ಮಾಡಿ. ನಂತರ ಬ್ರೌನ್ಶುಗರ್ಹಾಕಿ ಮತ್ತೆ ಬೀಟ್ಮಾಡಿ, ಮೂರು ನಿಮಿಷ ಬಿಡಿ. ನಂತರ ಇದಕ್ಕೆ ಮೊಟ್ಟೆ, ಸಕ್ಕರೆ ಪುಡಿ, ಸ್ವಲ್ಪ ಹಾಲು ಹಾಕಿ ಮತ್ತೆ ಚೆನ್ನಾಗಿ ಬೀಟ್ಮಾಡಿ. ಮಿಕ್ಕಿರುವ ಗೋಧಿ ಹಿಟ್ಟು ಮತ್ತು ಹಾಲನ್ನು ಇದಕ್ಕೆ ಹಾಕಿ ಮಿಕ್ಸ್ಮಾಡಿ. ಕೇಕ್ಬೌಲ್ಗೆ ತುಪ್ಪ ಸವರಿ ಹಿಟ್ಟು ಉದುರಿಸಿ ಕೇಕ್ಮಿಶ್ರಣವನ್ನು ಸುರಿದು ಬಿಸಿ ಕುಕ್ಕರ್ನಲ್ಲಿ ಬೇಯಿಸಿ. ನಂತರ ಇದರ ಮೇಲೆ ಐಸಿಂಗ್ಶುಗರ್ಉದುರಿಸಿ ಆರಿದ ಮೇಲೆ ಕಟ್ಮಾಡಿ.

#ಈಸಿ ಕುಕ್ಕರ್ ಕೇಕ್
ಬೇಕಾಗುವ ಪದಾರ್ಥಗಳು: ಮೈದಾ-1 ಕಪ್, ಪುಡಿ ಸಕ್ಕರೆ-1 ಕಪ್, ಕಂಡೆನ್ಸ್ಡ್ಮಿಲ್ಕ್ಅರ್ಧ ಕಪ್, ಹಾಲು-1 ಕಪ್, ಡ್ರೈಫ್ರೂಟ್ಸ್ಅರ್ಧ ಕಪ್, ಬೇಕಿಂಗ್ಪೌಡರ್ಅರ್ಧ ಚಮಚ, ಬೇಕಿಂಗ್ಸೋಡಾ-1 ಚಿಟಿಕೆ, ಬೆಣ್ಣೆ-ಕಾಲು ಕಪ್.

ತಯಾರಿಸುವ ವಿಧಾನ: ಕುಕ್ಕರ್ಗೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬಿಸಿ ಮಾಡಿ. ಮೈದಾ ಹಿಟ್ಟಿಗೆ ಬೇಕಿಂಗ್ಸೋಡಾ, ಬೇಕಿಂಗ್ಪೌಡರ್ಹಾಕಿ ಜರಡಿ ಹಿಡಿಯಿರಿ. ಬೆಣ್ಣೆಗೆ ಸಕ್ಕರೆ ಪುಡಿ ಮತ್ತು ಕಂಡೆನ್ಸ್ಡ್ಮಿಲ್ಕ್ಹಾಕಿ ಚೆನ್ನಾಗಿ ಬೀಟ್ಮಾಡಿ. ಬಳಿಕ ಇದಕ್ಕೆ ಮೈದಾ ಹಿಟ್ಟು ಹಾಕಿ ಬೀಟ್ಮಾಡುತ್ತಾ ಸ್ವಲ್ಪ ಸ್ವಲ್ಪ ಹಾಲನ್ನು ಹಾಕಿ ಗಂಟಿಲ್ಲದಂತೆ ಬೀಟ್ಮಾಡಿ. ಬಳಿಕ ಇದಕ್ಕೆ ಡ್ರೈಫ್ರೂಟ್ಸ್ಹಾಕಿ. ಈ ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಇರಲಿ. ಚೆನ್ನಾಗಿ ಬೀಟ್ಮಾಡಿದಷ್ಟು ಕೇಕ್ಮೃದುವಾಗುತ್ತದೆ. ಈಗ ಅಲ್ಯೂಮಿನಿಯಂ ಅಥವಾ ನಾನ್ಸ್ಟಿಕ್ಕೇಕ್ಬೌಲ್ಗೆ ಸ್ವಲ್ಪ ಬೆಣ್ಣೆ ಸವರಿ ಮೈದಾಹಿಟ್ಟು ಉದುರಿಸಿ. ಹೀಗೆ ಮಾಡಿದರೆ ಕೇಕ್ಬೌಲ್ಗೆ ಅಂಟಿಕೊಳ್ಳುವುದಿಲ್ಲ. ಕೇಕ್ಮಿಶ್ರಣವನ್ನು ಬೌಲ್ನ ಅರ್ಧಕ್ಕೆ ಹಾಕಿ. ಇದನ್ನು ಬಿಸಿ ಕುಕ್ಕರ್ನಲ್ಲಿಟ್ಟು ಇಪ್ಪತ್ತೈದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದಿದೆಯೋ ಎಂದು ನೋಡಲು ಕಡ್ಡಿಯನ್ನು ಅದಕ್ಕೆ ಚುಚ್ಚಿ. ಕಡ್ಡಿಗೆ ಕೇಕ್ಅಂಟಿಲ್ಲ ಎಂದರೆ ಕೇಕ್ಬೆಂದಿದೆ ಎಂದು ಅರ್ಥ. ಬಳಿಕ ಕೇಕನ್ನು ತೆಗೆದು ಒಂದು ತಟ್ಟೆಗೆ ಕೇಕ್ಬೌಲನ್ನು ಉಲ್ಟಾ ಮಾಡಿ ಹಾಕಿ. ಇದರ ಮೇಲೆ ಸಕ್ಕರೆ ಪುಡಿ ಉದುರಿಸಿ ಆರಿದ ಮೇಲೆ ಕಟ್ಮಾಡಿ.

Facebook Comments