ಪಿ.ವಿ.ಮಲ್ಲಿಕಾರ್ಜುನಯ್ಯಗೆ ವೇದಕಾಯಕ ರತ್ನ ರಾಜ್ಯ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

PV Mallikarjunayyaಚಳ್ಳಕೆರೆ, ಜ.9- ವೇದ ಶಿಕ್ಷಣ ಸಂಸ್ಥೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸಾಧಕರಿಗೆ 2018-19 ನೇ ಸಾಲಿನ ವೇದಕಾಯಕ ರತ್ನ ರಾಜ್ಯ ಪ್ರಶಸ್ತಿಗೆ 16 ಅರ್ಜಿಗಳು ಬಂದಿದ್ದು, ಇದರಲ್ಲಿ ಚಿತ್ರದುರ್ಗದ ಬುರುಜನಹಟ್ಟಿಯ ಪರಿಸರ ಪ್ರೇಮಿ, ವೃಕ್ಷಮಿತ್ರ ಪ್ರಶಸ್ತಿ ಬಿರುದಾಂಕಿತ ನಿವೃತ್ತ ಶಿಕ್ಷಕರಾದ ಪಿ.ವಿ.ಮಲ್ಲಿಕಾರ್ಜುನಯ್ಯ ಆಯ್ಕೆಯಾಗಿದ್ದಾರೆ.

ಪಿ.ವಿ. ಮಲ್ಲಿಕಾರ್ಜುನಯ್ಯ ನವರು ಪರಿಸರ ಪ್ರೇಮಿಯಾಗಿದ್ದು ಇಲ್ಲಿಯವರೆಗೆ ಹಲವುಜಾತಿಯ ಸಾವಿರಾರು ಗಿಡ ಮರಗಳನ್ನು ಬೆಳೆಸಿದ್ದಾರೆ. 3-4 ಪ್ರದೇಶಗಳಲ್ಲಿ ಬೆಳೆದ ಗಿಡ ಮರಗಳು ಸುಂದರ ತೋಪಾಗಿ ನಿರ್ಮಾಣವಾಗಿದೆ. ಪರಿಸರ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾಯಕಕ್ಕೆ ವೇದಕಾಯಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದೇ 19 ರಂದು ಚಳ್ಳಕೆರೆ ತಾಲ್ಲುಕಿನ ಸಾಣಿಕೆರೆ ವೇದಸಂಸ್ಥೆ ಆವರಣದಲ್ಲಿ ನಡೆಯಲಿರುವ ವೇದೊತ್ಸವ(ಶಾಲಾ ವರ್ಷಿಕೋತ್ಸವ) ಕಾರ್ಯಕ್ರಮದಲಿ ಸನ್ಮಾನಿಸಿ ಪುರಸ್ಕರಿಸಲಾಗುವುದು ಎಂದು ವೇದ ಸಂಸ್ಥೆಯ ಅಧ್ಯಕ್ಷರಾದ ಡಿ.ಟಿ. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ.ವಿ.ವೀರಣ್ಣ, ಡಾ.ಎಸ್. ಪುಟ್ಟಸ್ವಾಮಯ್ಯ, ಎಚ್.ಚಂದ್ರಣ್ಣ, ಕೆಂಜಡಿಯಪ್ಪ, ಪ್ರಸನ್ನಕುಮಾರ, ಡಿ.ಟಿ.ಶಶಿಧರ್, ಡಿ.ಅರ್.ಕಿರಣ್, ಅಬ್ದುಲ್ ಮಜ್ಜಿದ್, ಗೀತಾ ಹರಿಯಬ್ಬೆ, ಅಬ್ದುಲ್‍ಮಜ್ಜಿದ್, ಆಯ್ಕೆಯ ನೇತೃತ್ವದಲ್ಲಿ 16 ಅರ್ಜಿಯನ್ನು ಪರಿಶೀಲಿಸಿ ಚಿತ್ರದುರ್ಗದ ಪಿ.ವಿ.ಮಲ್ಲಿಕಾರ್ಜುನಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

Facebook Comments