ಈ 4 ತೊಂದರೆಗಳಿಂದ ಬಳಲುತ್ತಿರುವವರು ತಪ್ಪದೆ ಒಣದ್ರಾಕ್ಷಿ ತಿನ್ನಿ

ಈ ಸುದ್ದಿಯನ್ನು ಶೇರ್ ಮಾಡಿ

raisinsಕಿಶ್ಮಿಶ್ ಎಂದು ಕರೆಯಲ್ಪಡುವ ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಇದೆ. ಆದರೆ ಬಾದಾಮಿ, ಅಕ್ರೋಟು ಮೊದಲಾದ ದುಬಾರಿ ಫಲಗಳ ಎದುರು ಈ ಒಣದ್ರಾಕ್ಷಿ ಕೊಂಚ ಅಗ್ಗವಾಗಿರುವ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ಫಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಈ ಒಣದ್ರಾಕ್ಷಿಗಳ ಸೇವನೆಯಿಂದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ಈ ಅದ್ಭುತ ಒಣಫಲ ಹಲವು ವಿಟಮಿನ್, ಖನಿಜಗಳು ಮತ್ತು ಇತರ ಆರೋಗ್ಯವನ್ನು ಉತ್ತಮಗೊಳಿಸುವ ಸಂಯುಕ್ತಗಳನ್ನು ಹೊಂದಿದ್ದು ಒಟ್ಟಾರೆ ಆರೋಗ್ಯದ ವೃದ್ದಿಗೆ ತುಂಬಾ ಅಗತ್ಯವಾಗಿವೆ. ಅಲ್ಲದೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಲೂ ನೆರವಾಗುತ್ತವೆ. ಒಂದು ವೇಳೆ ನೀವು ಒಣದ್ರಾಕ್ಷಿಯನ್ನು ಆಗಾಗ ಸಿಹಿ ತಿನಿಸುಗಳಲ್ಲದೇ ಪ್ರತ್ಯೇಕವಾಗಿ ತಿನ್ನದೇ ಇದ್ದಲ್ಲಿ ಇಂದಿನಿಂದಲೇ ಕೊಂಚ ಪ್ರಮಾಣವನ್ನು ನಿತ್ಯವೂ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೆಲವಾರು ಪ್ರಯೋಜನಗಳಿವೆ.

# ತೂಕ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ : 
ಒಂದು ವೇಳೇ ನಿಮ್ಮ ತೂಕ ಅಗತ್ಯ ಕನಿಷ್ಟ ತೂಕಕ್ಕಿಂತಲೂ ಕಡಿಮೆ ಇದ್ದರೆ ಒಣದ್ರಾಕ್ಷಿ ಈ ಕೊರತೆಯನ್ನು ತುಂಬಬಲ್ಲುದು. ಹೌದು! ಇದರಲ್ಲಿರುವ ಸಾಂದ್ರೀಕೃತ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಎಂಬ ಸಕ್ಕರೆಗಳು ತಕ್ಷಣವೇ ಶಕ್ತಿಯನ್ನು ಒದಗಿಸಲು ಶಕ್ತವಾಗಿವೆ. ಒಣದ್ರಾಕ್ಷಿಯಲ್ಲಿರುವ ವಿಟಮಿನ್ನುಗಳು, ಅಮೈನೋ ಆಮ್ಲಗಳು, ಖನಿಜಗಳು, ಸೆಲೆನಿಯಂ, ಗಂಧಕ ಮತ್ತು ಇತರ ಪೋಷಕಾಂಶಗಳು ನಿಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಹಾಗೂ ಬೆಳೆಯಲು ನೆರವಾಗುವ ಮೂಲಕ ಉತ್ತಮ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯ ಜೊತೆಗೇ ಆರೋಗ್ಯಕರವಾಗಿ ತೂಕವನ್ನೂ ಹೆಚ್ಚಿಸುತ್ತದೆ.

# ಮಲಬದ್ಧತೆಯನ್ನು ನಿವಾರಿಸುತ್ತದೆ : 
ಒಂದು ವೇಳೆ ನಿಮಗೆ ಮಲಬದ್ದತೆಯುಂಟಾಗಿದ್ದರೆ ಹಾಗೂ ಇದು ಸತತವಾಗಿ ಕಾಡುತ್ತಿದ್ದು ಮನಃಶಾಂತಿಯನ್ನೇ ಕದಡಿದ್ದರೆ ಒಣದ್ರಾಕ್ಷಿಯ ಸೇವನೆಯನ್ನು ಇಂದಿನಿಂದಲೇ ಪ್ರಾರಂಭಿಸಿ. ಇವುಗಳಲ್ಲಿ ಉತ್ತಮ ಪ್ರಮಾಣ ಕರಗುವ ನಾರು ಇದೆ ಹಾಗೂ ತನ್ಮೂಲಕ ಕಲ್ಮಶಗಳನ್ನು ಮೃದುವಾಗಿಸಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತೆ ಮಾಡುತ್ತದೆ. ತದ್ವಿರುದ್ದವಾಗಿ ಒಂದು ವೇಳೆ ಸತತವಾಗಿ ಅತಿಸಾರ ಮತ್ತು ಆಮಶಂಕೆ ಎದುರಾಗಿದ್ದರೂ ಒಣದ್ರಾಕ್ಷಿ ಇದನ್ನು ಸರಿಪಡಿಸಲು ನೆರವಾಗುತ್ತದೆ.

# ರಕ್ತಹೀನತೆಯನ್ನು ಹೋಗಲಾಡಿಸುತ್ತದೆ : 
ರಕ್ತದಲ್ಲಿ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಎದುರಾಗುತ್ತದೆ. ಒಣದ್ರಾಕ್ಷಿಗಳಲ್ಲಿ ಕಬ್ಬಿಣ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ಪೋಷಕಾಂಶಗಳು ಹೇರಳವಾಗಿವೆ. ಇವು ಹೊಸ ರಕ್ತಕಣಗಳನ್ನು ನಿರ್ಮಿಸಲು ಅಗತ್ಯವಾಗಿದ್ದು ನಿಯಮಿತವಾದ ಸೇವನೆಯಿಂದ ಶೀಘ್ರವೇ ರಕ್ತಹೀನತೆಯ ತೊಂದರೆ ಇಲ್ಲವಾಗುತ್ತದೆ. ಅಲ್ಲದೇ ರಕ್ತಕ್ಕೆ ಅಗತ್ಯವಾಗಿ ಬೇಕಾದ ತಾಮ್ರದ ಅಂಶವೂ ಒಣದ್ರಾಕ್ಷಿಯಲ್ಲಿದೆ.

# ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ : 
ಒಣದ್ರಾಕ್ಷಿಯಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತನಾಳಗಳ ಸೆಡೆತವನ್ನು ಸಡಿಲಿಸಿ ಸುಲಭವಾಗಿ ಹಿಗ್ಗಲು ನೆರವಾಗುವಂತೆ ಮಾಡುತ್ತದೆ. ಒಣದ್ರಾಕ್ಷಿಯಲ್ಲಿರುವ ಕರಗುವ ನಾರು ರಕ್ತನಾಳಗಳು ಪೆಡಸಾಗಿರುವುದನ್ನು ಕಡಿಮೆಗೊಲಿಸಲು ನೆರವಾಗುತ್ತವೆ. ತನ್ಮೂಲಕ ರಕ್ತನಾಳಗಳಲ್ಲಿ ರಕ್ತಪರಿಚಲನೆ ಸರಾಗವಾಗಿ ನಡೆಯುತ್ತದೆ ಹಾಗೂ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

Facebook Comments