ವರ್ಷವಾದರೂ ಕಥುವಾ ಬಾಲಕಿ ಕುಟುಂಬಕ್ಕೆ ಸಿಕ್ಕಿಲ್ಲ ನ್ಯಾಯ

ಈ ಸುದ್ದಿಯನ್ನು ಶೇರ್ ಮಾಡಿ

Kathua rapeಕಥುವಾ,ಜ.10-ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷವಾಗಿದೆ. ಆದರೆ ಈವರೆಗೂ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಲ್ಲ. 2018ರ ಜನವರಿ 10 ಎಂಟು ವರ್ಷದ ಪುಟ್ಟ ಬಾಲಕಿ, ಕುದುರೆಗೆ ಆಹಾರ ನೀಡಲು ತೆರಳಿದ್ದ ವೇಳೆ ಏಕಾಏಕಿ ನಾಪತ್ತೆಯಾಗುತ್ತಾಳೆ.

ಇದಾಗಿ ಸರಿಯಾಗಿ ಒಂದು ವಾರದ ಬಳಿಕ(ಜ.17) ಬಾಲಕಿಯ ಶವ ಪಕ್ಕದ ಗ್ರಾಮದಲ್ಲಿ ಪತ್ತೆಯಾಗಿತ್ತು. ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಎಂಟು ಮಂದಿಯ ಮೇಲೆ ಚಾರ್ಜ್‍ಶೀಟ್ ದಾಖಲು ಮಾಡಲಾಗಿದೆ. ಮಾಜಿ ಕಂದಾಯ ಅಧಿಕಾರಿ ಸಾಂಜಿ ರಾಮ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಆತನ ಪುತ್ರ ವಿಶಾಲ್ ಜಂಗೋತ್ರ ಮತ್ತೊಬ್ಬ ಆರೋಪಿಯಾಗಿದ್ದಾನೆ.

ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ಕಜುರಿಯಾ ಅಲಿಯಾಸ್ ದೀಪು, ಸುರೀಂದರ್ ಕುಮಾರ್, ಹಿರಾನಗರ್ ಸ್ಟೇಷನ್‍ನ ಸಬ್‍ಇನ್ಸ್‍ಪೆಕ್ಟರ್ ಆನಂದ್ ದತ್ತ, ಹೆಡ್ ಕಾನ್ಸ್‍ಸ್ಟೇಬಲ್ ತಿಲಕ್ ರಾಜ್ ಮೇಲೂ ಚಾರ್ಜ್ ಶೀಟ್ ದಾಖಲಾಗಿದೆ.

ಆದರೆ ವರ್ಷ ಕಳೆದರೂ ಬಾಲಕಿಯ ಹೆತ್ತವರು ಘಟನೆಯನ್ನು ನೆನೆದು ಇಂದಿಗೂ ಕಣ್ಣಾಲಿ ಒದ್ದೆ ಮಾಡಿಕೊಳ್ಳುತ್ತಿದ್ದಾರೆ. ಹಲವಾರು ಬಾರಿ ಕೋರ್ಟ್‍ಗೆ ತೆರಳಿ ಬಾಲಕಿಯಗಾಗಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ.

Facebook Comments