ಚಲನಚಿತ್ರ ವಿತರಕ ನಾಗಪ್ರಸಾದ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Naga Prasadಬೆಂಗಳೂರು,ಜ.7- ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರರಂಗದ ಹೆಸರಾಂತ ವಿತರಕ ನಾಗಪ್ರಸಾದ್ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಿಧನರಾಗಿದ್ದಾರೆ. ಉಪೇಂದ್ರ ನಟನೆಯ ಗಾಡ್‍ಫಾದರ್, ದುನಿಯಾ ವಿಜಯ್ ಅಭಿನಯದ ಭೀಮತೀರದಲ್ಲಿ , ದರ್ಶನ್ ನಟನೆಯ ಚಿಂಗಾರಿ ಸೇರಿದಂತೆ ಅನೇಕ ಸಿನಿಮಾಗಳಿಗೆ ವಿತರಕರಾಗಿದ್ದರು.
ಇಂದು ವಿಜಯನಗರದಲ್ಲಿರುವ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕನ್ನಡ ಚಿತ್ರರಂಗದ ಹಲವಾರು ಗಣ್ಯರು ನಾಗಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Facebook Comments