ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

1st ODIಸಿಡ್ನಿ,ಜ.11- ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಗೆದ್ದು ಸಂತಸದ ಅಲೆಯಲ್ಲಿ ತೇಲುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ನಾಳೆಯಿಂದ ನಡೆಯಲರುವ ಏಕದಿನ ಸರಣಿಗೆ ಸಜ್ಜಾಗಿದೆ.

ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಆಸ್ಟ್ರೇಲಿಯಾ ಟೂರ್ನಿಯಿಂದಲೇ ತಂಡವನ್ನು ಬಲಿಷ್ಠಗೊಳಿಸುವತ್ತ ನಾಯಕ ವಿರಾಟ್ ಕೊಹ್ಲಿ ಚಿತ್ತ ಹರಿಸಿದ್ದು ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವ ತಂತ್ರವನ್ನು ರೂಪಿಸಿದ್ದಾರೆ.

ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಹಾಗೂ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರ ವಿವಾದದ ಸ್ಪಷ್ಟ ಚಿತ್ರಣ ಇನ್ನೂ ಹೊರಬರದ ಕಾರಣ ನಾಳೆಯ ಪಂದ್ಯದಲ್ಲಿ ಈ ಇಬ್ಬರು ಆಟಗಾರರನ್ನು 11ರ ಬಳಗದಲ್ಲಿ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ ಎಂದು ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಇಬ್ಬರು ಆಟಗಾರರಿಲ್ಲದಿದ್ದರೂ ತಂಡವು ಬಲಿಷ್ಠವಾಗಿರುವುದರಿಂದ 3 ಪಂದ್ಯಗಳ ಸರಣಿಯನ್ನು ಗೆದ್ದು ಬೀಗುವ ಹುಮ್ಮಸ್ಸನ್ನು ಕೊಹ್ಲಿ ಹೊರಹಾಕಿದರು.

# ದ್ರಾವಿಡ್‍ಗೆ ಸೆಹ್ವಾಗ್ ಶುಭಾಶಯ :  ನವದೆಹಲಿ, ಜ.11- ತಮ್ಮ 46ನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಾಹುಲ್ ದ್ರಾವಿಡ್‍ಗೆ ವಿರೇಂದ್ರ ಸೆಹ್ವಾಗ್ ಶುಭಾಶಯ ಕೋರಿದ್ದಾರೆ.  ಗೋಡೆಗೂ ಕೂಡ ಕಿವಿಗಳಿರುತ್ತವೆ, ಈ ಗೋಡೆಗೆ ತುಂಬಾ ಸುಂದರವಾದ ಮನಸ್ಸು ಮತ್ತು ಹೃದಯವಿದೆ ಎಂದು ಟ್ವಿಟ್ಟಿಸುವ ಮೂಲಕ ಬರ್ತ್‍ಡೇ ವಿಷಸ್ ತಿಳಿಸಿದ್ದಾರೆ. ದ್ರಾವಿಡ್ ಅಭಿಮಾನಿಗಳು ಹಾಗೂ ಅನೇಕ ಕ್ರಿಕೆಟ್ ದಿಗ್ಗಜರು ಕೂಡ ದ್ರಾವಿಡ್ ನೂರ್ಕಾಲ ಬಾಳಲಿ ಎಂದು ಶುಭಾಶಯ ಗಳನ್ನು ಕೋರಿದ್ದಾರೆ.

Facebook Comments