ಮೆಟ್ರೋ ಹಂತ 2ರಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಹೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Metro--1
ಬೆಂಗಳೂರು, ಜ. 11- ಮೆಟ್ರೋ 2ನೆ ಹಂತದ ಯೋಜನೆಯಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ 500 ಮಿಲಿಯನ್ ಯುರೋ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಇಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ 200 ಮಿಲಿಯನ್ ಯುರೋ ಯೋಜನಾ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ನೀಡುತ್ತಿರುವ ನೆರವಿಗೆ ಸರ್ಕಾರ ಆಭಾರಿಯಾಗಿದೆ. ಬೆಂಗಳೂರು ನಗರದಲ್ಲಿ 11 ಮಿಲಿಯನ್ ಜನಸಂಖ್ಯೆ ಇದ್ದು, ಪರಿಸರ ಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ, ಹಾಗೂ ಜನ ಸಾಮಾನ್ಯರ ಜೀವನ ಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಮೆಟ್ರೋ ಯೋಜನೆ ಸಹಕಾರಿಯಾಗಿದೆ.

ಮೊಟ್ರೋ 2ನೇ ಹಂತದ ಯೋಜನೆಯ ಅಂದಾಜು ಮೊತ್ತ 26,405 ಕೋಟಿ ರೂ. ಗಳಾಗಿದ್ದು, ಈ ಪೈಕಿ 12,141 ಕೋಟಿ ರು.ಗಳು ಸಾಲದ ಅಗತ್ಯ ವಿದೆ.ಇ ಐ ಬಿ 500 ಮಿಲಿಯನ್ ಯೂರೋಗಳನ್ನು ಅಂದರೆ ಸುಮಾರು 3800 ಕೋಟಿ ರೂ. ಗಳ ನೆರವನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.

ಈ ಸಾಲದ ನೆರವನ್ನು ಇ.ಐ.ಬಿ ತಮ್ಮ ಪರಿಸರ ಸೌಲಭ್ಯ ಯೋಜನೆಯಡಿ ಕೈಗೊಂಡಿರುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನ ನಿರ್ದೇಶಕಿ ಮರಿಯಾ, ಉಪನಿರ್ದೇಶಕಿ ಸುನೀತಾ ,ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin