ಬೆಂಗಳೂರು ಬುಲ್ಸ್‌’ಗೆ ಪ್ರೊಕಬಡ್ಡಿ ಚಾಂಪಿಯನ್‌ ಪಟ್ಟ, ಸಿಎಂ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Bulls

ಮುಂಬೈ: ಸ್ಟಾರ್‌ ರೈಡರ್‌ ಪವನ್‌ ಶೆಹ್ರಾವತ್‌ ಅವರ ಭರ್ಜರಿ ರೈಡ್‌ಗಳ ನೆರವಿನಿಂದಾಗಿ ಈ ಬಾರಿಯ ಪ್ರೊ ಕಬಡ್ಡಿ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ ಜಯಂಟ್ಸ್‌ ತಂಡವನ್ನು 38-33 ಅಂಕಗಳ ಅಂತರದಲ್ಲಿ ಮಣಿಸಿ ಬೀಗಿದ ಬೆಂಗಳೂರು ಬುಲ್ಸ್‌ ಪಡೆ ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಬೆಂಗಳೂರು ಪರ ಪವನ್‌ಕುಮಾರ್ ಅತ್ಯಧಿಕ 22 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಗುಜರಾತ್ ಪರ ಸಚಿನ್ 10 ಅಂಕ ಗಳಿಸಿದರೆ, ಪ್ರಪಂಜನ್ ಹಾಗೂ ರೋಹಿತ್ ತಲಾ 5 ಅಂಕ ಗಳಿಸಿ ಮಿಂಚಿದರು. ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಗುಜರಾತ್‌ನ್ನು 41-29 ಅಂಕಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಗುಜರಾತ್ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಯುಪಿ ಯೋಧಾವನ್ನು ಮಣಿಸಿ ಫೈನಲ್‌ಗೆ ಬಂದಿತ್ತು.

# ಮುಖ್ಯಮಂತ್ರಿ ಅಭಿನಂದನೆ  :   ಇಂದು ನಡೆದ ಪ್ರೊ ಕಬಡ್ಡಿ ಆರನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಗುಜರಾತ್ ಫಾರ್ಚುನ್ ಜೇನ್ಟ್ಸ್ ವಿರುದ್ಧ ಜಯ ಗಳಿಸಿದ ಬೆಂಗಳೂರು ಬುಲ್ಸ್ ತಂಡದವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಸಿಂಧನೂರಿನಿಂದ ಇಂದು ಸಂಜೆ ಹಿಂತಿರುಗಿದ ನಂತರ ತಮ್ಮ ನೆಚ್ಚಿನ ಕ್ರೀಡೆ ಕಬಡ್ಡಿಯನ್ನು ಟಿವಿಯಲ್ಲಿ ವೀಕ್ಷಿಸಿದರು. ಈ ಪಂದ್ಯದಲ್ಲಿ 5 ಪಾಯಿಂಟ್ ಅಂತರದಲ್ಲಿ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ ತಂಡದವರನ್ನು ಹೃತ್ಪೂರ್ವಕವಾಗಿ ಅವರು ಅಭಿನಂದಿಸಿದ್ದಾರೆ.

Facebook Comments

Sri Raghav

Admin