ಮಸಾಜ್ ಮಾಡ್ತಿನಿ ಅಂತ ಹೇಳಿ, ಗ್ರಾಹಕರ ಆಭರಣಗಳನ್ನು ಕದಿಯುತ್ತಿದ್ದ ಖದೀಮ

ಈ ಸುದ್ದಿಯನ್ನು ಶೇರ್ ಮಾಡಿ

Arrested--01ಮೈಸೂರು,ಡಿ.29-ಮಸಾಜ್ ಹೆಸರಿನಲ್ಲಿ ಗ್ರಾಹಕರ ಆಭರಣಗಳನ್ನು ಅಪಹರಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ 6.10 ಲಕ್ಷ ರೂ.ಮೌಲ್ಯದ 203 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕೇರಳದ ಮಲಪುರಂ ಜಿಲ್ಲೆಯ ಸುಮೇಶ್ ಬಂಧಿತ ಆರೋಪಿ.

ಈತ ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ವಿವಿಧೆಡೆ ಸುತ್ತಾಡುತ್ತಾ ಅಲ್ಲಿನ ಲಾಡ್ಜ್‍ಗಳಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿ ಮೊಬೈಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಉಚಿತವಾಗಿ ಮಸಾಜ್ ಮಾಡುವುದಾಗಿ ಹೇಳಿ ಲಾಡ್ಜ್‍ಗೆ ಕರೆಸಿಕೊಳ್ಳುತ್ತಿದ್ದನು. ಮಸಾಜ್‍ಗೆ ಬರುವ ಗ್ರಾಹಕರನ್ನು ಮರಳು ಮಾಡಿ ಅವರಿಗೆ ಮತ್ತು ಬರುವ ತಂಪು ಪಾನೀಯ ಕೊಡುತ್ತಿದ್ದ.

ಅವರು ಅದನ್ನು ಕುಡಿದು ನಿದ್ದೆಗೆ ಜಾರಿದ ನಂತರ ಅವರ ಮೈಮೇಲಿನ ಆಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.ಈತನ ಬಂಧನದಿಂದ ಲಷ್ಕರ್ ಠಾಣೆಯ ಮೂರು ಪ್ರಕರಣ, ಹಾಸನ ಎರಡು, ಬೆಂಗಳೂರು ಮೂರು, ಮಂಡ್ಯ ಹಾಗೂ ಕೋಲಾರದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳು ಪತ್ತೆಯಾದಂತಾಗಿದೆ. ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಲಷ್ಕರ್ ಠಾಣೆ ಇನ್‍ಸ್ಪೆಕ್ಟರ್ ವಿವೇಕಾನಂದ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments