ಪುರುಷರ ಕೂದಲುದುರುವ ಸಮಸ್ಯೆಗೆ ಇಲ್ಲಿವೆ ಮನೆಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

Men's Hairಎಲ್ಲರಿಗೂ ಅವರವರ ಸೌಂದರ್ಯವನ್ನು ಹೆಚ್ಚಿಸುವುದು ಅವರ ತಲೆ ಕೂದಲು. ಹುಡುಗಿಯರಿರಲಿ ಅಥವಾ ಹುಡುಗರೇ ಇರಲಿ, ಅವರ ಸುಂದರವಾದ ಕೂದಲೇ ಅವರನ್ನು ಆಕರ್ಷಿಸುತ್ತದೆ. ಇಂತಹ ಆಕರ್ಷಣೀಯವಾದ ಕೂದಲನ್ನು ಪಡೆಯಲು ಹುಡುಗಿಯರಂತೂ ಅದೆಷ್ಟೋ ಕೂದಲಿನ ಆರೈಕೆಯನ್ನು ಮಾಡುತ್ತಿರುತ್ತಾರೆ. ವಿಧ ವಿಧದ ಶ್ಯಾಂಪೂವಿನಿಂದ ಹಿಡಿದು ಮನೆಯಲ್ಲಿಯೇ ತಯಾರಿಸಬಹುದಾದ ಮದ್ದುಗಳನ್ನೂ ಪ್ರಯೋಗಿಸುತ್ತಾರೆ. ಹಾಗಂದ ಮಾತ್ರಕ್ಕೆ ಹುಡುಗರಿಗೇನು ಕೂದಲಿನ ಸಮಸ್ಯೆಗಳಿಲ್ಲವೆಂದಲ್ಲ. ಹುಡುಗರ ಕೂದಲು ಚಿಕ್ಕದಾಗಿದ್ದರೂ ಅವರು ಕೂದಲು ಉದುರುವುದು, ತಲೆ ಹೊಟ್ಟು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಹುಡುಗರಲ್ಲಿ ಕಂಡುಬರುವ ಸಮಸ್ಯೆಗಳು. ಹುಡುಗಿಯರಂತೆ ಹುಡುಗರ ಕೂದಲನ್ನೂ ರಕ್ಷಿಸುವುದು ಅತ್ಯಂತ ಮುಖ್ಯವಾದ ವಿಷಯ. ಹಲವಾರು ಮನೆಮದ್ದುಗಳು ಹುಡುಗರ ಕೂದಲಿನ ಸಮಸ್ಯೆಗಳನ್ನು ಕಡಿಮೆಗೊಳಿಸುವುದರಲ್ಲಿ ಸಹಾಯವಾಗಬಲ್ಲದು.

# ಎಣ್ಣೆ ಮಸಾಜ್ : ಎಣ್ಣೆಯನ್ನು ಹಾಕಿ ಕೂದಲನ್ನು ಮಸಾಜ್ ಮಾಡುವುದು ಕೂದಲಿಗೆ ಕೊಡುವ ಅತ್ಯಂತ ಉತ್ತಮ ಚಿಕಿತ್ಸೆ. ಇದು ಕೂದಲಿನ ತುಂಡಾಗುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ಬಾದಾಮಿ, ಆಲೀವ್, ತೆಂಗಿನಕಾಯಿಯಿಂದ ತಯಾರಿಸಲಾದ ಎಣ್ಣೆಯಿಂದ ತಲೆ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪರಿಣಾಮಕಾರಿ. ಆದ್ದರಿಂದ ವಾರದಲ್ಲಿ ಕನಿಷ್ಠ ಎರಡು ಬಾರಿ ಎಣ್ಣೆ ಮಸಾಜ್ ತಪ್ಪದೇ ಮಾಡಿ.

# ಅಲೋವೆರಾ (ಲೋಳೆಸರ) : ನಿಮಗೆ ನಿಮ್ಮ ಕೂದಲನ್ನು ಇನ್ನಷ್ಟು ಬಲಪಡಿಸಬೇಕಾದರೆ ನೆತ್ತಿಗೆ ತಪ್ಪದೇ ಅಲೋ ಜೆಲ್ ಹಾಕಿ ಮಸಾಜ್ ಮಾಡಿ. ವಾರದಲ್ಲಿ ಎರಡು ಬಾರಿ ಅಲೋ ವೆರಾ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಒಣ ಕೂದಲನ್ನೂ ಉತ್ತಮಗೊಳಿಸುತ್ತದೆ.

# ತೆಂಗಿನ ಹಾಲು : ಹೊಸ ಕೂದಲು ಹುಟ್ಟುವುದಕ್ಕೆ ಹಾಗೂ ಕೂದಲು ಬೆಳೆಯುವುದಕ್ಕೆ ಅತ್ಯಂತ ಪರಿಣಾಮಕಾರಿ ಮನೆಮದ್ದು ತೆಂಗಿನ ಹಾಲು! ಇದು ಕೂದಲು ಹೆಚ್ಚು ಮೃದುವಾಗಲೂ ಸಹ ಸಹಾಯಮಾಡುತ್ತದೆ.

# ನೀಮ್ /ಬೇವಿನ ಪೇಸ್ಟ್ : 
ಚಿಕಿತ್ಸಕ ಬೇವಿನ ಪೇಸ್ಟ್, ಕೂದಲಿನ ಕ್ಷಾರೀಯ ಸಮತೋಲನವನ್ನು ಉಳಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಈ ಬೇವಿನ ಪೇಸ್ಟ್ ನ್ನು ಇನ್ನಷ್ಟು ಉತ್ತಮಗೊಳಿಸಲು ಜೇನುತುಪ್ಪ ಮತ್ತು ಆಲೀವ್ ಎಣ್ಣೆಯನ್ನು ಸೇರಿಸಿ

# ಮೆಂತ್ಯದ ಬೀಜಗಳು : 
ಎರಡು ಅಥವಾ ಮೂರು ದೊಡ್ಡ ಚಮಚಗಳಷ್ಟು ಮೆಂತ್ಯದ ಬೀಜಗಳನ್ನು 8 -10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿ ನಿಮ್ಮ ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಗಟ್ಟುವುದು ಮಾತ್ರವಲ್ಲ ಕೂದಲು ಬೆಳೆಯಲು ಹಾಗೂ ತಲೆ ಹೊಟ್ಟು ನಿವಾರಣೆ ಕೂಡ ಸಾಧ್ಯ.

# ಕಿತ್ತಳೆ ರಸ : ನೀವು ಎಣ್ಣೆಯುಕ್ತ ಕೂದಲು ಹಾಗೂ ತಲೆ ಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಪರಿಹಾರ! ಕಿತ್ತಳೆ ಸಿಪ್ಪೆಯನ್ನು ತೆಗೆದು ಹಣ್ಣಿನ ರಸವನ್ನು ತೆಗೆಯಿರಿ. ಹಣ್ಣಿನ ರಸ ಹಾಗೂ ತಿರುಳಿನ ಮಿಶ್ರಣವನ್ನು ಪ್ಯಾಕ್ ನಂತೆ ತಲೆಗೆ ಹಚ್ಚಿ. (ವಾರದಲ್ಲಿ ಒಂದು ದಿನ)

# ಗೋರಂಟಿ ಎಲೆಗಳು : ನಿಮಗೆ ದಪ್ಪವಾದ ಕೂದಲು ಬೇಕಾದಲ್ಲಿ ಕೂದಲಿಗೆ ಗೋರಂಟಿ ಪೇಸ್ಟ್ ಹಚ್ಚಿ (ಗೋರಂಟಿ ಎಲೆಗಳನ್ನು ರುಬ್ಬಿ ತಯಾರಿಸಬೇಕು) ಇದನ್ನು ಮೂರು ಗಂಟೆಗಳ ಕಾಲ ತಲೆಗೆ ಹಚ್ಚಿ ನಂತರ ತೊಳೆಯಿರಿ.

# ನಿಂಬೆ ರಸ : ನಿಂಬೆರಸ ಹಾಗೂ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಯಮಿತವಾಗಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಅಥವಾ ರಾತ್ರಿ ಮಲಗುವಾಗ ಕೂಡ ಹಚ್ಚಿ ಮಲಗಬಹುದು. ಈ ಮಿಶ್ರಣವನ್ನು ಹಚ್ಚಿ ಕನಿಷ್ಠ 3-4 ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರವಷ್ಟೇ ಕೂದಲು ತೊಳೆಯಬೇಕು. ತಣ್ಣನೆಯ ನೀರಿನಲ್ಲಿ ಕೂದಲು ತೊಳೆದರೆ ಒಳ್ಳೆಯದು.

# ತೆಂಗಿನ ಕಾಯಿ + ದಾಸವಾಳ + ಬೇವಿನ ಎಲೆಗಳು : ನಿಮ್ಮ ಸದೃಢ ಕೂದಲಿಗಾಗಿ ತೆಂಗಿನೆಣ್ಣೆ ಯನ್ನು ದಾಸವಾಳ ಹಾಗೂ ಬೇವಿನ ಎಲೆಗಳ ರುಬ್ಬಿದ ಮಿಶ್ರಣದೊಂದಿಗೆ ಸೇರಿಸಿ. ಇದನ್ನು ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದು ಕೂದಲನ್ನು ಚೆನ್ನಾಗಿ ತೊಳೆಯಿರಿ.

# ನೆಲ್ಲಿಕಾಯಿ, ರಾಯತ, ಸಿಗೇಕಾಯಿ ಮತ್ತು ಬೃಂಘರಾಜ :  ನೆಲ್ಲಿಕಾಯಿ, ಸಿಗೇಕಾಯಿ ಮತ್ತು ಬೃಂಘರಾಜ ಪುಡಿಗಳನ್ನು ಮೊಸರು ಮತ್ತು ನಿಂಬೆಯ ಜೊತೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ಅತ್ಯಂತ ಆರೋಗ್ಯಕರ ಹಾಗೂ ಹೊಳಪಿನ ಕೂದಲಿನ ವಾರಸುದಾರರು ನೀವಾಗುವಿರಿ!

Facebook Comments