ಆರೋಗ್ಯ ಸುಧಾರಣೆಯಲ್ಲಿ ‘ಗ್ರೀನ್ ಟೀ’ ಹೇಗೆ ಕೆಲಸ ಮಾಡುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Green-Tea

ಗಿಡ ಮೂಲಿಕೆಯಿಂದ ತಯಾರಿಸಿದ ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿದೆ. ಗ್ರೀನ್ ಟೀ ಸೇವನೆಯಿಂದ ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸಬಹುದು. ಇದರಲ್ಲಿ ದೇಹದಲ್ಲಿ ಅನವಶ್ಯಕವಾಗಿ ತುಂಬಿಕೊಂಡಿರುವ ಬೊಜ್ಜನ್ನು ಕರಗಿಸುವ ವಿಶೇಷ ಗುಣವೂ ಇದೆ. ತಂಬಾಕು ಸೇವನೆಯನ್ನೇ ದೈನಂದಿನ ಚಟುವಟಿಕೆಗಳ ಅಂಗವನ್ನಾಗಿ ಮಾಡಿಕೊಂಡವರು ಮೊತ್ತಮೊದಲಿಗೆ ಮಾಮೂಲಿ ಟೀ ಕಾಫಿ ಬಿಟ್ಟು ಆಂಟಿಆಕ್ಸಿಡಂಟ್ಸ್ ಹೆಚ್ಚಾಗಿರುವ ಹಸಿರು ಚಹಾಸೇವನೆ ಮಾಡಲು ಆರಂಭಿಸಬೇಕು.

ನೀವು ಹಸಿರು ಚಹಾವನ್ನು ಔಷಧಿಯನ್ನು ಸೇವಿಸುವಂತೆ ಇದನ್ನು ಸೇವಿಸಬೇಡಿ. ಈ ರುಚಿಗೆ ನೀವು ಒಂದು ಬಾರಿ ಅಂಟಿಕೊಂಡರೆ ನೀವೇ ಈ ಆರೋಗ್ಯಕರ ಹಸಿರು ಚಹಾಗೆ ಅಡಿಕ್ಟ್ ಆಗಿಬಿಡುತ್ತೀರಿ. ತುಂಬಾ ಟೀ ಕುಡಿಯುವ ಅಭ್ಯಾಸವನ್ನು ಚಟ ಎಂದು ಬಿಡುತ್ತೇವೆ. ಆದರೆ ಗ್ರೀನ್ ಟೀಯನ್ನು ಆ ಚಟದ ಗುಂಪಿಗೆ ಸೇರಿಸಲು ಬರುವುದಿಲ್ಲ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಗುಣ.

ಗ್ರೀನ್ ಟೀ ಕುಡಿಯುವುದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ. ಇದು ಕೇವಲ ಸೌಂದರ್ಯವಷ್ಟೇ ಅಲ್ಲ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಈಗ ತೂಕ ಇಳಿಸಿಕೊಳ್ಳುವುದು ಆಯ್ಕೆಗಿಂತ ಹೆಚ್ಚಾಗಿ ಅನಿವಾರ್ಯವಾಗಿದೆ. ತೂಕವನ್ನೂ ಇಳಿಸುವ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಪರಿಣಾಮಕಾರಿ ಪಾನೀಯದ ಡಯಟ್ ಇಲ್ಲಿದೆ.

ಗ್ರೀನ್ ಟೀಯಿಂದ ತೂಕ ಕಡಿಮೆಮಾಡಿಕೊಳ್ಳುವುದರೊಂದಿಗೆ ತ್ವಚೆಯ ಕಾಂತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಗ್ರೀನ್ ಟೀ ರಕ್ತದಲ್ಲಿನ ಕೆಟ್ಟ ಅಂಶವನ್ನು ತೊಲಗಿಸುವುದರಿಂದ ತ್ವಚೆಯನ್ನು ಒಳಗಿನಿಂದಲೇ ಸಂರಕ್ಷಿಸುತ್ತದೆ. ಗ್ರೀನ್ ಟೀ ಯಿಂದ ಮೊಡವೆ ಮತ್ತು ಸುಕ್ಕು ಬೇಗನೆ ಮೂಡುವುದನ್ನೂ ತಡೆಯಬಹುದು.

# ಗ್ರೀನ್ ಟೀ ಹೇಗೆ ಕೆಲಸ ಮಾಡುತ್ತೆ?
ಗಿಡ ಮೂಲಿಕೆಯಿಂದ ತಯಾರಿಸಿದ ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿದೆ. ಗ್ರೀನ್ ಟೀ ಸೇವನೆಯಿಂದ ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸಬಹುದು. ಇದರಲ್ಲಿ ದೇಹದಲ್ಲಿ ಅನವಶ್ಯಕವಾಗಿ ತುಂಬಿಕೊಂಡಿರುವ ಬೊಜ್ಜನ್ನು ಕರಗಿಸುವ ವಿಶೇಷ ಗುಣವೂ ಇದೆ

# ತೂಕ ಇಳಿಕೆಗೆ ಗ್ರೀನ್ ಟೀ ಬಳಕೆ ಹೇಗೆ?
ಗ್ರೀನ್ ಟೀ ಡಯಟ್ ಪಿಲ್ಸ್ ಗಿಂತ ನೈಸರ್ಗಿಕ ಟೀ ಕುಡಿಯುವುದೇ ಒಳ್ಳೆಯದು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತು ಗ್ರೀನ್ ಟೀ ಸೇವನೆಯಿಂದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಬೇಕೆಂದರೆ ಗೋಧಿ ಬ್ರೆಡ್, ತರಕಾರಿ ಸಲಾಡ್ ಮತ್ತು ಗ್ರೀನ್ ಟೀ ಡಯಟ್ ಪದ್ಧತಿಯನ್ನು ಅನುಸರಿಸಬಹುದು.

# ಹದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಯ ನಿಯಂತ್ರಣ: ಪಾರ್ಶ್ವವಾಯು ಮತ್ತು ಹದಯಾಘಾತ ಸಮಸ್ಯೆಯು ದೇಹದಲ್ಲಿ ರಕ್ತ ಸಂಚಲನದಲ್ಲಿ ಉಂಟಾಗುವ ತೊಂದರೆಯಿಂದ ಉಂಟಾಗುತ್ತದೆ. ಟೀ ದೇಹ ಸೇರಿದಾಗ ಡ್ರೈನ್ ನಿಮ್ಮ ಬಾತ್ ರೂಮ್ ಪೈಪ್ ಶುದ್ಧವಾಗಿ ಇಡುವ ಹಾಗೆ ದೇಹದಲ್ಲಿ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ. ಗ್ರೀನ್ ಟೀ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ರಕ್ತನಾಳಗಳ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

# ಮೂಳೆಗಳನ್ನು ಬಲಪಡಿಸುತ್ತದೆ: ಟೀಯಲ್ಲಿ ಹಾಲು ಸೇರಿಸುವುದರಿಂದ ಮೂಳೆ ಬಲವಾಗುತ್ತದೆ ಎನ್ನುವ ವಾದ ಮಾಡುವುದು ಸರಿಯಲ್ಲ. ಏಕೆಂದರೆ 10 ವರ್ಷಕ್ಕಿಂತ ಅಧಿಕ ವರ್ಷದಿಂದ ಟೀ ಕುಡಿಯುವವರ ಮೂಳೆಯು ಟೀ ಕುಡಿಯದವರ (ಇವರು ಹಾಲು ಕುಡಿಯುತ್ತಿದ್ದರು) ಮೂಳೆಗೆ ಹೋಲಿಸಿದಾಗ ಟೀ ಕುಡಿಯುವವರ ಮೂಳೆ ದಢವಾಗಿರುತ್ತದೆ ಎಂದು ಇದರ ಬಗ್ಗೆ ನಡೆಸಿದ ಸಂಶೋಧನೆಯೊಂದು ಹೇಳುತ್ತದೆ. ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಹಾಗೂ ನಿಮ್ಮ ತ್ವಚೆಯ ಸಮಸ್ಯೆಗಳಿಗೂ ಇದರಿಂದ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.

# ಮೊಡವೆ- ಸ್ವಲ್ಪ ಗ್ರೀನ್ ಟೀ ಸೊಪ್ಪನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಅದರ ಪೇಸ್ಟ್ ಅನ್ನು ಮೊಡವೆಯ ಕಲೆಗಳ ಮೇಲೆ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ ಮುಖವು ಕಾಂತಿ ಹೆಚ್ಚಾಗುವುದು. ದಿನಾಲೂ ಗ್ರೀನ್ ಟೀಯ ಸೇವನೆಯು ಸಹ ಮೊಡವೆಯನ್ನು ಹೋಗಲಾಡಿಸುತ್ತದೆ.

# ಎಣ್ಣೆ ತ್ವಚೆ– ಗ್ರೀನ್ ಟೀ ಪ್ರಯೋಜನ ಏನಪ್ಪಾ ಎಣ್ಣೆ ತ್ವಚೆಯನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟು,ದ್ರವವನ್ನು ಫ್ರೀಜರ್ ನಲ್ಲಿ ಇಟ್ಟು ಐಸ್ ಮಾಡಿ ನಂತರ ಆ ಐಸ್ ನಿಂದ ಮುಖದ ಮೇಲೆ ನಯವಾಗಿ ಉಜ್ಜಿ. ಅದನ್ನು ಮುಖದಲ್ಲಿ ಒಣಗುವರಿಗೂ ಹಾಗೆ ಬಿಡಿ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ ಆದ ಬದಲಾವಣೆಯನ್ನು ನೀವೇ ಕಾಣಬಹುದು.

# ಬ್ಲಾಕ್ ಹೆಡ್ಸ್– ಮುಖದಲ್ಲಿ ಉಂಟಾಗುವ ಬ್ಲಾಕ್ ಹೆಡ್ಸ್ ಅನ್ನು ಗ್ರೀನ್ ಟೀಯಿಂದ ತೆಗೆಯಬಹುದಾಗಿದೆ. ಸ್ವಲ್ಪ ಗ್ರೀನ್ ಟೀಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರ ಮಾಡಿ ಬ್ಲಾಕ್ ಹೆಡ್ಸ್ ರಿಮೋವರ್ ಬಳಸಿ ನಿಮ್ಮ ಮುಖವನ್ನು ಶುಚಿಗೊಳಸಿ. ದಿನಾಲೂ ಗ್ರೀನ್ ಟೀ ಸೇವನೆ ನಿಧಾನವಾಗಿ ಬ್ಲಾಕ್ ಹೆಡ್ಸ್ ಹೋಗಲಾಡಿಸಲು ಸಹಾಯ ಮಾಡುತ್ತದೆ.

# ಹಲ್ಲುಗಳ ಆರೋಗ್ಯಕ್ಕೆ – ಸಕ್ಕರೆ ಹಾಕದೆ ಟೀ ಕುಡಿಯುವ ಅಭ್ಯಾಸವಿದ್ದರಂತೂ ತುಂಬಾ ಒಳ್ಳೆಯದು. ಏಕೆಂದರೆ ಇದು ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

# ಕ್ಯಾನ್ಸರ್ ತಡೆಗಟ್ಟುವುದು: ಟೀಯಲ್ಲಿ ಪಾಲಿಫಿನಲ್ ಮತ್ತು ಚಿಟಿಣಜಚಿಟಿಣ ಅಂಶವಿದೆ. ಈ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿದರೆ ಕ್ಯಾನ್ಸರ್ ಗಡ್ಡೆ ಉಂಟಾಗುವುದನ್ನು ತಡೆದು ಕ್ಯಾನ್ಸರ್ ಬರುವ ಕಣಗಳನ್ನು ನಿರ್ಣಾಮ ಮಾಡುತ್ತದೆ.

#ದೇಹದಲ್ಲಿ ನೀರಿನಂಶದ ಸಮತೋಲನ: ಆರೋಗ್ಯವಾಗಿರಲು ದೇಹದಲ್ಲಿ ನೀರಿನಂಶವಿರಬೇಕು. ಆದ್ದರಿಂದ 10-12 ಗ್ಲಾಸ್ ನೀರು ಕುಡಿಯಬೇಕು. ಟೀ ಕುಡಿಯುವುದರಿಂದ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು. ಆದರೆ ದಿನದಲ್ಲಿ ಟೀಯನ್ನು 2-3 ಲೋಟ ಕುಡಿದು ನಂತರ ಅಧಿಕ ಪ್ರಮಾಣದಲ್ಲಿ ನೀರು ಕುಡಿಯಿರಿ.

Facebook Comments