ಮೈಸೂರಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ಅಕ್ರಮ ಕಟ್ಟಡ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

Illegal buildingಮೈಸೂರು, ಜ.2-ನಗರದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಕೈಗೆತ್ತಿಕೊಂಡಿದೆ.
ನಗರದ ಮಹದೇವಪುರ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಜಿಲ್ಲಾಡಳಿತ ಮುಲಾಜಿಲ್ಲದೆ ತೆರವು ಮಾಡುತ್ತಿದೆ.

ತಹಶೀಲ್ದಾರ್ ರಮೇಶ್‍ಬಾಬು ಅವರ ನೇತೃತ್ವದಲ್ಲಿ ಬೆಳಿಗ್ಗೆ ಕಾರ್ಯಾಚರಣೆ ಪ್ರಾರಂಭವಾಯಿತು. ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಆ ಜಾಗದ ಸುತ್ತ ಬೇಲಿ ಹಾಕಿದ್ದು, ಸರ್ಕಾರದ ಜಾಗ ಎಂಬ ನಾಮಫಲಕವನ್ನು ಜಿಲ್ಲಾಡಳಿತ ಅಳವಡಿಸಿತ್ತು. ಮಹದೇವಪುರ ರಸ್ತೆಯಲ್ಲದೆ ನಗರದ ವಿವಿಧ ಬಡಾವಣೆಗಳಲ್ಲೂ ಅಕ್ರಮ ಕಟ್ಟಡ ತೆರವು ಕಾರ್ಯ ನಡೆಯಲಿದೆ. ಜೆಸಿಬಿ ಯಂತ್ರಗಳ ಮೂಲಕ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಕೈಗೊಂಡರು. ಯಾರೂ ಪ್ರತಿರೋಧ ಒಡ್ಡದಂತೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.

Facebook Comments