ಚಳಿಗಾಲದಲ್ಲಿ ಗರ್ಭಿಣಿಯರು ಆರೋಗ್ಯ ಹೇಗೆ ಕಾಯ್ದುಕೊಳ್ಳಬೇಕು..?

ಈ ಸುದ್ದಿಯನ್ನು ಶೇರ್ ಮಾಡಿ

Pregnent

ಚಳಿಗಾಲದಲ್ಲಿ ಗರ್ಭ ನಿರ್ವಹಣೆ ಸ್ವಲ್ಪ ಕಷ್ಟವಾಗುತ್ತದೆ. ಚಳಿಗಾಲದ ತೀವ್ರತೆಯು ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವಂತೆ ಮಾಡುತ್ತದೆ. ಈ ಚಳಿಗಾಲದಲ್ಲಿ ಗರ್ಭಿಣಿಯರು ಸುರಕ್ಷಿತವಾಗಿ, ಸೊಗಸಾಗಿ ಕಳೆಯಲು ಕೆಲವು ಪ್ರಾಯೋಗಿಕ ಸಲಹೆಗಳಿವೆ.  ಗರ್ಭಿಣಿಯರು ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯದಿದ್ದರೆ ನಿರ್ಜಲೀಕರಣವಾಗುವ ಸಾಧ್ಯತೆ ಇದೆ. ಇದು ತಾಯಿ-ಮಗುವಿಗೆ ಅಪಾಯಕಾರಿ. ಅಲ್ಲದೆ, ವಿವಿಧ ಸೋಂಕುಗಳಿಗೆ ಎಡೆಮಾಡುತ್ತದೆ ಮತ್ತು ಎದೆಹಾಲು ಉತ್ಪಾದನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರು ಹೆಚ್ಚು ನೀರು ಕುಡಿಯಬೇಕು: ಚಳಿಗಾಲ ಉಪೇಕ್ಷೆಯಿಂದ ನಮಗೆ ಕಡಿಮೆ ನೀರು ಕುಡಿಯುವಂತೆ ಮಾಡುತ್ತದೆ. ಆದಾಗ್ಯೂ, ಚಳಿಗಾಲವು ವಿಸ್ತರಿತ ಶುಷ್ಕತೆಯ ಸಮಯವಾಗಿದ್ದು, ಈ ಕಾಲದಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ದಿನನಿತ್ಯದಷ್ಟು ನೀರು ಕುಡಿಯಲು ಸಹಾಯ ಮಾಡಲು ನಿಮ್ಮ ಮೊಬೈಲ್‍ನಲ್ಲಿ ಜ್ಞಾಪನೆಗಳನ್ನು ಹೊಂದಿಸುವುದು ಒಳ್ಳೆಯದು. ಚಳಿಗಾಲ ಶೀತ ಮತ್ತು ಜ್ವರದ ಋತು. ಗರ್ಭಿಣಿಯರಿಗೆ ಫ್ಲೂ ಶಾಟ್ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಚಳಿಗಾಲ ರೋಗ ನಿರೋಧಕ ವ್ಯವಸ್ಥೆ ದುರ್ಬಲ ಗೊಳಿಸುತ್ತದೆ. ತಾಯಿ ಮತ್ತು ಮಗುವಿನಲ್ಲಿ ಸಂಭಾವ್ಯ ಕಾಯಿಲೆಗಳು ಹೆಚ್ಚಾಗುವಂತೆ ಮಾಡುತ್ತದೆ.

# ಸೊಗಸಾದ ಉಡುಗೆ: ಅದ್ಧೂರಿಯಾಗಿ, ಸೊಗಸಾದ ಉಡುಗೆ ಧರಿಸುವಂತೆ ಚಳಿಗಾಲದಲ್ಲೂ ಗರ್ಭಿಣಿಯರು ತಮ್ಮನ್ನು ತಾವು ಬೆಚ್ಚಗಿರಿಸಲು ಮತ್ತು ಆರಾಮದಾಯಕವಾಗುವಂತಹ ಉಡುಪು ಧರಿಸಬೇಕು. ಕಾರ್ಡಿಜನ್, ಬಟ£್ಡï ಶರ್ಟ್ ಮತ್ತು ನಿಮ್ಮ ನೆಚ್ಚಿನ ಬೆಚ್ಚಗಿನ, ಸೊಗಸಾದ ಸ್ವೆಟರ್‍ನೊಂದಿಗೆ ಟ್ಯಾಂಕ್ ಟಾಪ್ ಅಥವಾ ಟಿ ಶರ್ಟ್ ಧರಿಸಬಹುದು.

# ಶೀತ, ಜ್ವರದಿಂದ ದೂರವಿರಿ: ಮೂರು ದಿನಗಳವರೆಗೆ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರೆ, ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

# ನಿಯಮಿತವಾಗಿ ಕೈಗಳನ್ನು ತೊಳೆಯಿರಿ: ನಿಯಮಿತವಾಗಿ ಕೈಗಳನ್ನು ತೊಳೆಯುವುದರಿಂದ ದೇಹಕ್ಕೆ ರೋಗಗಳು ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಪ್ರತಿ ಬಾರಿ ಏನೇ ಸ್ಪರ್ಶಿಸಿದರೂ, ವಾಹನ ಚಲಾಯಿಸಿದರೂ ಕೈಗಳನ್ನು ತೊಳೆಯಬೇಕು. ದಿನವಿಡೀ ಕೈ ಸ್ಯಾನಿಟೈಜರ್ ಸುಸ್ಥಿತಿಯಲ್ಲಿರಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.  ಗರ್ಭಧಾರಣೆಯಿಂದಾಗಿ ದೇಹವು ಹೆಚ್ಚು ದುರ್ಬಲವಾಗುವಂತೆ ಮಾಡುತ್ತದೆ. ದೇಹವು ವಿಪರೀತ ಹವಾಮಾನ ಪರಿಸ್ಥಿತಿಗಳಿಗೆ ಮತ್ತು ಸೂಕ್ಷ್ಮಾಣು ಜೀವಿಗಳಿಗೆ ಹೆಚ್ಚು ಒಡ್ಡಿಕೊಳ್ಳುವುದಾದರೆ ಇದು ಅಪಾಯಕಾರಿ. ಗರ್ಭಾವಸ್ಥೆಯಲ್ಲಿ, ದೇಹವು ಹವಾಮಾನ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಮನೆಯ ಸೌಕರ್ಯ ಮತ್ತು ಉಷ್ಣತೆಗಳಲ್ಲಿ ಉಳಿಯಲು ಮತ್ತು ವಾತಾವರಣ ಸುಧಾರಿಸುವ ತನಕ ಎಲ್ಲ ಪ್ರವಾಸಗಳನ್ನು ಮುಂದೂಡುವುದು ಸೂಕ್ತವಾಗಿದೆ.

# ನಿಯಮಿತ ವ್ಯಾಯಾಮ: ಹವಾ ಮಾನವು ತಣ್ಣಗಿರುವಾಗ, ವಿಶೇಷವಾಗಿ ಗರ್ಭಿಣಿಯರಿಗೆ ನಡೆದಾಡುವುದು ಕಷ್ಟಕರವಾಗುತ್ತದೆ. ಕೆಲವು ಒಳಾಂಗಣ ವ್ಯಾಯಾಮಗಳು ಗರ್ಭಧಾರಣೆ ಸಮಯದಲ್ಲಿ ಆರೋಗ್ಯಕರವಾಗಿ, ಹೊಂದಿಕೊಳ್ಳುವ ಮತ್ತು ಸುರಕ್ಷಿತವಾಗಿರಿಸಿಕೊಳ್ಳಲು ಉತ್ತಮ ವ್ಯವಸ್ಥೆಯಾಗಿವೆ. ಜಿಮ್‍ಗೆ ಹೋಗುವುದು, ಒಳಾಂಗಣ ಕೊಳದಲ್ಲಿ ಈಜುವುದು, ಮನೆಯಲ್ಲೇ ಯೋಗ ಮಾಡುವುದು ಅಥವಾ ಸ್ವಲ್ಪ ದೂರ ಅಡ್ಡಾಡುವುದು ಸೇರಿದಂತೆ ಯಾವುದೇ ದೈಹಿಕ ಚಟುವಟಿಕೆ ಮಾಡಬಹುದಾಗಿದೆ.

# ಗರ್ಭಿಣಿಯರಿಗೆ ಉಸಿರಾಟದ ವ್ಯಾಯಾಮ :  ಎದೆಯಿಂದ ಉಸಿರಾಡುವುದುನೆಟ್ಟಗೆ ನಿಂತುಕೊಂಡು ಪಾದಗಳನ್ನು ಸಮಾನಾಂತರವಾಗಿ ಇರಿಸಿ. ಬಾಯಿ ಮುಚ್ಚಿ ಮತ್ತು 10 ಎಣಿಸಿ ಆಳವಾದ ಉಸಿರಾಟ ತೆಗೆದುಕೊಳ್ಳಿ. ಇದನ್ನು ಮಾಡುವಾಗ ಕೈಯನ್ನು ಎದೆಯ ಮೇಲೆ ಇರಿಸಿ ಶ್ವಾಸಕೋಶಗಳು ವಿಸ್ತರಿಸುವುದರಿಂದ ಮತ್ತು ಕಮಾನಿನಂತೆ ಕೈ ಹೊರಕ್ಕೆ ಚಲಿಸುವಂತೆ ಮಾಡುತ್ತದೆ.

# ಹೊಟ್ಟೆಯಿಂದ ಉಸಿರಾಡುವುದು: ಅನುಕೂಲಕರ ಸ್ಥಿತಿಯಲ್ಲಿ ಕುಳಿತಿರುವಾಗ ಕಾಲುಗಳನ್ನು ಚಾಚಿ. ಕೆಳ ಹೊಟ್ಟೆಯಿಂದ ಉಸಿರಾಡಲು ಪ್ರಾರಂಭಿಸಿ ಮತ್ತು ಹೊಟ್ಟೆಯನ್ನು ಗಾಳಿ ತುಂಬಿಸಿ. ಉಸಿರಾಡುವ ಅದೇ ವೇಗದಲ್ಲಿ ಉಸಿರಾಡಿ.

# ಪರ್ಯಾಯ ಆಳವಿಲ್ಲದ ಮತ್ತು ಆಳವಾದ ಉಸಿರಾಟ: ಅನುಕೂಲಕರ ಸ್ಥಿತಿಯಲ್ಲಿ ಕುಳಿತು ದೇಹವನ್ನು ವಿಶ್ರಾಂತಿ ಮಾಡಿ. ಆಳವಾದ ಉಸಿರಾಟ ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಉಸಿರಾಡುವಂತೆ, ಉಸಿರನ್ನು ತೆಗೆದುಕೊಳ್ಳುವುದು. ಬಾಯಿಯನ್ನು ಅಗಲ ವಾಗಿ ತೆರೆಯಿರಿ ಮತ್ತು ಐದು ಎಣಿಕೆ ಮಾಡಿ ಬಾಯಿಯ ಮೂಲಕ ಉಸಿರೆಳೆದುಕೊಳ್ಳಿ. ಕನಿಷ್ಠ 20 ಬಾರಿ ಹೀಗೆ ಪುನರಾವರ್ತಿಸಿ.

# ಉದಾರವಾಗಿ ಮಾಯಿಶ್ಚರೈಸರ್ ಬಳಸಿ: ಚರ್ಮವು ಒರಟಾಗಿ ಮತ್ತು ಶುಷ್ಕವಾಗಿರುತ್ತದೆ. ಚರ್ಮವು ಮಂದ ಮತ್ತು ನಿರ್ಜೀವದಂತಾಗಿಬಿಡುತ್ತದೆ. ಗರ್ಭಧಾರಣೆ ಚರ್ಮದ ಶುಷ್ಕತೆಗೆ ಎಡೆ ಮಾಡುತ್ತದೆ. ಇದು ಶುಷ್ಕ, ಫ್ಲಾಕಿ ಮತ್ತು ಅಸಹನೀಯ ವಾಗಿಸುತ್ತದೆ. ಚರ್ಮವನ್ನು ಪುನರ್ ಯೌವ್ವನಗೊಳಿಸುವುದಕ್ಕಾಗಿ ಮತ್ತು ಅದನ್ನು ಮತ್ತೆ ಜೀವಕ್ಕೆ ತರಲು, ಬಿಸಿನೀರಿನ ಸ್ನಾನ ಮಾಡುವುದನ್ನು ಕಡಿಮೆ ಮಾಡಿ.  ಬೆಚ್ಚಗಿನ ನೀರನ್ನು ಬಳಸಿ ಸ್ನಾನ ಮಾಡಿ. ತಕ್ಷಣವೇ ಚರ್ಮವನ್ನು ಆಳವಾದ, ಉತ್ಕøಷ್ಟ ಮಾಯಿಶ್ಚರೈಸರ್‍ನೊಂದಿಗೆ ತೇವಗೊಳಿಸಿ, ಕೈಗಳು, ಹೊಟ್ಟೆ, ಮೊಣಕಾಲುಗಳು ಮತ್ತು ಮೊಣಕೈಗಳ ಮೇಲೆ ಹೆಚ್ಚಿನ ಪ್ರಮಾಣ ದಲ್ಲಿ ಹಚ್ಚಿಕೊಳ್ಳಿ. ಗರ್ಭಾವಸ್ಥೆಯಲ್ಲಿ ತೋರಿಸುವ ಕಾಳಜಿಯಿಂದ ದೇಹ ಆರಾಮ ವಾಗುತ್ತದೆ. ಇದು ಮಗುವಿನ ಬೆಳವಣಿಗೆಗೆ ಒಳಿತು.

Facebook Comments