ತ್ವಚೆಯ ರಕ್ಷಣೆಗೆ ಕಡಲೆಹಿಟ್ಟು ಸೋಪಿಗಿಂತ ಬೆಸ್ಟ್, ಹೇಗೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Chickpeaಭಾರತೀಯರ ಮನೆಗಳಲ್ಲಿ ಸಾವಿರಾರು ವರ್ಷಗಳಿಂದಲೂ ಸೌಂದರ್ಯವರ್ಧಕವಾಗಿ ಸಿಗುತ್ತಿದ್ದಂತಹ ವಸ್ತುವೆಂದರೆ ಅದು ಕಡಲೆ ಹಿಟ್ಟು. ಕಡಲೆ ಹಿಟ್ಟು ತುಂಬಾ ಸುಲಭವಾಗಿ ಸಿಗುವಂತಹ ಹಾಗೂ ಬಳಸಬಹುದಾದ ಸೌಂಧರ್ಯವರ್ಧಕ. ಇಂದು ಕೂಡ ಕಡಲೆಹಿಟ್ಟನ್ನು ಹಲವಾರು ರೀತಿಯಿಂದ ಫೇಸ್ ಪ್ಯಾಕ್ ಗಳಲ್ಲಿ ಬಳಸಲಾಗುತ್ತಾ ಇದೆ. ಸತ್ತ ಚರ್ಮವನ್ನು ತೆಗೆದುಹಾಕುವ ಗುಣ ಹೊಂಧಿರುವ ಕಡಲೆ ಹಿಟ್ಟನ್ನು ತ್ವಚೆ ಹಾಗೂ ಕೂದಲಿನ ಮಾಸ್ಕ್‌ಗಳಲ್ಲಿ ಬಳಸಲಾಗುತ್ತಾ ಇದೆ.

ಇಂದಿನ ದಿನಗಳಲ್ಲಿ ಬರುತ್ತಿರುವ ಸಾಬೂನು, ಫೇಶಿಯಲ್‌ಗಳಲ್ಲೂ ಕಡಲೆಹಿಟ್ಟು ಉಪಯೋಗಿಸುವುದನ್ನು ಕಾಣಬಹುದಾಗಿದೆ. ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದಂತಹ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಕಡಲೆ ಹಿಟ್ಟಿನಲ್ಲಿ ಕಲಬೆರಕೆ ಮಾಡಿರುವ ಕಾರಣದಿಂದ ಮನೆಯಲ್ಲೇ ಇದನ್ನು ತಯಾರಿಸಿಕೊಂಡರೆ ಉತ್ತಮ. ಚರ್ಮದ ಸಣ್ಣಸಣ್ಣ ಸಮಸ್ಯೆ, ನೆರಿಗೆ ಮತ್ತು ಚರ್ಮವು ಕಾಂತಿ ಕಳೆದುಕೊಳ್ಳುವ ಸಮಸ್ಯೆಗೆ ಕಡಲೆ ಹಿಟ್ಟನ್ನು ಬಳಸಬಹುದು.

# ಮುಖದ ಕಾಂತಿ ಹೆಚ್ಚಿಸಲು ಬ್ಯೂಟಿಪಾರ್ಲರ್ಗೆ ಹೋಗಿ ಫೇಶಿಯಲ್ಗಾಗಿ ಸಾವಿರಗಟ್ಟಲೆ ಸುರಿದು ಕೆಮಿಕಲ್ಗಳ ಲೇಪನ ಮಾಡಿಸಿಕೊಳ್ಳುವ ಬದಲು ಮನೆಯಲ್ಲೇ ಪಕ್ಕಾ ಆರೋಗ್ಯಕರವಾದ ನಿತ್ಯದ ಸಾಮಾಗ್ರಿಗಳನ್ನು ಬಳಸಬಾರದೇಕೆ? ಇದರಿಂದ ಸಮಯ, ಹಣ, ಆರೋಗ್ಯ ಎಲ್ಲವೂ ಉಳಿಯುವುದು.

# ಕಡಲೆಹಿಟ್ಟು ನೈಸರ್ಗಿಕ ಕ್ಲೆನ್ಸರ್. ಇದು ಚರ್ಮದ ಆಳದವರೆಗೂ ಅಡಗಿ ಕುಳಿತಿರುವ ಕೊಳೆಯನ್ನು ಹೊರದಬ್ಬಿ, ಸತ್ತ ಕೋಶಗಳನ್ನು ಗುಡಿಸುತ್ತದೆ. ಜೊತೆಗೆ ಚರ್ಮಕ್ಕೆ ಬಿಗಿತನವನ್ನು ತಂದುಕೊಡುತ್ತದೆ. ಹೀಗಾಗಿ ಪ್ರತಿನಿತ್ಯ ಸೋಪಿನ ಬದಲಿಗೆ ಕಡಲೆಹಿಟ್ಟಿನಲ್ಲಿ ಎರಡು ಬಾರಿ ಮುಖ ತೊಳೆಯುವುದೊಳಿತು.
ಮೊಡವೆಗಳಿಂದ ತಪ್ಪಿಸಿಕೊಳ್ಳಲು ತೇಯ್ದ ಗಂಧಕ್ಕೆ ಕಡಲೆಹಿಟ್ಟು, ಹಾಲು ಸೇರಿಸಿ ಪ್ರತಿನಿತ್ಯ ಹಚ್ಚಿಕೊಳ್ಳಿ.

# ಕಡಲೆಹಿಟ್ಟಿಗೆ ಸ್ವಲ್ಪ ಮೊಸರು, ಕೆನೆ, ಅರಿಶಿನ, ನಿಂಬೆ ರಸ, ಸ್ವಲ್ಪ ಸಕ್ಕರೆ ಇಲ್ಲವೇ ಜೇನುತುಪ್ಪ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆ ಬಿಡಿ. ನಂತರ ತಣ್ಣನೆ ನೀರಿನಿಂದ ಮುಖ ತೊಳೆಯಿರಿ. ಮುಖದ ಕಾಂತಿಯನ್ನು ನೀವೇ ಒರೆಗೆ ಹಚ್ಚಿ ನೋಡಿಕೊಳ್ಳಿ.

# ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಕಡಲೆಹಿಟ್ಟು ಎಣ್ಣೆ ನಿಯಂತ್ರಣಕ್ಕೆ ಸಹಕಾರಿ. ಒಣಚರ್ಮವಾದರೆ ಇದರಿಂದ ಮುಖ ತೊಳೆದ ನಂತರ ಬಾಡಿ ಲೋಶನ್ ಹಚ್ಚಿಕೊಳ್ಳಿ.ಕುತ್ತಿಗೆ, ಕಂಕಳು ಕಪ್ಪಾಗಿದ್ದರೆ ಪ್ರತಿದಿನ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಹಾಗೂ ವಾರಕ್ಕೆ ಮೂರು ಬಾರಿ ಕಡಲೆಹಿಟ್ಟು, ಮೊಸರ ಕೆನೆ, ಅರಿಶಿನ, ನಿಂಬೆರಸದ ಪೇಸ್ಟ್ ಹಚ್ಚಿಕೊಳ್ಳಿ.

# ನಯವಾದ ಚರ್ಮಕ್ಕಾಗಿ ಕಡಲೆಹಿಟ್ಟು, ಹಾಲು, ಕಿತ್ತಳೆರಸದ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಮೇಲ್ಮುಖವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡು 15 ನಿಮಿಷಗಳ ಬಳಿಕ ಮುಖ ತೊಳೆಯಿರಿ

Facebook Comments