ಕಬ್ಬನ್ ಪಾರ್ಕ್’ನಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Kabban-Park--01

ಬೆಂಗಳೂರು, ಡಿ. 29, ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್ ಪಾರ್ಕ್) ಒಳರಸ್ತೆಗಳಲ್ಲಿ ಭಾನುವಾರದ ದಿನಗಳಂದು ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಉದ್ಯಾನವನದ ಆವರಣದಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರ ಅನುಕೂಲಕ್ಕಾಗಿ ಪ್ರತಿ ಭಾನುವಾರದ ದಿನಗಳಂದು ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿರುತ್ತದೆ.

ದಿನಾಂಕ: 30-12-2018 ರ ಭಾನುವಾರದಂದು ಶ್ರೀ ಚಾಮರಾಜೇಂದ್ರ ಉದ್ಯಾನವನದ (ಕಬ್ಬನ್ ಉದ್ಯಾನವನ) ಬ್ಯಾಂಡ್ ಸ್ಟ್ಯಾಂಡ್ ಆವರಣ ಹಾಗೂ ಮುಂಭಾಗದ ರಸ್ತೆಯಲ್ಲಿ ಮತ್ತು ಶ್ರೀ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.

ಕಬ್ಬನ್ ಉದ್ಯಾನವನದ ಆವರಣದಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಉದ್ಯಾನವನದಲ್ಲಿರುವ ಒಳರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯರವರ ಸಹಯೋಗದೊಂದಿಗೆ ಬಾಡಿಗೆ ರಹಿತ ಸೈಕಲ್ ಸವಾರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಬ್ಬನ್ ಉದ್ಯಾನವನದ ಒಳರಸ್ತೆಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ವಯೋವೃದ್ಧರ ಅನುಕೂಲಕ್ಕಾಗಿ ಎರಡು ಸಂಖ್ಯೆಯ ಪರಿಸರ ಸ್ನೇಹಿ ವಿದ್ಯುತ್‍ಚಾಲಿತ ವಾಹನಗಳ ಸೇವೆಯನ್ನು ನಿಗಧಿತ ಶುಲ್ಕ ನೀಡಿ ಸಾರ್ವಜನಿಕರು ಪಡೆಯಬಹುದು.

Facebook Comments

Sri Raghav

Admin