ಆಸ್ಟ್ರೇಲಿಯಾ ನೆಲದಲ್ಲಿ ಹೊಸ ದಾಖಲೆ ಮಾಡಿದ ರಿಷಭ್‍ ಪಂತ್

ಈ ಸುದ್ದಿಯನ್ನು ಶೇರ್ ಮಾಡಿ

Rishabh pantಸಿಡ್ನಿ, ಜ.4- ಕ್ಯೂಲ್‍ಕ್ಯಾಪ್ಟನ್ ಮಹೇಂದ್ರಸಿಂಗ್‍ಧೋನಿಯ ಸ್ಥಾನವನ್ನು ತುಂಬಿರುವ ಯುವ ವಿಕೆಟ್‍ಕೀಪರ್ ರಿಷಭ್‍ಪಂತ್ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಆಸ್ಟ್ರೇಲಿಯಾದ ನೆಲದಲ್ಲಿ ಶತಕ ಸಿಡಿಸಿದ ಮೊದಲ ವಿಕೆಟ್‍ಕೀಪರ್ ಎಂಬ ಕೀರ್ತಿಗೆ ಭಾಜನರಾಗಿರುವ ಪಂತ್ ಅತಿ ಕಿರಿಯ ವಯಸ್ಸಿ(21 ವರ್ಷ 92 ದಿನ) ಗೆ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರನಾಗಿಯೂ ಪಂತ್ ಗುರುತಿಸಿಕೊಂಡಿದ್ದಾರೆ.

ಇದಕ್ಕೂ ಮುಂಚೆ ಸಚಿನ್ (18 ವರ್ಷ 256) ಶತಕ ಸಿಡಿಸಿದ ಬ್ಯಾಟ್ಸ್‍ಮನ್ ಆಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‍ಕೀಪರ್‍ಗಳ ಸಾಲಿನಲ್ಲಿ ಫಾರೂಕ್ ಇಂಜಿನಿಯರ್ (89 ರನ್), ಕಿರಣ್ ಮೋರೆ (67*ರನ್), ಪಾರ್ಥೀವ್ ಪಟೇಲ್ (62 ರನ್).

150ಕ್ಕೂ ಹೆಚ್ಚು ರನ್ ಗಳಿಸಿದ ವಿಕೆಟ್‍ಕೀಪರ್‍ಗಳು:
ಬುದಿ ಕುಂದರಿನ್ (192 ರನ್), ನಯನ್ ಮೊಂಗೀಯಾ (152 ರನ್), ಎಂ.ಎಸ್.ಧೋನಿ (224 ರನ್), ರಿಷಭ್‍ಪಂತ್ (159* ರನ್)

Facebook Comments