ಬೆಂಗಳೂರಿಗೆ ಬಂದಿತ್ತು ‘ಕಥಾನಾಯಕುಡು’ ಟೀಮ್

ಈ ಸುದ್ದಿಯನ್ನು ಶೇರ್ ಮಾಡಿ

NTRಕನ್ನಡದಲ್ಲಿ ಡಾ.ರಾಜ್‍ಕುಮಾರ್ ಹೇಗೂ ಅದೇಥರ ತೆಲುಗು ಚಿತ್ರರಂಗದಲ್ಲಿ ಎನ್‍ಟಿ. ರಾಮರಾವ್ ಹೆಸರು ಮಾಡಿದವರು. ಲೆಜೆಂಡರಿ ಆ್ಯಕ್ಟರ್ ಎನ್.ಟಿ. ರಾಮರಾವ್ ಅವರ ಜೀವನ ಚರಿತ್ರೆ ಆಧರಿಸಿ ನಿರ್ಮಾಣವಾಗಿರುವ ಚಿತ್ರ ಎನ್.ಟಿ.ಆರ್. ಕಥಾನಾಯಕುಡು. ತೆಲುಗು ಚಿತ್ರರಂಗದ ಸೂಪರ್‍ಸ್ಟಾರ್ ಬಾಲಕೃಷ್ಣ ಈ ಚಿತ್ರದಲ್ಲಿ ತಮ್ಮ ತಂದೆಯ ಪಾತ್ರವನ್ನೇ ನಿರ್ವಹಿಸಿದ್ದಾರೆ.

ಎನ್.ಟಿ.ಆರ್.ಕಥಾನಾಯಕುಡು ಈ ಶುಕ್ರವಾರ ಎಲ್ಲಾ ಕಡೆ ತೆರೆಕಾಣುತ್ತಿದೆ. ಹಾಗಾಗಿ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನಾಯಕನಟ ಬಾಲಕೃಷ್ಣ ಹಾಗೂ ನಾಯಕಿ ವಿದ್ಯಾಬಾಲನ್, ಸಾಯಿ ಕೊರಪತ್ತಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.ಈ ಸಂದಭರ್ದಲ್ಲಿ ನಟ ಬಾಲಕೃಷ್ಣ ಅವರನ್ನು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಾಕಿಂಗ್‍ಸ್ಟಾರ್ ಯಶ್ ಸ್ವಾಗತಿಸಿದರು.

ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ಜಯಶ್ರೀದೇವಿ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಬಾಲಯ್ಯನ ಜೊತೆ ವೇದಿಕೆಯನ್ನು ಹಂಚಿಕೊಂಡ ನಟ ಯಶ್ ಹಾಗೂ ಪುನೀತ್ ರಾಜಕುಮಾರ್, ಎನ್.ಟಿ. ರಾಮರಾವ್ ಅವರ ಸಾಧನೆಗಳ ಬಗ್ಗೆ ಮಾತನಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ನಟ ಬಾಲಕೃಷ್ಣ ಮಾತನಾಡುತ್ತ ನಮ್ಮ ತಂದೆ ಜನರಿಗೋಸ್ಕರ ನಾಯಕನಾದರು, ಅವರ ಪಾತ್ರವನ್ನು ನಾನೀಗ ಮಾಡಿದ್ದೇನೆ. ಅವರು ತೆಲುಗು ಜನರನ್ನು ಹೇಗೆ ಮುಂದೆ ತಂದರು. ನಮ್ಮ ಭಾಷೆಯನ್ನು ಹೇಗೆ ಬೆಳೆಸಿದರು ಎಂದು ಚಿತ್ರದಲ್ಲಿ ಹೇಳಿದ್ದೇವೆ.

ಎರಡನೆ ಭಾಗದಲ್ಲಿ ಅವರು ಮಹಾನಾಯಕಡು ಆಗಿ ಹೇಗೆ ಬೆಳೆದರು, ಅವರ ಜರ್ನಿ ಹೇಗಿತ್ತು, ಮದುವೆ, ಸಿನಿಮಾ ಜೀವನದ ಕುರಿತಂತೆ ಹೇಳಿದ್ದೇವೆ. ವಿದ್ಯಾಬಾಲನ್ ಅವರು ನನ್ನ ತಾಯಿಯ ಪಾತ್ರ ಮಾಡಿದ್ದಾರೆ. ನನ್ನ ತಂದೆ ಇಂಡಿಯನ್ ಸ್ಟಾರ್ ಕೂಡ ಆಗಿದ್ದರು. ಅವರು ಅಭಿನಯಿಸಿದ ಚಲನಚಿತ್ರಗಳು, ನಡೆದುಬಂದ ಹಾದಿ, ಆಫ್ ದಿ ಸ್ಕ್ರೀನ್‍ನಲ್ಲಿ ಎನ್‍ಟಿಆರ್ ಹೇಗಿದ್ದರು ಎಂಬುದನ್ನು ಜನರೆಲ್ಲರೂ ತಿಳಿಯಬೇಕು ಎಂಬ ಉದ್ದೇಶದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.

ನಂತರ ಡಾ.ರಾಜ್‍ಕುಮಾರ್ ಅವರ ಕುಟುಂಬದ ಜೊತೆಗಿನ ತಮ್ಮ ತಂದೆಯ ಆತ್ಮೀಯತೆಯನ್ನು ಕೂಡ ಬಾಲಕೃಷ್ಣ ಹೇಳಿಕೊಂಡರು. ಚಿತ್ರದ ನಾಯಕಿ ವಿದ್ಯಾಬಾಲನ್ ಮಾತನಾಡುತ್ತ ಈ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಇದೇ ಮೊದಲಬಾರಿಗೆ ಅಭಿನಯಿಸಿದ್ದೇನೆ. ಇಂಥ ಲೆಜೆಂಡರಿ ಚಿತ್ರದಲ್ಲಿ ನಾನು ಅಭಿನಯಿಸಿರುವುದಕ್ಕೆ ಹೆಮ್ಮೆ ಎನಿಸಿದೆ ಎಂದು ಹೇಳಿದರು. ಇನ್ನುಳಿದಂತೆ ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಬಾಲಕೃಷ್ಣ, ವಿದ್ಯಾಬಾಲನ್, ರಾಕುಲ್ ಪ್ರೀತ್‍ಸಿಂಗ್ ಜೊತೆ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಿದ್ದಾರೆ.

Facebook Comments