ಚಿಕಿತ್ಸೆ ನೀಡದ ವೈದ್ಯರು, ರಸ್ತೆಯಲ್ಲೇ ಗರ್ಭಿಣಿಗೆ ಹೆರಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Pregnent--01

ಚಿತ್ರದುರ್ಗ,ಜ.10- ಊಟದ ಸಮಯ ಎಂದು ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ ಪರಿಣಾಮ, ರಸ್ತೆಬದಿಯಲ್ಲೇ ಗರ್ಭಿಣಿಗೆ ಹೆರಿಗೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೊಳಲ್ಕರೆ ತಾಲೂಕಿನ ಚಿತ್ರಹಳ್ಳಿ ಎಂಬ ಗ್ರಾಮ ಗಂಗಮಂಗಳಾ(30) ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ತೆರಳಿದಾಗ ಆರೋಗ್ಯ ಕೇಂದ್ರದಲ್ಲಿ ವೈದ್ಯ ಹಾಗೂ ನರ್ಸ್ ಊಟದ ಸಮಯ ಎಂದು ಹೇಳಿ ಅವರನ್ನು ಹೊರಗೆ ಕಳುಹಿಸಿದ್ದಾರೆ.

ಹೆರಿಗೆ ನೋವು ತೀವ್ರಗೊಂಡಿದ್ದರಿಂದ ಗಂಗಮಂಗಳಾ ಅವರಿಗೆ ರಸ್ತೆ ಬದಿಯಲ್ಲಿಯೇ ಕೆಲ ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬೆ.11 ಗಂಟೆಗೆ ಆರೋಗ್ಯ ಕೇಂದ್ರಕ್ಕೆ ಹೋದೆವು. ಆದರೆ ವೈದ್ಯರು ಮಧ್ಯಾಹ್ನದವರೆಗೆ ನಮ್ಮನ್ನು ಕಾಯಿಸಿದರು.

ಬಳಿಕ ಊಟದ ಸಮಯವೆಂದು ಹೊರಕ್ಕೆ ಕಳುಹಿಸಿದರು ಎಂದು ಗಂಗಮಂಗಳಾ ಅವರ ಪತಿ ದೂರಿದ್ದಾರೆ. ಪ್ರಕರಣ ಸಂಬಂಧ ಜಿಲ್ಲಾ ವೈದ್ಯಾಧಿಕಾರಿ ಡಾ. ನೀರಜ್ ಪಾಟೀಲ್ ತನಿಖೆ ನಡೆಸುವಂತೆ ಆದೇಶಿದ್ದು, ಘಟನೆ ಸಂಬಂಧ ವರದಿ ತರಿಸಿಕೊಂಡ ಬಳಿಕ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin