ವ್ಯಕ್ತಿತ್ವ ವಿಕಸನಕ್ಕೆ ಇಲ್ಲಿವೆ ಟಾಪ್ 10 ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Personolity--01

ನಿಮಗೆ ಗೊತ್ತೆ..ಗುರಿ ತಲುಪಲು ಬಯಸುವ ಮಂದಿಯಲ್ಲಿ ಅದನ್ನು ಸಾಧಿಸುವ ಸಾಧಕರ ಪ್ರಮಾಣ ಶೇಕಡ 10ಕ್ಕಿಂತಲೂ ಕಡಿಮೆ ಎಂಬುದು ನಿಮಗೆ ತಿಳಿದಿದೆಯೇ..? ಹಾಗಾದರೆ ನಿಮ್ಮ ಯಶಸ್ಸನ್ನು ಸಾಧಿಸುವುದು ಹೇಗೆ..? ವ್ಯಕ್ತಿತ್ವ ವಿಕಸನಕ್ಕಾಗಿ ಈ ಕೆಳಗೆ ನೀಡಲಾದ ಟಾಪ್-10 ಟಿಪ್ಸ್‍ಗಳನ್ನು ಅನುಸರಿಸಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ..

# ನಿಮ್ಮ ಗುರಿಗಳನ್ನು ಬರೆದಿಟ್ಟುಕೊಳ್ಳಿ: ನಿಮ್ಮ ಗುರಿಗಳನ್ನು ಬರೆದಿಟ್ಟುಕೊಳ್ಳುವುದರಿಂದ ಯಶಸ್ಸಿನ ಸಾಧ್ಯತೆ ಹೆಚ್ಚಾಗಿರುತ್ತದೆ.

# ಬದ್ದತೆ : ನಿಮ್ಮ ಗುರಿಗಳನ್ನು ಪ್ರದರ್ಶಿಸಲು ಮತ್ತು ಅದನ್ನು ಸಾಧಿಸಲು ನಿಮಗೆ ಭರವಸೆ ನೀಡಲು ಉತ್ತಮ ಆಲೋಚನೆಗಳನ್ನು ಅನುಸರಿಸಬೇಕು ಹಾಗೂ ಅದನ್ನು ಪಾಲಿಸಬೇಕು. ನಿಮ್ಮ ಬದ್ಧತೆಯನ್ನು ಸಾಂಕೇತಿಕರಣಗೊಳಿಸಲು ಬಹುಶ: ನೀವು ಒಂದು ಪುಟ್ಟ ಕಾರ್ಯಕ್ರಮವನ್ನು ಮಾಡಬಹುದು.

# ಹಿತೈಷಿಗಳಿಗೆ ತಿಳಿಸಿ : ನಿಮ್ಮ ಆಪ್ತೇಷ್ಟರು ಮತ್ತು ಹಿತೈಷಿಗಳಿಗೆ ನಿಮ್ಮ ಬದ್ದತೆ ಮತ್ತು ವರ್ಷದ ಗುರಿಗಳನ್ನು ತಿಳಿಸಿರಿ.

# ಉತ್ತರದಾಯಿತ್ವ: ನಿಮ್ಮ ಗುರಿಸಾಧನೆಯ ಉತ್ತರಾದಾಯಿತ್ವವನ್ನು ಪಡೆಯಲು ನೀವು ಕೆಲವು ಸರಳ ಮಾರ್ಗವನ್ನು ಅನುಸರಿಸಬಹುದು. ನಿಮ್ಮ ಆಪ್ತರು ಮತ್ತು ಹಿತೈಷಿಗಳಿಗೆ ನಿಮ್ಮ ರಹಸ್ಯ ಕನಸುಗಳು ಮತ್ತು ಗುರಿಗಳ ಬಗ್ಗೆ ತಿಳಿಸಿ ಅವರಿಂದ ಸಲಹೆ, ಮಾರ್ಗದರ್ಶನ ಮತ್ತು ಬೆಂಬಲ ಪಡೆಯಿರಿ. ತಿಂಗಳಿಗೊಮ್ಮೆ ಅವರೊಂದಿಗೆ ಭೋಜನಕೂಟದಲ್ಲಿ ಭಾಗವಹಿಸಿ ನಿಮ್ಮ ಗುರಿ ಸಾಧನೆಯ ಪ್ರಗತಿ ಬಗ್ಗೆ ತಿಳಿಸಿ ಅವರೊಂದಿಗೆ ಚರ್ಚಿಸಿರಿ. ನಿಮ್ಮ ಪರಮಾಪ್ತರಿಂದ ಅಗತ್ಯವಾದ ಸಹಕಾರ ಮತ್ತು ಬೆಂಬಲ ಪಡೆಯಿರಿ.

# ಯೋಜನೆ ರೂಪಿಸಿರಿ: ಹಂತದಿಂದ ಹಂತಕ್ಕೆ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಹಿಂದಿನ ಸಂಗತಿಗಳು ನಿಮಗೆ ಸಾಕಷ್ಟು ಪಾಠಗಳು ಮತ್ತು ಅನುಭವಗಳನ್ನು ತಿಳಿಸುತ್ತವೆ. ನೀವು ಹಿಂದೆ ಎಲ್ಲಿ ಎಡವಿದ್ದರಿ. ಅದರಿಂದ ಆದ ಪ್ರತಿಕೂಲ ಪರಿಣಾಮಗಳೇನು. ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ವಿಮರ್ಶೆ ಮಾಡಿಕೊಳ್ಳಿ. ಇದು ನಿಮ್ಮ ಮುಂದಿನ ಗುರಿ ಸಾಧನೆ ಯೋಜನೆಯನ್ನು ಸುಲಭವಾಗಿ ರೂಪಿಸಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ.

# ಗುರಿಯ ಸ್ಥಿತಿ-ಗತಿ ಬಗ್ಗೆ ಪರಿಶೀಲಿಸಿ : ವರ್ಷದಲ್ಲಿ ನೀವು ಸಾಧಿಸಬೇಕಾಗಿರುವ ಗುರಿ ಬಗ್ಗೆ ಮುನ್ನವೇ ಯೋಜನೆ ರೂಪಿಸಿಕೊಳ್ಳಬೇಕು. ನಿಮ್ಮ ಗುರಿ ಸಾಧನೆಯ ಹೆಗ್ಗುರಿಗೆ ಕಾರಣಗಳೇನು ? ಅದನ್ನು ಮುಟ್ಟಲು ನಿಮಗೆ ಬೇಕಾಗುವ ಸಮಯ ಎಷ್ಟು ? ಅದಕ್ಕಾಗಿ ನೀವು ಹಾಕಿಕೊಂಡಿರುವ ಯೋಜನೆಗಳೇನು? ಗುರಿ ಸಾಧನೆಗೆ ಎದುರಾಗುವ ಅಡ್ಡಿ-ಆತಂಕಗಳು ಮತ್ತು ಎರಡುತೊಡರುಗಳೇನು ? ಇತ್ಯಾದಿ ಪ್ರಶ್ನೆಗಳನ್ನು ನಿಮಗೆ ನೀವೆ ಹಾಕಿಕೊಂಡು ಅದಕ್ಕೆ ಉತ್ತರ ಬರೆಯಿರಿ. ಗುರಿ ಸಾಧನೆಗಾಗಿ ನೀವು ಕಾರ್ಯೋನ್ಮುಖರಾದಾಗ ಅದರ ಸ್ಥಿತಿ-ಗತಿ ಬಗ್ಗೆ ಪರಾಮರ್ಶಿಸಿ.

# ವಾಸ್ತವ ಸಂಗತಿ ತಿಳಿಯಿರಿ : ಕಳೆದ ವರ್ಷ ನೀವು ನಿಗದಿ ಮಾಡಿದ್ದ ಗುರಿಯನ್ನು ಕಾರಣಾಂತರಗಳಿಂದ ತಲುಪಲು ಸಾಧ್ಯವಾಗದಿದ್ದರೆ. ಅದಕ್ಕೆ ವಾಸ್ತವ ಅಂಶಗಳನ್ನು ಅವಲೋಕಿಸಿ. ಹಿಂದಿನ ವರ್ಷ ಗುರಿಸಾಧನೆ ವಿಫಲಗೊಳ್ಳಲು ಕಾರಣವೇನು ? ಅದನ್ನು ನಾನು ಕೈಬಿಡಲು ಕಾರಣವೇನು? ಗುರಿ ತಲುಪಲು ನೀವು ಸಾಗಿದ ದೂರವೆಷ್ಟು? ಇತ್ಯಾದಿಯ ಬಗ್ಗೆ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ಯತ್ನಿಸಿ. ಅದು ನಿಮ್ಮ ಹೊಸ ಗುರಿ ಸಾಧನೆಗೆ ಮಾರ್ಗದರ್ಶನದ ಬೆಳಕಾಗಬಲ್ಲದು.

# ಗುರಿ ಮುಟ್ಟುವ ಉದ್ದೇಶದ ಬಗ್ಗೆ ನೆನಪಿರಲಿ : ನೀವು ಗುರಿಯನ್ನು ಗೊತ್ತುಪಡಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೊನ್ಮುಖರಾದಾಗ, ಆದರ ಬಗ್ಗೆ ಆಗಾಗ ನೆನಪಿಸಿ ಕೊಳ್ಳಬೇಕು. ಇದು ನಿಮಗೆ ಗುರಿ ಮುಟ್ಟುವ ಕಾಲಮಿತಿ ಅಥವಾ ಗಡುವಿನ ಬಗ್ಗೆ ಎಚ್ಚರಿಸುತ್ತದೆ. ಅಲ್ಲದೇ ನಿಗದಿತ ಸಮಯದಲ್ಲಿ ಗುರಿ ತಲುಪಬೇಕೆಂಬ ನಿಮ್ಮ ಉದ್ದೇಶ ಸಕಾರಗೊಳ್ಳಲು ನೆರವಾಗುತ್ತದೆ.

# ನಂಬಿಕೆ ಮತ್ತು ದೃಶ್ಯೀಕರಣ : ನೀವು ಬ್ಯಾಸ್ಕೆಟ್ ಬಾಲ್ ಆಟಗಾರರನ್ನು ಗಮನಿಸಿದ್ದಾರಾ..? ಅವರು ಒಂದು ಗಂಟೆ ಕಾಲ ಬ್ಯಾಸ್ಕೆಟ್‍ನಲ್ಲಿ ಬಾಲ್ ಹಾಕುವ ಗುರಿಯನ್ನು ಹೊಂದಿ ಅದನ್ನೇ ಕಣ್ತುಂಬಿಕೊಂಡು ಸಾಧನೆ ಮಾಡಲು ಮುನ್ನುಗ್ಗುತ್ತಾರೆ. ನಿಮ್ಮ ಗುರಿ ಅದೇ ತೀರಿ ನಿಖರ ಮತ್ತು ಕರಾರುವಕ್ಕಾಗಿರಬೇಕು. ನಿಮ್ಮ ಗುರಿ ಸಾಧನೆಯಲ್ಲಿ ನಿಮಗೆ ದೃಢವಾದ ನಂಬಿಕೆ ಮತ್ತು ಆತ್ಮವಿಶ್ವಾಸ ಇರಬೇಕು.

Facebook Comments