ಜ. 25ಕ್ಕೆ ‘ಸೀತಾರಾಮ ಕಲ್ಯಾಣ’

ಈ ಸುದ್ದಿಯನ್ನು ಶೇರ್ ಮಾಡಿ

Seetarama-Kalyna

ಚಂದನ ವನದಲ್ಲಿ ತಾರೆಗಳ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಆ ನಿಟ್ಟಿನಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ, ಚನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಅರ್ಪಿಸುವ, ಅನಿತಾಕುಮಾರಸ್ವಾಮಿ ಅವರು ನಿರ್ಮಿಸಿರುವ ನಿಖಿಲ್ ಕುಮಾರ್ ಅವರು ನಾಯಕರಾಗಿ ನಟಿಸಿರುವ `ಸೀತಾರಾಮ ಕಲ್ಯಾಣ’ ಚಿತ್ರ ಜನವರಿ 25ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಬಹು ನಿರೀಕ್ಷಿತ, ಅದ್ದೂರಿ ತಾರಾಬಳಗದ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಊಟಿ, ಬಳ್ಳಾರಿ ಮುಂತಾದ ಕಡೆ 130ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಎ.ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸುನೀಲ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅನೂಪ್ ರುಬೆನ್ಸ್ ಅವರು ಸಂಗೀತ ನೀಡಿದ್ದಾರೆ. ಸ್ವಾಮಿ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

ಯುವರಾಜ ನಿಖಿಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಚಿತಾರಾಮ್. ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾಲೋಕೇಶ್, ಚಿಕ್ಕಣ್ಣ, ಆದಿತ್ಯ ಮೆನನ್, ಜ್ಯೋತಿ ರೈ, ನಯನ, ಶಿವರಾಜ್ ಕೆ.ಆರ್ ಪೇಟೆ, ಜೀವನ್, ವೀಣಾ ಪೊನ್ನಪ್ಪ, ರವಿ ಭಟ್, ಸವಿತಾ, ಗಿರೀಶ್ ಜತ್ತಿ, ಹರೀಶ್, ಸಂಜು ಬಸ್ಯ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಚಿತ್ರ ಇಡೀ ಕುಟುಂಬ ಸಮೇತ ನೋಡುಬಹುದಾದಂತಹ ಚಿತ್ರವಾಗಿದ್ದು, ಫ್ಯಾಮಿಲಿ ಸೆಂಟಿಮೆಂಟ್ ಲವ್ , ಆ್ಯಕ್ಷನ್ ಹಾಗೂ ಕಾಮಿಡಿ ಸೇರಿದಂತೆ ನವರಸಗಳೂ ತುಂಬಿದ್ದು, ಈ ಚಿತ್ರ ಬಹಳಷ್ಟು ಕುತೂಹಲ ಹುಟ್ಟುಹಾಕಿದೆ.

ಅದ್ಧೂರಿ ತಾರಾಗಣದ ಜೊತೆಗೆ ತಾಂತ್ರಿಕವಾಗಿಯೂ ಕೂಡ ಅಷ್ಟೇ ಅದ್ಭುತವಾಗಿ ಚಿತ್ರೀಕರಿಸಲಾಗಿದೆಯಂತೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಾಡುಗಳು ಕೇಳುಗರ ಗಮನ ಸೆಳೆದಿದ್ದು, ಈ ವರ್ಷದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಈ ಚಿತ್ರವೂ ಸೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆಯಂತೆ.

ಜಾಗ್ವಾರ್ ನಂತರ ಯುವರಾಜ ನಿಖಿಲ್ ಕುಮಾರ್ ಅಭಿನಯದ ಎರಡನೆ ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.
ಜಾಗ್ವಾರ್ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಮಿಂಚಿದ ನಿಖಿಲ್ ಈ ಚಿತ್ರದಲ್ಲಿ ಹಳ್ಳಿ ಸೊಡಗಿನ ಯುವಕನಾಗಿ, ಮನೆಯ ಮುದ್ದಿನ ಮಗನಾಗಿ ಬೆಳ್ಳಿ ಪರದೆ ಮೇಲೆ ಗಮನ ಸೆಳೆಯಲು ಸನ್ನದ್ಧರಾಗಿದ್ದಾರೆ.

ಈ ಚಿತ್ರವನ್ನು ಹೆಸರಾಂತ ವಿತರಕ ಜಯಣ್ಣ ಹಾಗೂ ಬೋಗೇಂದ್ರ ಅವರು ವಿತರಣೆ ಮಾಡಲು ಸಿದ್ಧರಾಗಿದ್ದಾರೆ. ಇನ್ನೇನಿದ್ದರೂ ಇದೇ ತಿಂಗಳು 25ರಂದು ಸೀತಾರಾಮ ಕಲ್ಯಾಣ ದರ್ಶನವನ್ನು ಪ್ರೇಕ್ಷಕರು ಮಾಡಬಹುದಾಗಿದೆ.

Facebook Comments