ಪ್ರೀತಿ ಒಪ್ಪದ ಮನೆಯವರು, ವಿಷ ಸೇವಿಸಿ ಪ್ರಾಣಬಿಟ್ಟ ಪ್ರೇಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

suicideಚಿಕ್ಕಮಗಳೂರು, ಜ.8- ನಗರದ ರತ್ನಗಿರಿ ಬೋರೆ ಪಾರ್ಕ್‍ನಲ್ಲಿ (ಗಾಂಧಿಪಾರ್ಕ್) ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ (18) ಹಾಗೂ ಚಿಕ್ಕಮಗಳೂರು ತಾಲೂಕಿನ ಗಾಳಿಗಂಡಿ ನಿವಾಸಿ ಮಧು (20) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು.

ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರಿಬ್ಬರೂ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈ ವಿಷಯ ರೂಪಾ ಮನೆಯವರಿಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಇವರಿಬ್ಬರೂ ನಿನ್ನೆ ಬೆಳಗ್ಗೆ ಈ ಪಾರ್ಕ್‍ಗೆ ಬಂದು ಸುತ್ತಾಡಿ ಸಂಜೆವರೆಗೂ ಇಲ್ಲೇ ಇದ್ದಾರೆ.ತದನಂತರ 7 ಗಂಟೆ ಸುಮಾರಿನಲ್ಲಿ ಇವರಿಬ್ಬರೂ ವಿಷ ಕುಡಿದಿದ್ದು, ಮಧು ಸ್ಥಳದಲ್ಲೇ ಮೃತಪಟ್ಟರೆ, ರೂಪಾ ಒದ್ದಾಡುತ್ತಿದ್ದುದನ್ನು ಗಮನಿಸಿದ ವಾಯು ವಿಹಾರಿಗಳು ತಕ್ಷಣ ರೂಪಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಆಕೆಯೂ ಸಾವನ್ನಪ್ಪಿದ್ದಾಳೆ.

ಜಿಲ್ಲಾಸ್ಪತ್ರೆಯಲ್ಲಿ ಇಬ್ಬರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಿಲ್ಲಾಸ್ಪತ್ರೆ ಬಳಿ ಮೃತರ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಬೆಳಗ್ಗೆ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ನಗರದ ಬಸವನಹಳ್ಳಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments