ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

moveಸಿನಿಮಾ ನಿರ್ಮಾಪಕರ ಹಾಗೂ ಪತ್ರಕರ್ತರ ಕೊಂಡಿ ಯಾಗಿ ನಿರಂತರ ಸೇವೆ ಮಾಡುತ್ತ ಬಂದಂತಹ ಹಿರಿಯ ಪ್ರಚಾರಕರ್ತ ದಿ.ಡಿ.ವಿ.ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25ವರ್ಷ ತುಂಬಿದ ಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ, ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು.

ಈಗ ಸಂಸ್ಥೆಯ 42ನೆ ವಾರ್ಷಿಕೋತ್ಸವ ಹಾಗೂ 18ನೆ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜ.25ರಂದು ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ. ಅವರ ಕುಟುಂಬ ಇದರ ಜವಾಬ್ದಾರಿ ನಿರ್ವಹಿಸುತ್ತಿದೆ.

ಈ ಪ್ರಶಸ್ತಿ ಪಟ್ಟಿಯಲ್ಲಿರುವಂತೆ ರಾಕ್‍ಲೈನ್ ವೆಂಕಟೇಶ್ ಹಿರಿಯ ಚಲನಚಿತ್ರ ನಿರ್ಮಾಪಕರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಬನ್ನಂಜೆ ಗೋವಿಂದಾಚಾರ್ ಹಿರಿಯ ಚಲನಚಿತ್ರ ಪತ್ರಕರ್ತರು (ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ), ಎಸ್.ಜಾನಕಿ ಖ್ಯಾತ ಹಿನ್ನಲೆ ಗಾಯಕರು (ಡಾ.ರಾಜ್‍ಕುಮಾರ್ ಪ್ರಶಸ್ತಿ), ಪಿ.ವಾಸು ನಿರ್ದೇಶಕರು (ಯಜಮಾನ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಭಾರತಿ ವಿಷ್ಣುವರ್ಧನ ಅವರಿಂದ), ಆರೂರು ಸತ್ಯಭಾಮ ಕಲಾವಿದರು (ಖ್ಯಾತ ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ), ವಾಸುಕಿ ವೈಭವ್ ಅತ್ಯುತ್ತಮ ಸಂಗೀತ ನಿರ್ದೇಶನ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ ಕಾಸರಗೋಡುಚಿತ್ರಕ್ಕಾಗಿ (ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಪ್ರೈ.ಲಿ ಪ್ರಶಸ್ತಿ), ರಿಷಬ್ ಶೆಟ್ಟಿ ಅತ್ಯುತ್ತಮ ಕಥಾಲೇಖಕರು ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ ಕಾಸರಗೋಡುಚಿತ್ರ (ಖ್ಯಾತ ನಿರ್ದೇಶಕ, ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ ಮೀನಾಕ್ಷಿ ಜಯರಾಂ ಅವರಿಂದ), ಬಿ.ಎ.ಮಧು ಅತ್ಯುತ್ತಮ ಸಂಭಾಷಣೆ

ಮಾ.22 ಚಿತ್ರಕ್ಕಾಗಿ (ಖ್ಯಾತ ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ.ಎಚ್.ಕೆ.ನರಹರಿ ಅವರಿಂದ), ಕಾರ್ತಿಕ್ ಸರಗೂರ್ ಜೀರ್ಜಿಂಬೆ ಹಾಗೂ ಚಂಪಾ ಶೆಟ್ಟಿ (ಅಮ್ಮಚ್ಚಿಯೆಂಬ ನೆನಪು) ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ (ರಂಗ ತಜ್ಞ, ಹಿರಿತೆರೆ – ಕಿರುತೆರೆ ನಿರ್ದೇಶಕ ಬಿ.ಸುರೇಶ್ ಪ್ರಶಸ್ತಿ), ಕೆ.ಕಲ್ಯಾಣ್ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ ಕಾಸರಗೋಡು ಚಿತ್ರದ (ಹೇ ಶಾರದೆ) ಗೀತರಚನೆಗಾಗಿ (ಹಿರಿಯ ಪತ್ರಕರ್ತಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ವಿನಾಯಕರಾಮ್ ಕಲಗಾರು ಅವರಿಂದ), ದೊಡ್ದಣ್ಣ ಹಿರಿಯ ಪೋಷಕ ಕಲಾವಿದರು (ಹಿರಿಯ ಪತ್ರಕರ್ತ ಸಿ.ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ) ನೀಡಲು ನಿರ್ಧರಿಸಿದೆ.

Facebook Comments