ಬುಲಂದ್‍ಷಹರ್ ಹಿಂಸಾಚಾರ : ಪ್ರಮುಖ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bulandshahr violenceಮೀರುತ್(ಉ.ಪ್ರ.), ಜ.10 (ಪಿಟಿಐ)- ಪೊಲೀಸ್ ಅಧಿಕಾರಿ ಮತ್ತು ಯುವಕನೊಬ್ಬ ಬಲಿಯಾದ ಉತ್ತರಪ್ರದೇಶದ ಬುಲಂದ್‍ಷಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಮುಖ ಆರೋಪಿ, ಭಾರತೀಯ ಜನತಾ ಯುವ ಮೋರ್ಚಾ ಸದಸ್ಯ ಶಿಖರ್ ಅಗರ್‍ವಾಲ್‍ನನ್ನು ಪೊಲೀಸರು ಬಂಧಿಸಿದ್ದಾರೆ.ಬುಲಂದ್‍ಷಹರ್ ಠಾಣೆ ಪೊಲೀಸರು ಹಪುರ್ ಜಿಲ್ಲೆಯಲ್ಲಿ ಶಿಖರ್ ಅಗರ್‍ವಾಲ್‍ನನ್ನು ಇಂದು ಬೆಳಗ್ಗೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಬುಲಂದ್‍ಷಹರ್ ನಗರ) ಅತುಲ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ 3ರಂದು ನಡೆದ ಗುಂಪು ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್(44) ಮತ್ತು ಸುಮಿತ್ ಕುಮಾರ್(20) ಎಂಬ ಯುವಕ ಹತರಾಗಿದ್ದರು.

Facebook Comments