38 ವರ್ಷಗಳ ನಂತರ ಭಾರತಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿ

ಈ ಸುದ್ದಿಯನ್ನು ಶೇರ್ ಮಾಡಿ

indಸಿಡ್ನಿ, ಜ.6- ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ವಿರಾಟ್ ಪಡೆ 38 ವರ್ಷಗಳ ನಂತರ ಗೆದ್ದು ಬೀಗುವ ಹೊಸ್ತಿಲಿಗೆ ಬಂದು ನಿಂತಿದೆ. ಅಂತಿಮ ಟೆಸ್ಟ್ ನ 4ನೆ ದಿನದ ಬಹುತೇಕ ಆಟವು ಕಳಪೆ ವಾತಾವರಣ ಹಾಗೂ ಬೆಳಕಿನ ಅವ್ಯವಸ್ಥೆಯಿಂದ ಸ್ಥಳಗಿತಗೊಂಡು ಅಂತಿಮ ದಿನದ ಆಟ ತೀವ್ರ ಕುತೂಹಲ ಕೆರಳಿಸಿದೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2-1 ರಿಂದ ಮುನ್ನಡೆ ಹೊಂದಿರುವ ವಿರಾಟ್ ಪಡೆ ಅಂತಿಮ ಪಂದ್ಯ ಡ್ರಾ ಮಾಡಿಕೊಂಡರೂ ಕೂಡ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ಗೆದ್ದು ಬೀಗಲಿದೆ.

ಕುಲ್‍ದೀಪ್ ಸ್ಪಿನ್ನರ್ ಚಮತ್ಕಾರ:  ಕಳಪೆ ವಾತಾವರಣದಿಂದಾಗಿ ನಾಲ್ಕನೇ ದಿನದ ಪಂದ್ಯ ತಡವಾಗಿ ಆರಂಭಗೊಂಡ ನಂತರ ಆಸ್ಟ್ರೇಲಿಯಾದ ಬಾಲಂಗೋಚಿ ಆಟಗಾರರು ಫಾಲೋಆನ್ ಭೀತಿಯಿಂದ ತಪ್ಪಿಸಿಕೊಳ್ಳಬೇಕೆಂಬ ಲೆಕ್ಕಾಚಾರದಿಂದಲೇ ಅಖಾಡಕ್ಕೆ ಇಳಿದರೂ ಸ್ಪಿನ್ನರ್ ಕುಲ್‍ದೀಪ್‍ರ ಸ್ಪಿನ್ ಚಮತ್ಕಾರದಿಂದ 300 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ಆಸ್ಟ್ರೇಲಿಯಾ 30 ವರ್ಷಗಳ ನಂತರ ಫಾಲೋಆನ್ ಭೀತಿಗೆ ಬಿದ್ದಿದೆ.

ನಾಲ್ಕನೇ ದಿನದ ಆಟ ಆರಂಭಿಸಿದ ಪ್ಯಾಟ್ ಕಮ್ಮಿನ್ಸ್ (25 ರನ್) ಒಂದು ರನ್ ಅನ್ನು ಕೂಡ ಕಲೆ ಹಾಕದೆ ಮೊಹಮ್ಮದ್ ಶಮಿ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದರು. ಹ್ಯಾಂಡ್ಸ್‍ಕೋಮ್ (37 ರನ್, 5 ಬೌಂಡರಿ), ಲಿಯಾನ್ (0 ರನ್), ಹೇಜಲ್‍ವುಡ್ (21 ರನ್, 2 ಬೌಂಡರಿ)ರನ್ನು ಬಲಿ ಪಡೆಯುವ ಮೂಲಕ ಕುಲ್‍ದೀಪ್‍ಯಾದವ್ ಆಸ್ಟ್ರೇಲಿಯಾದ ಇನ್ನಿಂಗ್ಸ್‍ಗೆ ಮಂಗಳ ಹಾಡಿದರು.

ಆಸೀಸ್ ಪರ ಮಿಚಲ್ ಸ್ಟ್ರಾಕ್ (29 ರನ್, 3 ಬೌಂಡರಿ) ಅಜೇಯರಾಗಿ ಉಳಿದರು. ಭಾರತ ತಂಡದ ಪರ ಕುಲ್‍ದೀಪ್ ಯಾದವ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಮೊಹಮ್ಮದ್ ಶಮಿ, ರವೀಂದ್ರಾಜಾಡೇಜಾ ತಲಾ 2 ವಿಕೆಟ್ ಕಬಳಿಸಿದರೆ, ಒಂದು ವಿಕೆಟ್ ಬೂಮ್ರಾ ಪಾಲಾಯಿತು. ಫಾಲೋಆನ್‍ನಿಂದಾಗಿ 2ನೆ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 1.5 ಓವರ್‍ಗಳಲ್ಲಿ 6 ರನ್ ಗಳಿಸಿದ್ದಾಗ ಉಂಟಾದ ಬೆಳಕಿನ ಕೊರತೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು.

Facebook Comments