ಎಬಿಡಿ ವಿಲಿಯರ್ಸ್ ನನ್ನ ಸ್ಫೂರ್ತಿ : ಪವನ್‍ ಶೆರಾವತ್

ಈ ಸುದ್ದಿಯನ್ನು ಶೇರ್ ಮಾಡಿ

pawanಬೆಂಗಳೂರು, ಜ.6- ಪ್ರೊ ಕಬ್ಬಡ್ಡಿ ಸರಣಿ ಆರಂಭವಾದಾಗಿನಿಂದಲೂ ನಮ್ಮ ಬೆಂಗಳೂರು ಬುಲ್ಸ್ ಚಾಂಪಿಯನ್ಸ್ ಆಗಬೇಕೆಂಬ ಅಪಾರ ಕಬ್ಬಡಿ ಪ್ರಿಯರ ಬಯಕೆ ಕೊನೆಗೂ ಈಡೇರಿದೆ. ಬೆಂಗಳೂರು ಬುಲ್ಸ್ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪವನ್ ಈಗ ಎಲ್ಲರ ಮೆಚ್ಚಿನ ಕಣ್ಮಣಿಯಾಗಿದ್ದಾರೆ.

ಪಿಕೆಎಲ್-6ನ ಆರಂಭಿಕ ಪಂದ್ಯದಲ್ಲೇ 20 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದ ಸ್ಟಾರ್ ರೈಡರ್ ಪವನ್, ಅಂತಿಮ ಪಂದ್ಯದಲ್ಲೂ 23 ಪಾಯಿಂಟ್ಸ್ ಕಲೆ ಹಾಕುವ ಮೂಲಕ ಬುಲ್ಸ್ ಅನ್ನು 38-33 ಅಂಕಗಳಿಂದ ಗೆಲುವು ತಂದು ಕೊಟ್ಟು ತಂಡವನ್ನು ಚಾಂಪಿಯನ್ಸ್ ಆಗಿ ಹೊರಹೊಮ್ಮಿಸಿದ್ದಾರೆ.

ನಂ.17ರ ಕರಾಮತ್ತು:  ಐಪಿಎಲ್ ಆವೃತ್ತಿ ಆರಂಭ ಗೊಂಡಾಗಿನಿಂದಲೂ ಚಾಂಪಿಯನ್ಸ್ ಆಗುವಲ್ಲಿ ಆರ್‍ಸಿಬಿ ತಂಡ ಎಡವಿ ದರೂ ಕೂಡ ಆ ತಂಡದಲ್ಲಿರುವ ಆಟಗಾರರಾದ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ, ಕಬ್ಬಡಿಯಲ್ಲಿ ಡುಬ್ಕಿ, ಫ್ಲೈಯಿಂಗ್ ಹಾಗೂ ಟಚ್ ಪಾಯಿಂಟ್ಸ್‍ನಿಂದ ಗಮನ ಸೆಳೆದಿರುವ ಪವನ್ ಶೆರಾವತ್‍ಗೂ ಈ ಆಟಗಾರರೇ ಸ್ಫೂರ್ತಿಯಂತೆ.

ಐಪಿಎಲ್‍ನಲ್ಲಿ 17ನೇ ನಂಬರ್ ಜರ್ಸಿ ಧರಿಸುವ ಎಬಿಡಿಯಂತೆ ಪವನ್‍ಗೂ ಕೂಡ ಪಂದ್ಯವನ್ನು ಗೆಲ್ಲಿಸುವ ಸಾಮಥ್ರ್ಯರಾಗಿದ್ದು ಎಬಿಡಿಯ ಸ್ಫೂರ್ತಿಯಿಂದಲೇ ಆರ್‍ಸಿಬಿ ತಂಡದಲ್ಲಿ ಅವರು ಧರಿಸುವ 17ನೆ ನಂಬರ್‍ನ ಜರ್ಸಿ ಧರಿಸಿಯೇ ಪವನ್ ಇಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಎಬಿ ಡಿವಿಲಿಯರ್ಸ್ ತಂಡ ಸೋಲಿನ ಅಂಚಿಗೆ ತಲುಪಿದರೂ ಅವರು ತಂಡವನ್ನು ಸಾಕಷ್ಟು ಬಾರಿ ಗೆಲ್ಲಿಸಿದಂತೆ ಪವನ್ ಶೆರಾವತ್ ಕೂಡ ಬುಲ್ಸ್ ತಂಡವು ಅನೇಕ ಬಾರಿ ಸೋಲಿನ ದವಡೆಗೆ ಸಿಲುಕಿದಾಗ ತನ್ನ ಚಾಣಾಕ್ಷತೆಯಿಂದ ಪಾಯಿಂಟ್ಸ್ ಗಳನ್ನು ಕಲೆ ಹಾಕುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ.

ಪಿಕೆಎಲ್‍ನ ಸೀಸನ್ 5ರಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಕೂಡ ಹೆಚ್ಚು ಕಾಲ ಬೆಂಚ್ ಕಾದಿದ್ದ ಪವನ್ ಶೆರಾವತ್ 6ನೇ ಋತುವಿನಲ್ಲಿ 52 ಲಕ್ಷ ದಾಖಲೆ ಮೊತ್ತಕ್ಕೆ ಬಿಕರಿಯಾದ ಪವನ್ ಈ ಋತುವಿನಲ್ಲಿ 271 ರೈಡಿಂಗ್ ಪಾಯಿಂಟ್ಸ್ ಪಡೆದು ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್‍ಕುಮಾರ್ ಹಾಗೂ ತರಬೇತುದಾರರಾದ ರಣದೀರ್‍ಸಿಂಗ್ ಸಿಂಗ್ ಶೆರಾವತ್ ಹಾಗೂ ಕನ್ನಡಿಗ ಬಿ.ಸಿ.ರಮೇಶ್‍ರವರ ಸಂತಸವನ್ನು ಹೆಚ್ಚಿಸಿದ್ದಾರೆ.

Facebook Comments