ಕಾವೇರಿಪುರ ವಾರ್ಡ್‍ನಲ್ಲಿ ಸಿಸಿ ಕ್ಯಾಮೆರಾಗಳಿಗೆ, ಆದರೆ ಅವುಗಳಿಗೆ ಕಣ್ಣಿಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

ccಬೆಂಗಳೂರು, ಜ.12- ಉಪಮೇಯರ್ ರಮಿಳಾ ಉಮಾಶಂಕರ್ ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಗೋಳು ಕೇಳೋರು ಯಾರೂ ಇಲ್ಲ.
ರಮಿಳಾ ಉಮಾಶಂಕರ್ ಅವರು ವಾರ್ಡ್‍ನಾದ್ಯಂತ ಲಕ್ಷಾಂತರ ರೂ. ವೆಚ್ಚ ಮಾಡಿ ಆಯಾಕಟ್ಟಿನ ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಅಳವಡಿಸಲಾದ ನೂರು ಸಿಸಿ ಕ್ಯಾಮೆರಾಗಳಿಗೆ ಸಂಪರ್ಕ ಕಲ್ಪಿಸುವ ಮುನ್ನವೇ ರಮಿಳಾ ಅವರು ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಸಮಸ್ಯೆಗಳು ದ್ವಿಗುಣಗೊಂಡಿವೆ.

ರಮೀಳಾ ನಿಧನರಾಗಿ 3 ತಿಂಗಳು ಕಳೆದರೂ ಇದುವರೆಗೂ ನೂರು ಸಿಸಿ ಕ್ಯಾಮೆರಾಗಳಿಗೆ ಇದುವರಗೂ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ವಾರ್ಡ್‍ನಲ್ಲಿ ಅಪಘಾತ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪಟ್ಟೇಗಾರ್ ಪಾಳ್ಯ ಮತ್ತು ಕಾವೇರಿಪುರದಲ್ಲಿರುವ ದೇವಸ್ಥಾನಗಳ ಹುಂಡಿ ಕಳವು ಮಾಡಲಾಗಿತ್ತು. ಅದೇ ರೀತಿ ಹಲವಾರು ಅಪಘಾತ ಪ್ರಕರಣಗಳು ಜರುಗಿದ್ದವು.

ಒಟ್ಟಾರೆ ವಾರ್ಡ್‍ನಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಬೇಕಾದರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಿಸಿ ಕ್ಯಾಮೆರಾಗಳಿಗೆ
ಸಂಪರ್ಕ ಕಲ್ಪಿಸಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ರಮಿಳಾ ಅವರ ನಿಧನದ ನಂತರ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಶಾಸಕರು ಕಾವೇರಿಪುರ ವಾರ್ಡ್‍ನ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Facebook Comments