ಹೊಸ ವರ್ಷದಲ್ಲಿ ನಿಮ್ಮ ಬದುಕನ್ನೆ ಬದಲಿಸುತ್ತವೆ ಈ ಹೊಸ ಸಂಕಲ್ಪಗಳು..!

ಈ ಸುದ್ದಿಯನ್ನು ಶೇರ್ ಮಾಡಿ

New-Year--01

ನಿಮ್ಮ ವಯಸ್ಸು ಎಷ್ಟೇ ಇರಲಿ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಯತ ವ್ಯಾಯಾಮದ ಮೂಲಕ ಅನೇಕ ಮಾರ್ಗಗಳಿವೆ. ವಯಸ್ಸಾದವರಿಗೆ ಬಿರು ನಡಿಗೆ (ಬ್ರಿಸ್ಕ್ ವಾಕಿಂಗ್) ರೀತಿಯ ಏರೋಬಿಕ್ ವ್ಯಾಯಾಮವು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗಿದೆ. ತೀವ್ರ ದೈಹಿಕ ಚಟುವಟಿಕೆಗಳಲ್ಲಿ ತೊಡಗದೇ ಇರುವುದು ಉತ್ತಮ. ಮಧುಮೇಹ, ಸಂಧಿವಾತದಂಥ ದೀರ್ಘಕಾಲೀನ ಆರೋಗ್ಯ ಸ್ಥಿತಿಗಳಿಗೆ ಒಳಗಾದವರು ಮೊದಲು ತಮ್ಮ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯುವುದು ಸೂಕ್ತ.  ನಿಮ್ಮ ವ್ಯಾಯಾಮವನ್ನು ನೀವು ಮಿತಿಗೊಳಿಸ ಬೇಕಾದರೆ, ವಾರಕೊಮ್ಮೆ 60 ನಿಮಿಷಗಳ ಸಾಧಾರಣ ಪ್ರಮಾಣದ ವ್ಯಾಯಾಮವು ನಿಮಗೆ ಸಹಾಯ ಮಾಡುತ್ತದೆ.

# ನಿಮ್ಮ ತೂಕವನ್ನು ನಿರ್ವಹಣೆ ಮಾಡಿ: ನಿಮ್ಮ ದೇಹವು ದಹಿಸುವುದಕ್ಕಿಂತ ಹೆಚ್ಚು ಕ್ಯಾಲೋರಿಗಳ ಆಹಾರವನ್ನು ಸೇವಿಸಿದರೆ, ನಿಮ್ಮ ತೂಕ ಹೆಚ್ಚಾಗುತ್ತದೆ. ಆದಾಗ್ಯೂ ವ್ಯಕ್ತಿಗಳಿಂದ ವ್ಯಕ್ತಿಗೆ ವ್ಯಾಯಾಮದ ಮಟ್ಟದ ಅಗತ್ಯವಿರುತ್ತದೆ. ನಿಮ್ಮ ತೂಕವನ್ನು ನಿರ್ವಹಣೆ ಮಾಡಬೇಕಾದರೆ, ನೀವು ನಿಮ್ಮ ಸಾಧಾರಣ ಮಟ್ಟದ ಏರೋಬಿಕ್ ಚಟುವಟಿಕೆಯನ್ನು 150 ನಿಮಿಷಗಳಿಗೆ, ಬಿರುಸಾದ ಏರೋಬಿಕ್ ಚಟುವಟಿಕೆಯನ್ನು 75 ನಿಮಿಷಗಳಿಗೆ ಅಥವಾ ಇವೆರೆಡರ ಸಂಯೋಜನೆಯನ್ನು ವಾರಕ್ಕೆ ಎರಡು ಬಾರಿ ಮಾಡಬಹುದು.ನೀವು ತೂಕ ಕಳೆದುಕೊಳ್ಳಲು ಅಥವಾ ತೂಕ ಇಳಿಕೆಯನ್ನು ನಿರ್ವಹಣೆ ಮಾಡಲು ಬಯಸುವುದಾದರೆ, ತೀವ್ರ ಏರೋಬಿಕ್ ವ್ಯಾಯಾಮದ ಜೊತೆ ಕ್ಯಾಲರಿಗಳ ಆಹಾರ ಸೇವನೆಯನ್ನು ಸಹ ಕಡಿಮೆ ಮಾಡಬೇಕಾಗುತ್ತದೆ.

# ಹೃದ್ರೋಗ ಸಾಧ್ಯತೆಯನ್ನು ಕಡಿಮೆಗೊಳಿಸಿ: ನೀವು ವಾರಕ್ಕೆ ಒಂದು ಬಾರಿ 150 ನಿಮಿಷಗಳ ಸಾಧಾರಣ ಮಟ್ಟದ ಏರೋಬಿಕ್ ವ್ಯಾಯಾಮ ಮಾಡಿದರೆ ಹೃದ್ರೋಗ ಸಾಧ್ಯತೆಯನ್ನು ಕಡಿಮೆ ಮಾಡಬಹುದು, ಅಧಿಕ ರಕ್ತದೊತ್ತಡವನ್ನು ತಗ್ಗಿಸಬಹುದು ಮತ್ತು ಕೊಲೆಸ್ಟರಾಲ್ ಮಟ್ಟವನ್ನು ಸುಧಾರಿಸಬಹುದು. 2ನೇ ವಿಧದ ಮಧುಮೇಹ ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ವಾರಕ್ಕೊಮ್ಮೆ 120 ರಿಂದ 150 ನಿಮಿಷಗಳ ಸಾಧಾರಣ ಏರೋಬಿಕ್ ಚಟುವಟಿಕೆ ಮಾಡಲು ಪ್ರಯತ್ನಿಸಿ. ಅಧಿಕ ಶ್ರಮದಾಯಕ ವ್ಯಾಯಾಮವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಕೆಲವು ಕ್ಯಾನ್ಸರ್‍ಗಳ ಸಾಧ್ಯತೆಯನ್ನು ಕಡಿಮೆಗೊಳಿಸಿ : ವ್ಯಾಯಾಮ ಮಾಡುವುದರಿಂದ ಕರುಳು ಮತ್ತು ಸ್ತನ ಕ್ಯಾನ್ಸರ್ ಸಂಭವಾಂಶಗಳು ಕಡಿಮೆಯಾಗುತ್ತವೆ ಎಂಬುದನ್ನು ಸಂಶೋಧನೆಗೆಳು ಬಹಿರಂಗಗೊಳಿಸಿವೆ. ನಿಯತ ವ್ಯಾಯಾಮದ ಮೂಲಕ ಎಂಡೋಮೆಟ್ರಿಲ್ ಮತ್ತು ಶ್ವಾಸಕೋಶ ಕ್ಯಾನ್ಸರ್‍ಗಳ ಸಾಧ್ಯತೆಗಳನ್ನು ಕಡಿಮೆಯಾಗುತ್ತವೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.

ಮೂಳೆಗಳು ಮತ್ತು ಮಾಂಸಖಂಡಗಳನ್ನು ಸದೃಢಗೊಳಿಸಿ : ಅಧ್ಯಯನದ ಪ್ರಕಾರ, ಸಾಧಾರಣ ಪ್ರಮಾಣದ ಏರೋಬಿಕ್ ವ್ಯಾಯಾಮಗಳು, ಮೂಳೆ ಸದೃಢಗೊಳಿಸುವ ಮತ್ತು ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮಗಳು ಮುಪ್ಪಿನಲ್ಲಿ ಎಲುಬು ಸಾಂದ್ರತೆ ನಷ್ಟ ಸಮಸ್ಯೆಯನ್ನು ವಿಳಂಬಗೊಳಿಸುತ್ತದೆ. ಉದಾಹರಣೆಗೆ ವಾರಕ್ಕೊಮ್ಮೆ 120 ನಿಮಿಷಗಳಿಂದ 300 ನಿಮಿಷಗಳ ಸಾಧಾರಣ ಏರೋಬಿಕ್ ವ್ಯಾಯಾಮವು ಹಿಪ್ ಪ್ರಾಕ್ಚರ್ (ಹಿಂಬದಿ ಮೂಳೆ ಮುರಿತ) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಮತ್ತು ಇತರ ಕೀಲು ಸಮಸ್ಯೆಗಳ ನಿವಾರಣೆಗೆ 130 ರಿಂದ 150 ನಿಮಿಷಗಳ ಕಡಿಮೆ ಪರಿಣಾಮದ ಏರೋಬಿಕ್ ವ್ಯಾಯಾಮಕ್ಕೆ ಸಲಹೆ ಮಾಡಬಹುದಾಗಿರುತ್ತದೆ. ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮವು ಮಾಂಸಖಂಡಗಳ ಸಮೂಹವನ್ನು ನಿರ್ವಹಿಸಿ ಅಥವಾ ಹೆಚ್ಚಿಸಿ ಸದೃಢಗೊಳಿಸಲು ನೆರವಾಗುತ್ತದೆ. ನಿಮಗೆ ವಯಸ್ಸಾಗುತ್ತಿದ್ದಂತೆ ನಿಮ್ಮ ವಯೋಮಾನಕ್ಕೆ ಅನುಗುಣವಾಗಿ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡಿದರೆ ನಿಮಗೆ ಉತ್ತಮ ಫಲಿತಾಂಶ ಲಭಿಸುತ್ತದೆ.

ಮಾನಸಿಕ ಆರೋಗ್ಯ ವರ್ಧನೆ : ವಯಸ್ಸಾಗುತ್ತಿರುವ ಮಂದಿಯ ಮಾನಸಿಕ ಆರೋಗ್ಯ ವರ್ಧನೆಗೆ ವ್ಯಾಯಾಮ ಸಹಕಾರಿ. ವಾರದಲ್ಲಿ 3 ರಿಂದ 5 ಬಾರಿ 30 ರಿಂದ 60 ನಿಮಿಷಗಳ ಕಾಲ ನಿಯತ ಏರೋಬಿಕ್ ಅಥವಾ ಏರೋಬಿಕ್ ಮತ್ತು ಮಾಂಸಖಂಡ ಬಲವರ್ಧನೆ ವ್ಯಾಯಾಮ ಮಾಡುವುದರಿಂದ ಕಲಿಕಾ ಮತ್ತು ನಿರ್ಣಯ ಕೌಶಲ್ಯಗಳು ಚುರುಕುಗೊಳ್ಳುತ್ತವೆ. ಅಲ್ಲದೇ  ಮಾನಸಿಕ ಖಿನ್ನತೆ, ಹತಾಶೆಗಳು ದೂರವಾಗಿ ನಿದ್ರೆ ಮಟ್ಟದ ಸುಧಾರಣೆಯಾಗುತ್ತದೆ.
ನಿಮ್ಮ ವಯಸ್ಸು ಎಷ್ಟೇ ಇರಲಿ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಯತ ವ್ಯಾಯಾಮದ ಮೂಲಕ ಅನೇಕ ಮಾರ್ಗಗಳಿವೆ.

Facebook Comments