ದೆಹಲಿಯಲ್ಲಿ ಅಗ್ನಿ ಆಕಸ್ಮಿಕ, ಲಕ್ಷಾಂತರ ರೂ. ಹಾನಿ

ಈ ಸುದ್ದಿಯನ್ನು ಶೇರ್ ಮಾಡಿ

Delhiನವದೆಹಲಿ, ಜ.11 (ಪಿಟಿಐ)- ಪಶ್ಚಿಮ ದೆಹಲಿಯ ಕೀರ್ತಿ ನಗರ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 100ಕ್ಕೂ ಹೆಚ್ಚು ಪೀಠೋಪಕರಣ ಮಳಿಗೆ ಭಸ್ಮವಾಗಿದ್ದು, ಲಕ್ಷಾಂತರ ರೂ.ಗಳು ಹಾನಿಯಾಗಿದೆ. ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ.ಫರ್ನಿಚರ್ಸ್ ಮಾರ್ಕೆಟ್‍ನ ಮೂರು ಅಂತಸ್ತುಗಳ ಕಟ್ಟಡವೊಂದರಲ್ಲಿ ನಿನ್ನೆ ಮಧ್ಯರಾತ್ರಿ 12 ಗಂಟೆಯಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಮುತ್ತ ಮಳಿಗೆಗಳತ್ತ ವ್ಯಾಪಿಸಿತು.

ಅಗ್ನಿಯ ಕೆನ್ನಾಲಿಗೆಗೆ ಅನೇಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ 30 ವಾಹನಗಳೊಂದಿಗೆ ದಾವಿಸಿದ ಸಿಬ್ಬಂದಿ ಬೆಳಗ್ಗೆ 4.45ರಲ್ಲಿ ಬೆಂಕಿ ನಂದಿಸಿದರು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಅಗ್ನಿ ಆಕಸ್ಮಿಕದಲ್ಲಿ ಸಾವು-ನೋವು ಸಂಭವಿಸಿಲ್ಲ.

Facebook Comments