ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಯಶ್

ಈ ಸುದ್ದಿಯನ್ನು ಶೇರ್ ಮಾಡಿ

Yash--01
ಬೆಂಗಳೂರು,ಜ.10- ರಾಕಿಂಗ್ ಸ್ಟಾರ್ ಯಶ್ ಇಂದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಜ.3ರಂದು ಯಶ್ ಅವರ ನಿವಾಸ ಹಾಗೂ ಮಾವನ ಮನೆಯಲ್ಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಹಲವು ಆಸ್ತಿ ದಾಖಲೆಗಳು ಮತ್ತು ಮದುವೆ ಸಂದರ್ಭದಲ್ಲಿ ಬಂದಿರುವಂತಹ ಉಡುಗೊರೆಗಳ ಬಗ್ಗೆ ಮಹಿತಿ ಕೇಳಿ ನೋಟಿಸ್ ನೀಡಲಾಗಿತ್ತು. ಇಂದು ಇದರ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಯಶ್ ಅವರು ಕ್ವೀನ್ಸ್ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗಿದ್ದು, ಚಿತ್ರರಂಗದಲ್ಲಿ ನಟನೆಗಾಗಿ ಪಡೆಯುವ ಸಂಭಾವನೆ ಹಾಗೂ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಚರಾಸ್ಥಿಸ್ತಿಗಳ ಬಗ್ಗೆ ದಾಖಲೆಗಳನ್ನು ಕೂಡ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಅಧಿಕಾರಿಗಳು ಜ.3 ರಂದು ಸ್ಟಾರ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿ 109 ಕೋಟಿ ರೂ.ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಹಚ್ಚಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಪತ್ತೆಯಾದ ಆಸ್ತಿ ಪತ್ರಗಳಿಗೆ ಲೆಕ್ಕ ನೀಡುವಂತೆ ನೊಟೀಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.‌

ಈಗಾಗಲೇ ನಿರ್ಮಾಪಕರಾದ ಸಿ.ಆರ್ ಮನೋಹರ್, ರಾಕ್ ಲೈನ್ ವೆಂಕಟೇಶ್, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ವಿಚಾರಣೆಗೆ ಹಾಜರಾಗಿದ್ದರು.

Facebook Comments

Sri Raghav

Admin