ಯಶವಂತಪುರ ಸಾರಿಗೆ ಕಚೇರಿಯಲ್ಲಿ ವಾಹನ ನೋಂದಣಿ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Vehicle-01

ಬೆಂಗಳೂರು, ಡಿ. 29 : ಯಶವಂತಪುರದ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಅಧಿಕಾರಿಗಳ ಕಚೇರಿಯ ಎಲ್ಲಾ ಸೇವೆಗಳನ್ನು ಆನ್‍ಲೈನ್ ಮುಖಾಂತರ ಜಾರಿಗೊಳಿಸಲು “ವಾಹನ್-4” ತಂತ್ರಾಂಶವನ್ನು ಅಳವಡಿಸುವ ಪ್ರಕ್ರಿಯೆ ನಡೆಸಲಾಗುತ್ತಿರುವ ಕಾರಣಕ್ಕಾಗಿ ಜನವರಿ 23ರಿಂದ ಹೊಸ ನೋಂದಣಿ ಹಾಗೂ ಇ-ಪಾವತಿಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲಾಗುವುದು.

ಈ ಹಿನ್ನೆಲೆಯಲ್ಲಿ ಜನವರಿ 24 – 28 ರವರೆಗೆ ಕಚೇರಿಯ ಖಜಾನೆ ವಿಭಾಗದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಜನವರಿ 29 ರಿಂದ ಹೊಸ ವಾಹನಗಳ ನೋಂದಣಿಗೆ ವಾಹನ್-4 ತಂತ್ರಾಂಶದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 1 ರಿಂದ ವಾಹನ್ 4 ನಲ್ಲಿ ಉಳಿದ ವಾಹನಗಳಿಗೆ ಸಂಬಂಧಿಸಿದ ಇತರೆ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕರು, ಮಾಲೀಕರು ಈ ಕಚೇರಿಗೆ ಅರ್ಹತಾ ಪತ್ರ ನವೀಕರಣ, ನೋಂದಣಿ ಪತ್ರ ನವೀಕರಣ, ವಾಹನ ಮಾಲೀಕತ್ವ ವರ್ಗಾವಣೆ, ರಹದಾರಿ ಇನ್ನಿತರೆ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದ್ದು, ಬಾಕಿಯಿದ್ದ ಪ್ರಕರಣಗಳನ್ನು ಖುದ್ದಾಗಿ ಕಚೇರಿಗೆ ಹಾಜರಾಗಿ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 22 ರೊಳಗೆ ಪೂರೈಸಿಕೊಳ್ಳಬೇಕು.

ಜನವರಿ 23 ರಿಂದ 31 ರವರೆಗೆ ಸದರಿ ಕಚೇರಿಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಫೆಬ್ರವರಿ 1 ರಿಂದ ವಾಹನ್-4 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin