ಸ್ಕೂಟರ್‍ನಲ್ಲಿದ್ದ 4.80 ಲಕ್ಷ ರೂ.ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

bike robberyಬೆಂಗಳೂರು, ಜ.9- ಟಿಫನ್ ಸೆಂಟರ್‍ವೊಂದರ ಮುಂದೆ ಸ್ಕೂಟರ್ ಪಾರ್ಕಿಂಗ್ ಮಾಡಿ ಊಟಕ್ಕೆ ತೆರಳಿದ್ದಾಗ ದರೋಡೆಕೋರರು ಇವರ ಸ್ಕೂಟರ್ ಡಿಕ್ಕಿ ಒಡೆದು ಅದರಲ್ಲಿದ್ದ 4.80 ಲಕ್ಷ ರೂ. ಎಗರಿಸಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರ 9ನೆ ಬ್ಲಾಕ್, 15ನೆ ಮುಖ್ಯರಸ್ತೆ, 35ನೆ ಕ್ರಾಸ್‍ನಲ್ಲಿ ಧರ್ಮೇಂದರ್‍ಸಿಂಗ್ ಎಂಬುವವರು ನಿನ್ನೆ ಮಧ್ಯಾಹ್ನ 1.40ರಲ್ಲಿ ಸ್ಕೂಟರ್‍ನಲ್ಲಿ ಹಣವಿಟ್ಟುಕೊಂಡು ಬಂದು ಸಮೀಪದ ಟಿಫನ್ ಸೆಂಟರ್ ಮುಂದೆ ಸ್ಕೂಟರ್ ಪಾರ್ಕ್ ಮಾಡಿ ಊಟಕ್ಕೆ ತೆರಳಿದ್ದರು.

ಈ ಸಂದರ್ಭದಲ್ಲಿ ದರೋಡೆಕೋರರು ಇವರ ಸ್ಕೂಟರ್‍ನ ಡಿಕ್ಕಿ ಒಡೆದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.ಕೆಲ ಸಮಯದ ಬಳಿಕ ಧರ್ಮೇಂದರ್‍ಸಿಂಗ್ ಸ್ಕೂಟರ್ ಬಳಿ ಬಂದಾಗ ಡಿಕ್ಕಿ ತೆರೆದು ಕೊಂಡಿರುವುದನ್ನು ಗಮನಿಸಿ ನೋಡಿದಾಗ ಅದರಲ್ಲಿದ್ದ ಹಣ ಕಳ್ಳತನವಾಗಿರುವುದು ಕಂಡುಬಂದಿದೆ.
ತಕ್ಷಣ ಜಯನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಸುತ್ತಮುತ್ತಲಿನಲ್ಲಿದ್ದ ನಾಗರಿಕರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments