ಬ್ರಿಜೇಶ್‍ಪಟೇಲ್ ಮನೆದೋಚಿದ್ದ ಕೆಲಸಗಾರನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

brijesh patelಬೆಂಗಳೂರು, ಜ.10- ಕೆಎಸ್‍ಸಿಎ ಕಾರ್ಯದರ್ಶಿ ಹಾಗೂ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಮನೆಯಲ್ಲಿ ಕಳ್ಳತನ ಮಾಡಿದ್ದ ಮನೆಕೆಲಸಗಾರನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿ 4.5 ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಲ್‍ಬಾಯ್ ಬಂಧಿತ ಆರೋಪಿ. ಕಳೆದ ಹನ್ನೊಂದು ವರ್ಷದಿಂದ ಬ್ರಿಜೇಶ್ ಪಟೇಲ್ ಮನೆಯಲ್ಲಿ ಮಂಗಲ್ ಬಾಯ್ ಕೆಲಸ ಮಾಡಿಕೊಂಡಿದ್ದನು.

ಕಳೆದ ಡಿ.3ರಂದು ಬ್ರಿಜೇಶ್ ಅವರು ಕಾರ್ಯನಿಮಿತ್ತ ಹೊರಗೆ ಹೋಗಿದ್ದಾಗ ಇವರ ಮನೆಯಲ್ಲಿ 20 ಕೆಜಿ ಬೆಳ್ಳಿ ವಸ್ತುಗಳು, 1500 ಅಮೆರಿಕನ್ ಡಾಲರ್ ಕಳ್ಳತನವಾಗಿತ್ತು. ಮನೆ ಕೆಲಸಗಾರನ ಮೇಲೆ ಶಂಕೆ ವ್ಯಕ್ತಪಡಿಸಿ ಈ ಸಂಬಂಧ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ 4.5 ಕೆಜಿ ತೂಕದ ಬೆಳ್ಳಿ ವಸ್ತುಗಳು ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Facebook Comments