ಮಕ್ಕಳೊಂದಿಗೆ ತಾಯಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

missingಬೆಂಗಳೂರು, ಜ.9-ಮನೆಯಿಂದ ಮಗ-ಮಗಳನ್ನು ಕರೆದುಕೊಂಡು ಹೋದ ತಾಯಿ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಮುನೇಶ್ವರ ದೇವಸ್ಥಾನದ ಸಮೀಪದ ನಿವಾಸಿ ನಾರಾಯಣಪ್ಪ ಎಂಬುವರ ಪತ್ನಿ ಲಾವಣ್ಯ(28) ಮತ್ತು ಮಕ್ಕಳಾದ ನಿಖಿಲ್(10) ಮತ್ತು ಲಯಾ(8) ಕಾಣೆಯಾದವರು.

ಅಕ್ಟೋಬರ್ 11 ರಂದು ಈ ಬಗ್ಗೆ ದೂರು ನೀಡಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಇವರ ಬಗ್ಗೆ ಮಾಹಿತಿಯಿದ್ದಲ್ಲಿ ಕೂಡಲೇ ಕಂಟ್ರೋಲ್ ರೂಂಗೆ ತಿಳಿಸಲು ಮನವಿ ಮಾಡಲಾಗಿದೆ.

Facebook Comments