ಒಡೆದ ಹಿಮ್ಮಡಿಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

footಚಳಿಗಾಲ ಶರುವಾಯಿತು ಎಂದರೆ ಹಿಮ್ಮಡಿ ಒಡೆಯುವುದು, ಪಾದಗಳಲ್ಲಿ ಬಿರುಕು ಕಂಡು ಬರುವುದು ಸರ್ವೇ ಸಾಮಾನ್ಯ.  ಕೆಲವರಿಗಂತೂ ಪಾದಗಳಲ್ಲಿ ಬಿರುಕು ಉಂಟಾಗಿ ರಕ್ತ ಬರಲಾರಂಭಿಸುತ್ತದೆ. ಈ ನೋವು ಸಹಿಸಲು ಅಸಾಧ್ಯ. ಇಲ್ಲಿ ನಾವು ಪಾದಗಳಲ್ಲಿ ಬಿರುಕು ಉಂಟಾಗುವುದನ್ನು ತಡೆಯಲು ಕೆಲವೊಂದು ಮನೆಮದ್ದು ನೀಡಿದ್ದೇವೆ.

ಗಡುಸಾದ ನೆಲ, ಶೀತವಿರುವ ಜಾಗದಲ್ಲಿ ದೀರ್ಘಕಾಲ ನಿಲ್ಲುವುದು, ಅತಿಯಾಗಿ ನಡೆಯುವುದು ಮತ್ತು ಅತಿ ದೇಹಭಾರ ಕೂಡ ಹಿಮ್ಮಡಿ ಒಡೆಯಲು ಪ್ರಮುಖ ಕಾರಣಗಳು. ಇದಕ್ಕೆ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ನೀಡಬೇಕು. ಇಲ್ಲದೆ ಇದ್ದರೆ ನಡೆದಾಡಲು ಕಷ್ಟವಾಗುವುದು ಮತ್ತು ಅದರಿಂದ ಸೋಂಕು ಕಾಣಿಸಿಕೊಳ್ಳುವುದು. ಹಿಮ್ಮಡಿ ಒಡೆಯುವುದನ್ನು ಕಡೆಗಣಿಸಿದರೆ ಆಗ ದೊಡ್ಡ ಬಿರುಕು ಕಾಣಿಸಬಹುದು. ಮನೆಯಲ್ಲೇ ತಯಾರಿಸಿದ ಕೆಲವೊಂದು ಮಾಸ್ಕ್‌ಗಳು ತುಂಬಾ ಪರಿಣಾಮಕಾರಿ.

# ಬೇವಿನ ಎಲೆಗಳು :  ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕು ಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

# ಬಾಳೆಹಣ್ಣಿನ : ಬಾಳೆಹಣ್ಣಿನ ಪೇಸ್ಟ್ ಒಂದು ದೊಡ್ಡ ಬಾಳೆಹಣ್ಣನ್ನು ಕಿವುಚಿ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬಾಳೆಹಣ್ಣು ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುವ ಕಾರಣ ಹೊರಚರ್ಮ ಶೀಘ್ರವಾಗಿ ಕಳಚಿಕೊಂಡು ಒಳಚರ್ಮಕ್ಕೆ ಆರೋಗ್ಯಕರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಮಯದ ಆಭಾವವಿರುವವರು ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.

# ಮೊಸರು  :  ಮೊಸರಿನ ರೆಸಿಪಿ ತನ್ನ ತೇವಕಾರಕ ಹಾಗೂ ಸೂಕ್ಷ್ಮಾಣುಜೀವಿ ಪ್ರತಿಬ0ಧಕ ಗುಣಧರ್ಮಗಳ ಕಾರಣದಿ0ದಾಗಿ ಒಡೆದ ಹಿಮ್ಮಡಿಗಳಿಗೆ ಮನೆಮದ್ದಿನ ರೂಪದಲ್ಲಿ ಮೊಸರು ಚಿರಪರಿಚಿತವಾಗಿದೆ. ಬಿಳಿ ವಿನೆಗರ್ ನೊ0ದಿಗೆ ಬೆರೆಸಿದಾಗ, ದ್ರಾವಣವು ಎಲ್ಲಾ ಮೃತ ಚರ್ಮವನ್ನೂ ನಿವಾರಿಸಿಬಿಡುತ್ತದೆ ಹಾಗೂ ಜೊತೆಗೆ ಬಿರುಕುಗಳ ಆಳದಲ್ಲಿ ಸ0ಚಯಗೊ0ಡಿರಬಹುದಾದ ಧೂಳುಕೊಳೆಗಳೆಲ್ಲವನ್ನೂ ತೊಡೆದುಹಾಕುತ್ತದೆ.

# ಅವಕಾಡೋ ಮತ್ತು ಬಾಳೆಹಣ್ಣಿನ ಕಾಲಿನ ಮಾಸ್ಕ್  :  ಅವಕಾಡೋವಿನಲ್ಲಿ ಇರುವಂತಹ ತೈಲ, ವಿಟಮಿನ್ ಮತ್ತು ಕೊಬ್ಬು ಹಾನಿಗೊಳಗಾಗಿರುವ ಚರ್ಮವನ್ನು ಸರಿಪಡಿಸುವುದು. ಇದನ್ನು ನೈಸರ್ಗಿಕ ಬೆಣ್ಣೆ ಎಂದೇ ಕರೆಯಲಾಗುವುದು. ಬಾಳೆಹಣ್ಣಿನಲ್ಲಿ ಒಳ್ಳೆಯ ಮಾಯಿಶ್ಚರೈಸರ್ ಇದೆ ಮತ್ತು ಚರ್ಮವನ್ನು ತುಂಬಾ ನಯವಾಗಿಸುವುದು.
ವಿಧಾನ : ಒಂದು ಹಣ್ಣಾದ ಬಾಳೆಹಣ್ಣು ಮತ್ತು ಅರ್ಧ ಅವಕಾಡೋವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಪಾದ ಮತ್ತು ಹಿಮ್ಮಡಿಗೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಿಮ್ಮಡಿ ನಯವಾಗುವ ತನಕ ಪ್ರತಿನಿತ್ಯ ನೀವು ಹೀಗೆ ಮಾಡಿ.

#ಲಿಂಬೆರಸ ಮತ್ತು ಪೆಟ್ರೋಲಿಯಂ ಜೆಲ್ :   ಲಿಂಬೆರಸದಲ್ಲಿ ಇರುವಂತಹ ಆಮ್ಲೀಯ ಗುಣವು ಒಣಚರ್ಮವನ್ನು ತೆಗೆದುಹಾಕುವುದು. ಪೆಟ್ರೋಲಿಯಂ ಜೆಲ್ ನಲ್ಲಿ ಒಳ್ಳೆಯ ಮೊಶ್ಚಿರೈಸರ್ ಇದ್ದು, ಇದು ಚರ್ಮವನ್ನು ನಯ ಹಾಗೂ ಸುಂದರವಾಗಿಸುವುದು.
ವಿಧಾನ : 20 ನಿಮಿಷ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ಕಾಲನ್ನು ಇಡಿ. ಇದರ ಬಳಿಕ ಕಾಲನ್ನು ಒಣ ಟವೆಲ್ ನಿಂದ ಒರೆಸಿಕೊಳ್ಳಿ. ಒಂದು ಬೌಲ್ ನಲ್ಲಿ ಒಂದು ಚಮಚ ಪೆಟ್ರೋಲಿಯಂ ಜೆಲ್ ಮತ್ತು ಅದಕ್ಕೆ ಕೆಲವು ಹನಿ ನಿಂಬೆರಸ ಹಾಕಿ. ಈ ಮಿಶ್ರಣವನ್ನು ಹಿಮ್ಮಡಿ ಹಾಗೂ ಪಾದಕ್ಕೆ ಹಚ್ಚಿಕೊಳ್ಳಿ ಮತ್ತು ಚರ್ಮವು ಸರಿಯಾಗಿ ಇದನ್ನು ಹೀರಿಕೊಳ್ಳುವ ತನಕ ಮಸಾಜ್ ಮಾಡಿ. * ಕಾಟನ್ ಸಾಕ್ಸ್ ಧರಿಸಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. *ಪ್ರತಿನಿತ್ಯ ಮಲಗುವ ಮೊದಲು ಹೀಗೆ ಮಾಡಿ.

 

#ಹರಳೆಣ್ಣೆ : 
ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲವು ಸಮೃದ್ಧವಾಗಿದೆ ಮತ್ತು ಇದರಿಂದ ಅದು ಚರ್ಮಕ್ಕೆ ತೇವಾಂಶ ನೀಡುವುದು. ಹರಳೆಣ್ಣೆಯು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕು ಬರದಂತೆ ತಡೆದು ಚರ್ಮವನ್ನು ನಯವಾಗಿಸುವುದು. ವಿಧಾನ *ಬಿಸಿ ನೀರಿನಲ್ಲಿ ಚರ್ಮವನ್ನು ಅದ್ದಿಡಿ ಮತ್ತು ಒರಟು ಕಲ್ಲು ಬಳಸಿ ಹಿಮ್ಮಡಿ ಸ್ಕ್ರಬ್ ಮಾಡಿ. ಟವೆಲ್ ನಿಂದ ಕಾಲನ್ನು ಒರೆಸಿಕೊಳ್ಳಿ. ಈಗ ಒಡೆದಿರುವಂತಹ ಹಿಮ್ಮಡಿ ಮೇಲೆ ಹರಳೆಣ್ಣೆಯನ್ನು ಸರಿಯಾಗಿ ಹಚ್ಚಿಕೊಳ್ಳಿ. ಕಾಟನ್ ಸಾಕ್ಸ್ ಧರಿಸಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಇದನ್ನು ಪ್ರತಿನಿತ್ಯ ಮಾಡಿದರೆ ಒಡೆದ ಹಿಮ್ಮಡಿ ಸಮಸ್ಯೆಯು ಬೇಗನೆ ನಿವಾರಣೆಯಾಗುವುದು.

Facebook Comments