ಒಂದೇ ಕುಟುಂಬದ 6 ಜನರ ಆತ್ಮಹತ್ಯೆ ಪ್ರಕರಣ : ಮೂವರ ವಿರುದ್ಧ ದೂರು

ಈ ಸುದ್ದಿಯನ್ನು ಶೇರ್ ಮಾಡಿ

6-Suicideಕೊಪ್ಪಳ,ಜ.6- ತಾಲೂಕಿನ ಮೆತಗಲ್ ಗ್ರಾಮದಲ್ಲಿ ಒಂದೇ ಕುಟುಂಬದ 6 ಜನರ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೇಖರಯ್ಯನ ಸಹೋದರರಾದ ಚನ್ನಬಸಯ್ಯ, ರುದ್ರಯ್ಯ ಮತ್ತು ಅಳಿಯ ಶರಣಯ್ಯ ಕಟಗಿಮಠ ವಿರುದ್ಧ ದೂರು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಶೇಖರಯ್ಯನ ಸೊಸೆ ಲಲಿತಾ ಬಸಯ್ಯ ನೆರಕಲಮಠ ನೀಡಿದ ದೂರಿನ ಅನ್ವಯ ಮೂವರ ಮೇಲೆ ಕಲಂ 498(ಎ), 306 ರೆಡ್ ವಿತ್ 34 ಐಪಿಸಿ ಅಡಿಯಲ್ಲಿ ದೂರು ದಾಖಲಾಗಿದೆ. ಶೇಖರಯ್ಯನ ಮಗಳಾದ ಗೌರಮ್ಮಳ ಪತಿ ಶರಣಯ್ಯ ಗೌರಮ್ಮಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ತವರು ಮನೆಯಲ್ಲಿಯೇ ಬಿಟ್ಟು ಹೋಗಿದ್ದ.

ಅಲ್ಲದೇ ಶೇಖರಯ್ಯನ ಸಹೋದರರಾದ ಚನ್ನಬಸಯ್ಯ ಹಾಗೂ ರುದ್ರಯ್ಯ ಆಸ್ತಿ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದಿದ್ದ ಶೇಖರಯ್ಯ, ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೀಗಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )