ಅಕ್ಕಿ ಅಂಗಡಿ ಮಾಲೀಕನ ಹತ್ಯೆ ಪ್ರಕರಣ : 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jail--014ಮಂಡ್ಯ,ಜ.11- ಅಕ್ಕಿ ಅಂಗಡಿ ಮಾಲೀಕ ರಫೀ ವುಲ್ಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಅಪರಾಧಿಗಳಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.  ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರಸಭೆಯ ಇಬ್ಬರು ಮಾಜಿ ಸದಸ್ಯರು ಸೇರಿದಂತೆ 9 ಅಪರಾಧಿಗಳಿಗೆ ನ್ಯಾಯಾಧೀಶರಾದ ರಾಜೇಶ್ವರಿ.ಎನ್ ಹೆಗಡೆ ಅವರು, ಜೀವಾವಧಿ ಶಿಕ್ಷೆ ಜೊತೆಗೆ ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಜಮೀನು ಜಾಗದ ವಿಚಾರದಲ್ಲಿ ಕಳೆದ 2010ರ ಜ.18ರಂದು ಅಕ್ಕಿ ಅಂಗಡಿ ಮಾಲೀಕ ರಫೀವುಲ್ಲಾ ಅವರ ಹತ್ಯೆ ನಡೆದಿತ್ತು. ಈ ಸಂಬಂಧ ಮಂಡ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿ ಹತ್ತು ಮಂದಿಯನ್ನು ಬಂಧಿಸಿ ವಿಚಾರಣೆ ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪೈಕಿ ಒಬ್ಬನನ್ನು ನಿರಪರಾಧಿ ಎಂದು ಹೈಕೋರ್ಟ್ ಖುಲಾಸಿಗೊಳಿಸಿತ್ತು.

Facebook Comments